ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ತುಂಬಾ ಆಪ್ತರಾದ ಇಬ್ಬರು ಸ್ಪರ್ಧಿಗಳೆಂದರೆ, ಅದು ಜಾಹ್ನವಿ ಮತ್ತು ಅಶ್ವಿನಿ ಗೌಡ. ಒಮ್ಮೊಮ್ಮೆ ಜಗಳ ಮಾಡಿಕೊಂಡರೂ ಇವರ ನಡುವಿನ ಬಾಂಡಿಂಗ್ ಕಮ್ಮಿ ಆಗಿರಲಿಲ್ಲ. ಆದರೆ ಅಶ್ವಿನಿ ಗೌಡ ಅವರ ಬಳಿ ತುಂಬಾ ಆಸ್ತಿ ಇದೆ, ಆ ಕಾರಣಕ್ಕೆ ಅಶ್ವಿನಿ ಜೊತೆ ಜಾಹ್ನವಿ ಫ್ರೆಂಡ್‌ಶಿಪ್ ಮಾಡಿದ್ದಾರೆ ಎಂಬ ಹೇಳಿಕೆಯನ್ನು ಧ್ರುವಂತ್ ನೀಡಿದ್ದರು. ಇದು ಬಹಳ ಚರ್ಚೆ ಆಗಿತ್ತು. ಇದೀಗ ಆ ಬಗ್ಗೆ ಜಾಹ್ನವಿ ಅವರು ಕ್ಲಾರಿಟಿ ನೀಡಿದ್ದಾರೆ.
ಧ್ರುವಂತ್ ಬಗ್ಗೆ ಜಾಹ್ನವಿ ಬೇಸರ
ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಜಾಹ್ನವಿ ಅವರು, ಧ್ರುವಂತ್ ಆರೋಪಗಳಿಗೆ ಉತ್ತರ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, "ಧ್ರುವಂತ್ ಏನೋ ಒಂದು ಮಾಡ್ತಾ ಇದ್ದಾನೆ. ಈ ಹಿಂದೆ ಫಿಟ್ಟಿಂಗ್ ಇಡೋಕೆ ಬರೋದು, ಅದು ಇದು ಮಾಡ್ತಿದ್ದ. ಈಗ ಈ ಥರದ ಸ್ಟೇಟ್‌ಮೆಂಟ್‌ಗಳು. ಒಟ್ನಲ್ಲಿ ನೇರವಾಗಿ ಅಂತೂ ಧ್ರುವಂತ್ ಮಾತಾಡ್ತಾನೆ. ಆದರೆ ಈ ಸ್ಟೇಟ್‌ಮೆಂಟ್ ಕೇಳಿದಾಗ, ಏನಪ್ಪ ಧ್ರುವಂತ್ ಮೈಂಡ್ ಸೆಟ್ ಇಷ್ಟೊಂದು ಚೀಪ್ ಅಂತ ಅನ್ನಿಸ್ತು" ಎಂದು ಜಾಹ್ನವಿ ಹೇಳಿದ್ದಾರೆ.
BBK 12: ಜಾಹ್ನವಿ-ಅಶ್ವಿನಿನ ಹತ್ತಿರ ಮಾಡ್ತಾ ಪತ್ರ? ಅಪ್ಪನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ
ಧ್ರುವಂತ್ ಮನಸ್ಥಿತಿ ಹಾಗೇ ಇದೆ
"ನಾವು ಹೇಗೆ ಇರುತ್ತೇವೋ, ಅದೇ ಥರ ನಾವು ಆಲೋಚಿಸುತ್ತೇವೆ ಅಂತಾರೆ. ಹಾಗೇ ಆಸ್ತಿಗೋಸ್ಕರ್ ಧ್ರುವಂತ್ ಫ್ರೆಂಡ್‌ಶಿಪ್ ಮಾಡ್ತಾರೆ ಅಂತ ಕಾಣ್ತದೆ. ಅದಕ್ಕೆ ಆ ರೀತಿ ಹೇಳಿಕೆ ನೀಡಿದೆ. ಧ್ರುವಂತ್ ಲೆಕ್ಕಾಚಾರ ಮಾಡಿ, ಆಸ್ತಿ ಇರುವವರನ್ನೇ ಫ್ರೆಂಡ್ ಮಾಡಿಕೊಳ್ತಾನೆ ಅಂತ ಕಾಣತ್ತೆ. ಅವರಿಗೆ ಬಹುಶಃ ಆಸ್ತಿ ಬರೆದುಕೊಟ್ಟಿರಬೇಕು. ನಮಗೂ ತುಂಬಾ ಜನ ರಿಚ್ ಫ್ರೆಂಡ್ಸ್ ಇದ್ದಾರೆ. ಆದರೆ ಅವರು ಯಾರು ಈ ರೀತಿ ನಮಗೆ ಆಸ್ತಿ ಬರೆದುಕೊಟ್ಟಿಲ್ಲ. (ಹ್ಹಹ್ಹಹ್ಹ) ಇದು ಅವನ ಮನಸ್ಥಿತಿ ಇರಬೇಕು. ಇದಕ್ಕೆ ಅಳಬೇಕೋ, ನಗಬೇಕೋ ಗೊತ್ತಾಗುತ್ತಿಲ್ಲ" ಎಂದು ಜಾಹ್ನವಿ ಹೇಳಿದ್ದಾರೆ.
ಜಾಹ್ನವಿ ಸಂದರ್ಶನ
ಜಾಹ್ನವಿ ಎಲಿಮಿನೇಟ್ ಆದಾಗ ಅತ್ತಿದ್ದ ಅಶ್ವಿನಿ
ಈ ವಾರ ಜಾಹ್ನವಿ ಅವರು ಎಲಿಮಿನೇಟ್ ಆದಾಗ ಅಶ್ವಿನಿ ಗೌಡ ಅವರು ಕಣ್ಣೀರಿಟ್ಟಿದ್ದರು. ಜಾಹ್ನವಿ ಕೂಡ ಬೇಸರ ಮಾಡಿಕೊಂಡೇ ಮನೆಯಿಂದ ಹೊರಬಂದರು. ಸ್ಪರ್ಧಿಗಳು ಯಾವುದೇ ರಿಯಾಕ್ಷನ್ ನೀಡುವಂತೆ ಇರಲಿಲ್ಲ. ಹಾಗಾಗಿ, ಜಾಹ್ವನಿ ಅವರು ಅಳುತ್ತಲೇ ಅಶ್ವಿನಿ ಗೌಡ ಅವರನ್ನು ತಬ್ಬಿಕೊಂಡು ಸಮಾಧಾನ ಮಾಡಿದ್ದರು. ಕೊನೇ ಕ್ಷಣದಲ್ಲಿ ಒಂದು ವಿದಾಯ ಹೇಳುವುದಕ್ಕೂ ಆಗಲಿಲ್ಲವಲ್ಲ ಎಂದು ಅಶ್ವಿನಿ ಗೌಡ ಕೂಡ ಬೇಸರ ಮಾಡಿಕೊಂಡಿದ್ದರು.