ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sarkari Shale H 8 Movie: ರಾಘವೇಂದ್ರ ರಾಜ್‌ಕುಮಾರ್‌ ಸಿನಿಮಾದಲ್ಲಿ ಮಿಂಚಿದ ಗಿಲ್ಲಿ ನಟ; ಮತ್ತೊಂದು ಚಿತ್ರದಲ್ಲಿ ʻಬಿಗ್ ಬಾಸ್‌ʼ ಸ್ಟಾರ್‌!

Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಸಖತ್‌ ಸದ್ದು ಮಾಡುತ್ತಿರುವ ಗಿಲ್ಲಿ ನಟ, ಇದೀಗ ʻಸರ್ಕಾರಿ ಶಾಲೆ H 8ʼ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್ ಕೂಡ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಸದ್ಯ ಸಖತ್‌ ಸುದ್ದಿಯಾಗುತ್ತಿರುವುದು ಗಿಲ್ಲಿ ನಟ. ಈ ಬಾರಿಯ ವಿನ್ನರ್‌ ಕೂಡ ಗಿಲ್ಲಿ ನಟ ಎಂಬಷ್ಟರ ಮಟ್ಟಿಗೆ ಅವರು ಎಲ್ಲರ ಗಮನಸೆಳೆದಿದ್ದಾರೆ. ಈಚೆಗಷ್ಟೇ ಗಿಲ್ಲಿ ನಟ ಹೀರೋ ಆಗಿರುವ ಹೊಸ ಸಿನಿಮಾ ʻಸೂಪರ್‌ ಹಿಟ್‌ʼ ಘೋಷಣೆ ಆಗಿತ್ತು. ಬಹುತಾರಾಗಣದ ಈ ಚಿತ್ರದಲ್ಲಿ ಗಿಲ್ಲಿ ನಟ ಸಖತ್‌ ಹೈಲೈಟ್‌ ಆಗಿದ್ದಾರೆ. ಇದರ ಟೀಸರ್‌ ಎಲ್ಲರ ಗಮನಸೆಳೆದಿತ್ತು. ಇನ್ನು, ದರ್ಶನ್‌ ಅವರ ʻದಿ ಡೆವಿಲ್ʼ‌ ಸಿನಿಮಾದಲ್ಲಿಯೂ ಗಿಲ್ಲಿ ನಟಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಗಿಲ್ಲಿ ನಟ ಕಾಣಿಸಿಕೊಂಡಿರುವ ಮತ್ತೊಂದು ಸಿನಿಮಾದ ಘೋಷಣೆ ಆಗಿದೆ.

'ಸರ್ಕಾರಿ ಶಾಲೆ H 8' ಸಿನಿಮಾದಲ್ಲಿ ಗಿಲ್ಲಿ ನಟ

ಶೀರ್ಷಿಕೆಯಿಂದಲೇ ಕುತೂಹಲ ಹುಟ್ಟು ಹಾಕಿರುವ, ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ 'ಸರ್ಕಾರಿ ಶಾಲೆ H 8' ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ಗಿಲ್ಲಿ ನಟ ಪ್ರಮುಖ ಪಾತ್ರ ಮಾಡಿದ್ಧಾರೆ. ಈ ಚಿತ್ರಕ್ಕೆ ಗುಣ ಹರಿಯಬ್ಬೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗಿರಿಚಂದ್ರ ಪ್ರೊಡಕ್ಷನ್ಸ್ ಮೂಲಕ ತೇಜಸ್ವಿನಿ ಎಸ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಜೇತ್ ಮಂಜಯ್ಯ ಅವರ ಸಂಗೀತ ಸಂಯೋಜನೆಯ ಈ ಚಿತ್ರದಲ್ಲಿ 3 ಹಾಡುಗಳಿದ್ದು, ಹಾಸ್ಯನಟ ಶರಣ್ ಹಾಗೂ ಮೆಹಬೂಬ್ ಸಾಬ್ ಒಂದೊಂದು ಹಾಡನ್ನು ಹಾಡಿದ್ದಾರೆ.

The Devil Movie: `ಡೆವಿಲ್‌' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!

ಗಿಲ್ಲಿ ನಟನ ಊರಲ್ಲಿ ಪೋಸ್ಟರ್‌ ರಿಲೀಸ್‌

ವಿಶೇಷವೆಂದರೆ, ಈ ಸಿನಿಮಾದ ಮೊದಲ ಪೋಸ್ಟರ್‌ ಅನ್ನು ಗಿಲ್ಲಿ ನಟ ಅವರ ಊರಿನಲ್ಲಿ ರಿಲೀಸ್ ಮಾಡಲಾಗಿದೆ.‌ ಹೌದು, ಗಿಲ್ಲಿ ನಟ ಅವರ ಊರಾದ ಮಳವಳ್ಳಿ ತಾಲೂಕಿನ ದಡದಪುರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಗಿಲ್ಲಿ ನಟ ಓದಿದ ತಂದೆ ಮತ್ತು ತಾಯಿ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದರು. ಇದೇ ಶಾಲೆಯಲ್ಲಿ ಗಿಲ್ಲಿ ನಟ ಅವರು ಓದಿದ್ದು. "ಆರಂಭದಲ್ಲಿ ಕುತೂಹಲ ಕೆರಳಿಸುತ್ತ ಸಾಗುವ ಈ ಚಿತ್ರದ ಕಥೆ ಒಂದು ವಿಗ್ರಹದ ಮೇಲೆ ನಿಂತಿರುತ್ತದೆ. ಚಿತ್ರದ ಕಥೆ ನಾಲ್ಕು ಕಡೆ ಸಾಗುತ್ತದೆ. ಈ ಚಿತ್ರಕ್ಕೆ ಬೆಂಗಳೂರು, ಚಿತ್ರದುರ್ಗ, ಶಿರಾ, ಶಿವಮೊಗ್ಗ ಸುತ್ತಮುತ್ತ. ಚಿತ್ರೀಕರಣ ನಡೆಸಲಾಗಿದೆ" ಎನ್ನುತ್ತಾರೆ ನಿರ್ದೇಶಕರು.

ಈಗಾಗಲೇ 'ಸರ್ಕಾರಿ ಶಾಲೆ H 8' ಸಿನಿಮಾದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಹಾಗೂ ಸೆನ್ಸಾರ್ ಪ್ರಕ್ರಿಯೆ ಕೂಡ ಮುಗಿದಿದೆ. 2026ರ ಫೆಬ್ರವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ. ಚಿತ್ರದ ಹಾಡುಗಳಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ರವಿ ರಾಮದುರ್ಗ ಹಾಗೂ ವೀನಸ್ ಮೂರ್ತಿ ಅವರ ಛಾಯಾಗ್ರಹಣ ಮಾಡಿದ್ದು, ರವಿತೇಜ ಸಿ ಎಚ್ ಅವರ ಸಂಕಲನ ಈ ಚಿತ್ರಕ್ಕಿದೆ. ಈ ಚಿತ್ರದಲ್ಲಿ ಗಿಲ್ಲಿ ನಟನ ಜೊತೆಗೆ ಗುಣ ಹರಿಯಬ್ಬೆ ಮತ್ತು ಮೇಘಶ್ರೀ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Bigg Boss Kannada 12: ಕಾವು ಪಾಲಿಗೆ ಗಿಲ್ಲಿ ನಟ ಹಾವಂತೆ! ರಘು ತಿರುಗಿ ಬಿದ್ದಿದ್ದೇಕೆ?

ಈ ಚಿತ್ರದಲ್ಲಿ ರಾಘಣ್ಣ

ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್‌ ಅವರು ಕೂಡ 'ಸರ್ಕಾರಿ ಶಾಲೆ H 8' ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರ ಮಾಡಿರುವುದು ವಿಶೇಷ. ರಾಘವೇಂದ್ರ ರಾಜ್‌ಕುಮಾರ್ ಜೊತೆಗೆ ಸುಚೇಂದ್ರ ಪ್ರಸಾದ್, ಜಗಪ್ಪ, ನವಾಜ್, ಸುಶ್ಮಿತಾ ಜಗಪ್ಪ, ಕಡ್ಡಿಪುಡಿ ಚಂದ್ರು, ಜೋತಿರಾಜ್, ನಮ್ರತಾ ಮುಂತಾದವರು ನಟಿಸಿದ್ದಾರೆ.