ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಗಿಲ್ಲಿ ಬಿಗ್‌ ಬಾಸ್‌ ಗೆಲ್ಲೋಕೆ ನಂದು ಕ್ರೆಡಿಟ್‌ ಇದೆ, ಅವ್ನಂದ್ರೆ ನಮಗೂ ತುಂಬಾ ಇಷ್ಟʼ; ಹೀರೋ ಆಗ್ತಿರುವ ಪಳಾರ್‌ಗೆ ವಿಶ್‌ ಮಾಡಿದ ಕರಿಬಸಪ್ಪ

ʻಬಿಗ್ ಬಾಸ್ʼ ಕನ್ನಡ ಸೀಸನ್ 12ರ ವಿನ್ನರ್ 'ಗಿಲ್ಲಿ' ನಟ ಅವರು 'ಪಳಾರ್' ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಈ ವೇಳೆ ಕರಿಬಸಪ್ಪ ಶುಭ ಹಾರೈಸಿದ್ದಾರೆ. ಗಿಲ್ಲಿ ಗೆಲುವಿನಲ್ಲಿ ತಮ್ಮದೂ ಕ್ರೆಡಿಟ್ ಇದೆ ಎಂದಿರುವ ಕರಿಬಸಪ್ಪ, "ಗಿಲ್ಲಿ ಒಳ್ಳೆ ಮನುಷ್ಯ. ನಮಗೆ ಗಿಲ್ಲಿ ಅಂದ್ರೆ ಬಹಳ ಇಷ್ಟ" ಎಂದು ಹೇಳಿಕೊಂಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಸ್ಪರ್ಧಿಯಾಗಿದ್ದ ಗಿಲ್ಲಿ ನಟ ಅವರು ವಿನ್ನರ್‌ ಆಗಿ, ಇದೀಗ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಪಳಾರ್‌ ಎಂಬ ಸಿನಿಮಾದ ಮೂಲಕ ಹೀರೋ ಕೂಡ ಆಗಿದ್ದಾರೆ. ಸದ್ಯ ಅವರೊಂದಿಗೆ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದ ಕರಿಬಸಪ್ಪ ಅವರು ಗಿಲ್ಲಿ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. "ಗಿಲ್ಲಿ ಒಳ್ಳೆ ಮನುಷ್ಯ. ನಮಗೆ ಗಿಲ್ಲಿ ಅಂದ್ರೆ ಬಹಳ ಇಷ್ಟ" ಎಂದು ಹೇಳಿಕೊಂಡಿದ್ದಾರೆ. ಹೀರೋ ಆಗುತ್ತಿರುವ ಗಿಲ್ಲಿಗೆ ವಿಶ್‌ ಮಾಡಿದ್ದಾರೆ.

ನಾವೆಲ್ಲಾ ಸ್ಪರ್ಧಿಗಳಾಗಿದ್ದೆವು, ಅಲ್ಲಿ ಗಿಲ್ಲಿ ಗೆದ್ದ!

"ಬಹಳ ಖುಷಿಯಾಗುತ್ತೆ. ಒಂದು ಬಿಗ್ ಬಾಸ್ ಶೋನಿಂದ ಇಷ್ಟರ ಮಟ್ಟಿಗೆ ಫೇಮಸ್ ಆಗಿರೋದು ನಮಗೆ ತುಂಬಾ ಹೆಮ್ಮೆ ತರುವಂತಹ ವಿಚಾರ. ಎಲ್ಲಿ ನೋಡಿದ್ರೂ ಈಗ ಗಿಲ್ಲಿ ಗಿಲ್ಲಿ ಅಂತಾರೆ. ನಾವು ಕೂಡ ನಮ್ಮ ಗಿಲ್ಲಿ ಜೊತೆಯಲ್ಲಿ ಒಬ್ಬ ಸ್ಪರ್ಧಿಯಾಗಿದ್ದೆವು ಅನ್ನೋದಕ್ಕೆ ಹೆಮ್ಮೆ ಪಡ್ತೀನಿ. ಯಾಕಂದ್ರೆ ನಾವೆಲ್ಲಾ ಒಂದು ಅವತ್ತಿನ ದಿನ ಸ್ಪರ್ಧಿಯಾಗಿ ಇರೋದ್ರಿಂದ ಅವರು ಗೆದ್ದರು. ಅವರು ಗೆದ್ದಿರೋದ್ರಿಂದ ಇವತ್ತಿನ ದಿನ ಫುಲ್ ಫೇಮಸ್ ಆಗಿ, ಹೆಸರು ಮಾಡಿ ಈಗ ಸಿನಿಮಾ ಕೂಡ ಮಾಡ್ತಾ ಇದ್ದಾರೆ. ಅವರಿಗೆಲ್ಲಾ ಆಲ್ ದಿ ಬೆಸ್ಟ್ ಅಂತ ಹೇಳ್ತೀನಿ. ಎಲ್ಲೋ ಒಂದು ಕಡೆಗೆ ಅವರ ಗೆಲುವಿನ ಕ್ರೆಡಿಟ್ ನನಗೂ ಕೂಡ ಸಿಗುತ್ತೆ. ಯಾಕಂದ್ರೆ ಆ ತಂಡದಲ್ಲಿ ನಾನು ಕೂಡ ಒಬ್ಬ ಸ್ಪರ್ಧಿಯಾಗಿದ್ದೆ" ಎಂದು ಕರಿಬಸಪ್ಪ ಹೇಳಿದ್ದಾರೆ.

Suraj Singh: ಗಿಲ್ಲಿ-ಅಶ್ವಿನಿ ಫೈಟ್ ಬಗ್ಗೆ ಸೂರಜ್ ನೇರ ಮಾತು!

ಮನಸ್ಸಿನಿಂದ ಮಾತಾಡುವ ವ್ಯಕ್ತಿ

ಗಿಲ್ಲಿಗೆ ಒಳ್ಳೇದಾಗಲಿ. ಭವಿಷ್ಯದಲ್ಲಿ ದೇವರು ಒಳ್ಳೆ ಭವಿಷ್ಯ ಕರುಣಿಸಿ, ನಮ್ಮ ದೇಶದಲ್ಲೇ ದೊಡ್ಡ ಸೂಪರ್ ಸ್ಟಾರ್ ಆಗಿ ಮೆರೆಯಲಿ ಅಂತ ಅವರಿಗೆ ಹಾರೈಸ್ತೀನಿ. ನಿಷ್ಕಲ್ಮಶ ಮನಸ್ಸು. ಯಾವುದೇ ತರಹದ ಅಹಂಕಾರ ಏನೂ ಇಲ್ಲ. ಮನಸ್ಸಿನಿಂದ ನೇರವಾಗಿ ಮಾತಾಡುವ ವ್ಯಕ್ತಿ ಅವರು. ಈಚೆಗೆ ಬಿಗ್ ಬಾಸ್ ದೊಡ್ಡಮನೆ ಹಬ್ಬ ಅಂತ ಒಂದು ಇವೆಂಟ್‌ ಆಯ್ತು. ಅಲ್ಲಿ ಗಿಲ್ಲಿ ಸಿಕ್ಕಾಗ ಮಾತಾಡಿದ್ದೆ" ಎಂದು ಕರಿಬಸಪ್ಪ ಅವರು ಹೇಳಿದ್ದಾರೆ.

'ಗಿಲ್ಲಿ ಬಿಗ್ ಬಾಸ್ ಗೆಲ್ಲೋಕೆ ನಂದೂ ಕೂಡ ಕ್ರೆಡಿಟ್ಸ್ ಇದೆ!'



ಕ್ವಾಟ್ಲೆ ಕಿಚನ್‌ ಸ್ಪರ್ಧಿಯಾಗಿರುವ ಕರಿಬಸಪ್ಪ

"ನನಗೆ ಸಿಕ್ಕಾಪಟ್ಟೆ ಖುಷಿಯಾಗ್ತಾ ಇದೆ. ಈ 'ಕ್ವಾಟ್ಲೆ ಕಿಚನ್'ನಲ್ಲಿ ನಾನೊಬ್ಬ ಕ್ವಾಟ್ಲೆ ಸ್ಪರ್ಧೆಯಾಗಿ ಪಾರ್ಟಿಸಿಪೇಟ್ ಮಾಡ್ತೀನಿ ಅಂತ ನಾನು ನಿರೀಕ್ಷೆ ಮಾಡಿರಲಿಲ್ಲ, ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಯಾಕಂದ್ರೆ ನಾನು ಬಿಗ್ ಬಾಸ್‌ನಿಂದ ಬೇಗ ಹೊರಬಂದೆ. ಒಂದು ವಾರ ಇದ್ದು ಬಂದಿರೋದ್ರಿಂದ ಇನ್ನೇನು ನಮಗೆ ಇಲ್ಲಿ ಅವಕಾಶಗಳು ಸಿಗಲಾರದು ಅಂತ ನನ್ನಲ್ಲೂ ಒಂದು ಡೌಟ್ ಇತ್ತು. ಹೀಗಿರುವಾಗ ಇಲ್ಲಿ ಅವಕಾಶ ಸಿಕ್ಕಿದೆ. ನನಗೆ ಒಂಥರಾ ಹಸಿವಿತ್ತು. ಬಿಗ್ ಬಾಸ್ ಮನೆಯಲ್ಲಿ ಏನೂ ಮಾಡೋಕೆ ಆಗ್ಲಿಲ್ಲವಲ್ಲ ಅನ್ನೋ ಒಂದು ಫೀಲಿಂಗ್ ಇತ್ತು, ಇದೀಗ ಈ ಶೋನಿಂದ ಆ ಹಸಿವು ನೀಗಿದೆ" ಎಂದು ಕರಿಬಸಪ್ಪ ಅವರು ಹೇಳುತ್ತಾರೆ.