ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss 12: ಈಸೀ ಆಗಿ ನಾಮಿನೇಟ್‌ ಆಗಬೇಕಿದ್ದ ಕಾವ್ಯ ಬಚಾವ್‌ ಆಗಿದ್ದು ಹೇಗೆ? ಗಿಲ್ಲಿ ನಟ ಬಾಯ್ಬಿಟ್ಟ ಸತ್ಯವಿದು!

BBK 12 Nominations: ಬಿಗ್‌ ಬಾಸ್‌ ಕನ್ನಡ ಸೀಸನ್ 12ರಲ್ಲಿ ಕಾವ್ಯ ಶೈವ ಈ ವಾರ ನಾಮಿನೇಷನ್‌ನಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮೂವರು ಸದಸ್ಯರು ಕಾವ್ಯ ಹೆಸರನ್ನು ಸೂಚಿಸಿದರೂ, ಗಿಲ್ಲಿ ನಟ ಅವುಗಳನ್ನು ಸೂಕ್ತ ಕಾರಣವಲ್ಲ ಎಂದು ತಿರಸ್ಕರಿಸಿದ್ದರು.

ಇಷ್ಟು ದಿನ ಬಿಗ್‌ ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ಆಗಲು ಸಾಧ್ಯವಾಗದೇ, ಅವರಿವರು ಕ್ಯಾಪ್ಟನ್‌ ಆದಾಗ, "ನಾನು ವೈಸ್‌ ಕ್ಯಾಪ್ಟನ್" ಎಂದು ಹೇಳಿಕೊಂಡು ಓಡಾಡುತ್ತಿದ್ದವರು ಗಿಲ್ಲಿ ನಟ. ಇದೀಗ ಯಾವುದೇ ಟಾಸ್ಕ್‌ ಆಡದೇ ಬರೀ ಪ್ರೀತಿಯಿಂದಲೇ ಕ್ಯಾಪ್ಟನ್ ಪಟ್ಟವನ್ನು ಗಿಲ್ಲಿ ಪಡೆದುಕೊಂಡಿದ್ದಾರೆ. ಆದರೆ, ಕ್ಯಾಪ್ಟನ್‌ ಆಗುತ್ತಿದ್ದಂತೆಯೇ, ಗಿಲ್ಲಿ ಫೇವರಿಸಂ ಮಾಡಿಬಿಟ್ರಾ ಎಂಬ ಆರೋಪ ಕೇಳಿಬಂದಿತ್ತು. ಅದು ಕಾವ್ಯ ವಿಚಾರದಲ್ಲಿ! ಅಷ್ಟಕ್ಕೂ ಆಗಿದ್ದೇನು?

ನಾಮಿನೇಷನ್‌ನಿಂದ ಬಚಾವ್‌ ಮಾಡಿದ ಆರೋಪ

ಈ ವಾರ ಮನೆಯ ಸದಸ್ಯರ ಕಾರಣಗಳನ್ನು ಕೇಳಿ, ಅದನ್ನು ಪರಾಮರ್ಶಿಸಿ, ಸದಸ್ಯರನ್ನು ನಾಮಿನೇಟ್‌ ಮಾಡುವ ಅಧಿಕಾರ ಗಿಲ್ಲಿ ನಟನ ಕೈಯಲ್ಲಿತ್ತು. ಆದರೆ ಕಾವ್ಯ ಹೆಸರನ್ನು ಮೂವರು ತೆಗೆದುಕೊಂಡು, ಕಾರಣಗಳನ್ನು ಕೊಟ್ಟರೂ, ಗಿಲ್ಲಿ ಮಾತ್ರ ಆ ಕಾರಣಗಳನ್ನು ಪರಿಗಣನೆ ತೆಗೆದುಕೊಳ್ಳದೇ ಕಾವ್ಯರನ್ನು ನಾಮಿನೇಟ್ ಮಾಡಲಿಲ್ಲ. ಇದು ಅಶ್ವಿನಿ, ಧನುಷ್‌, ರಾಶಿಕಾ ಶೆಟ್ಟಿ, ರಘು ಮುಂತಾದವರಿಗೆ ಬೇಸರ ಮಾಡಿಸಿದ್ದಂತೂ ಸುಳ್ಳಲ್ಲ.

Bigg Boss 12: ಗಿಲ್ಲಿ ನಟನ ಬಗ್ಗೆ ಒಬ್ಬರಿಗೆ ಅಸಮಾಧಾನ, ಮತ್ತೊಬ್ಬರಿಗೆ ಅಭಿಮಾನ; ವೈರಲ್‌ ಆಗ್ತಿದೆ ಎಲಿಮಿನೇಟ್‌ ಆದ ಮಾಳು - ಸೂರಜ್‌ ಹೇಳಿಕೆ

ಕಾವ್ಯರನ್ನು ನಾಮಿನೇಟ್‌ ಮಾಡಲೇಬೇಕು ಎಂದು ಮೂವರು ನಿರ್ಧರಿಸಿದರೂ, ಕೂಡ ಅವರ ಕಾರಣಗಳಿಂದಲೇ ಗಿಲ್ಲಿ ನಾಮಿನೇಟ್‌ ಮಾಡಲು ಹಿಂದೇಟು ಹಾಕಿದ್ರು ಮತ್ತು ಆ ಒಂದು ಕಾರಣವನ್ನು ಯಾರಾದರೂ ಒಬ್ಬರು ಹೇಳಿದ್ದರೂ ಕಾವ್ಯರನ್ನು ನಾಮಿನೇಟ್‌ ಮಾಡ್ತಿದ್ದೆ ಎಂದು ಗಿಲ್ಲಿಯೇ ಹೇಳಿಕೊಂಡಿದ್ದಾರೆ.

ಕಾವ್ಯಗೆ ನೇರವಾಗಿ ಹೇಳಿದ ಗಿಲ್ಲಿ

ನಾಮಿನೇಷನ್‌ ಪ್ರಕ್ರಿಯೆ ಮುಗಿದ ಬಳಿಕ ಗಾರ್ಡನ್‌ ಏರಿಯಾದಲ್ಲಿ ಕಾವ್ಯ ಜೊತೆ ಗಿಲ್ಲಿ ನಟ ಮಾತನಾಡುತ್ತಿದ್ದರು.

ಕಾವ್ಯ: ನಾಮಿನೇಷನ್‌ ಮಾಡುವುದು ನನಗೆ ಏನೂ ಅನ್ನಿಸುವುದಿಲ್ಲ. ಮಾಡಿದಾಗ, ನಮಗೂ ಒಂದು ಕ್ಲಾರಿಟಿ ಸಿಗುತ್ತದೆ. ಜನ ನಮ್ಮನ್ನು ಇಷ್ಟಪಡ್ತಾ ಇದ್ದಾರೆ, ಸೇವ್‌ ಮಾಡ್ತಿದ್ದಾರೆ ಎಂದು ಖುಷಿಯಾಗುತ್ತದೆ.

BBK 12: ಕ್ಯಾಪ್ಟನ್ ಆದಕೂಡಲೇ ವರಸೆ ಬದಲಿಸಿದ್ರಾ ಗಿಲ್ಲಿ ನಟ? ಮನೆಯವರ ಸಿಟ್ಟಿಗೆ ಕಾರಣವಾಯ್ತಾ ಮಾತಿನ ಮಲ್ಲನ ಅದೊಂದು ನಿರ್ಧಾರ?

ಗಿಲ್ಲಿ ನಟ: ನಾನು ಒಂದು ಮಾತು ಹೇಳ್ತಿನಿ ಕೇಳು, ಸೂಕ್ತ ಕಾರಣ ಎಂದರೆ ಏನು ಗೊತ್ತಾ? ಕಳೆದ ವಾರದ ಫ್ಯಾಮಿಲಿ ವೀಕ್‌ ಅಲ್ಲಿ ನಡೆದ ಘಟನೆಯನ್ನು ಮೆನ್ಷನ್‌ ಮಾಡಿದ್ರೆ, ನಿನ್ನ ಆರಾಮಾಗಿ ಹಿಡಿದು ಹಾಕಬಹುದಿತ್ತು.

ಕಾವ್ಯ: ಯಾರಾದರೂ ಒಬ್ಬರು ಅದನ್ನು ಹೇಳಿಯೇ ಹೇಳ್ತಾರೆ ಅಂತ ಗೆಸ್ ಮಾಡಿದ್ದೆ.

- ಕಾವ್ಯ ಅವರನ್ನು ಈ ವಾರ ಈಸೀ ಆಗಿ ನಾಮಿನೇಟ್‌ ಮಾಬಹುದಾಗಿತ್ತು. ಕಳೆದ ವಾರದ ನಡೆದ ಫ್ಯಾಮಿಲಿ ರೌಂಡ್‌ನಲ್ಲಿ ಕಾವ್ಯ ಮನೆಯವರಿಂದ ಬಿಗ್‌ ಬಾಸ್‌ನ ಮೂಲ ನಿಯಮ ಉಲ್ಲಂಘನೆ ಆಗಿತ್ತು. ಹಾಗಾಗಿ, ಕಾವ್ಯ ಅಮ್ಮ ಮತ್ತು ತಮ್ಮನನ್ನು ಕೂಡಲೇ ಹೊರಗೆ ಕಳುಹಿಸಲಾಗಿತ್ತು. ಈ ವಿಚಾರವನ್ನು ಯಾರಾದರೂ ನಾಮಿನೇಷನ್‌ಗೆ ಕಾರಣವಾಗಿ ನೀಡಿದ್ದರೆ, ಕಾವ್ಯ ಅವರನ್ನು ಗಿಲ್ಲಿ ನಾಮಿನೇಟ್‌ ಮಾಡುತ್ತಿದ್ದರು. ಅದನ್ನೀಗ ಅವರೇ ಹೇಳಿಕೊಂಡಿದ್ದಾರೆ.