ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಶೈವ ಸ್ಟ್ರಾಂಗ್ ಸ್ಪರ್ಧಿಯಾಗಿ ಮಿಂಚುತ್ತಿದ್ದಾರೆ. ಆದರೆ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವಿಟಿಯನ್ನು ಹಂಚಲಾಗುತ್ತಿದೆ ಎಂಬ ಆರೋಪವನ್ನು ಅವರ ಸಹೋದರ ಕಾರ್ತಿಕ್ ಮಾಡಿದ್ದಾರೆ. ಆ ಬಗ್ಗೆ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋದ ಆರಂಭದಲ್ಲಿ, "ಕಾವ್ಯ ಪರವಾಗಿ ನಾನು ಕ್ಷಮೆ ಕೇಳುತ್ತೇನೆ, ದಯವಿಟ್ಟು ನೆಗೆಟಿವ್ ಸುದ್ದಿ ಹಬ್ಬಿಸಬೇಡಿ" ಎಂದು ಮೃದುವಾಗಿ ಮಾತನಾಡುವ ಕಾರ್ತಿಕ್, ತಕ್ಷಣವೇ ತಮ್ಮ ಮಾತಿನ ಶೈಲಿಯನ್ನು ಬದಲಾಯಿಸಿಕೊಂಡು ಹಲವರಿಗೆ ಎಚ್ಚರಿಕೆ ನೀಡಿದ್ದಾರೆ.
"ನಾನು ಕ್ಷಮೆ ಕೇಳ್ತಿನಾ? ಚಾನ್ಸೇ ಇಲ್ಲ"!
"ನನಗೆ ತುಂಬಾ ಜನ ಸಂದೇಶ ಕಳಿಸ್ತಾ ಇದ್ದೀರಿ. ಯಾಕೆ ಏನು ಪೋಸ್ಟ್ ಮಾಡ್ತಿಲ್ಲ ಅಂತ ಕೇಳ್ತಾ ಇದ್ದೀರಿ. ಆದರೆ, ಕಾವ್ಯ ಬಗ್ಗೆ ತುಂಬಾ ನೆಗೆಟಿವಿಟಿ ಪೋಸ್ಟ್ ಮಾಡ್ತಿದ್ದಾರೆ. ನಿಮ್ಮೆಲ್ಲರ ಹತ್ರ ನಾನು ಕೇಳಿಕೊಳ್ಳುವುದು ಏನೆಂದರೆ, ಪ್ಲೀಸ್ ಯಾರು ಕೂಡ ಕಾವ್ಯ ಬಗ್ಗೆ ನೆಗೆಟಿವಿಟಿ ಹರಡಬೇಡಿ. ಬೇಕಾದರೆ ಕಾವ್ಯ ಪರವಾಗಿ ನಾನು ಕ್ಷಮೆ ಕೇಳುತ್ತೇನೆ.." ಎಂದು ಹೇಳುವ ಕಾರ್ತಿಕ್, ಮುಂದುವರಿದು "ನಾನು ಕ್ಷಮೆ ಕೇಳ್ತಿನಿ ಅಂತ ಅಂದುಕೊಂಡಿದ್ದೀರಾ? ಚಾನ್ಸೇ ಇಲ್ಲ" ಎಂದು ಖಡಕ್ ಆಗಿ ಟ್ವಿಸ್ಟ್ ಕೊಟ್ಟಿದ್ದಾರೆ ಕಾರ್ತಿಕ್.
Bigg Boss Kannada 12: ಕಾವ್ಯ ಆದ ಗಿಲ್ಲಿ, ಗಿಲ್ಲಿ ಆದ ಕಾವ್ಯ ! ಬಿಗ್ಬಾಸ್ ಮನೆಯಲ್ಲಿ ನಗುವಿನ ಹಬ್ಬ
ಕಾರ್ತಿಕ್ ಹಂಚಿಕೊಂಡಿರುವ ವಿಡಿಯೋ ಪೋಸ್ಟ್
"ನೋಡೋದಕ್ಕೆ ತುಂಬಾ ಇದೆ" ಎಂದು ಕಾರ್ತಿಕ್
"ಅಲಾ, ಬಿಗ್ ಬಾಸ್ ಶುರುವಾಗಿ ಈಗ 50 ದಿನ ಆಗಿದೆ ಅಷ್ಟೇ. ಇಷ್ಟು ಬೇಗ ಕಾರಣವಿಲ್ಲದೆ ನೀವು ನೆಗೆಟಿವ್ ಹಬ್ಬಿಸುತ್ತಿದ್ದೀರಾ ಎಂದರೆ, ನಮ್ ಕಾವು ಯಾವ ರೇಂಜ್‌ಗೆ ಭಯ ಹುಟ್ಟಿಸಿರಬಹುದು, ಅಲ್ವಾ? ಪಿಆರ್ ಟೀಮ್‌ಗಳು ನೆಗೆಟಿವ್ ಹಂಚ್ತಿದ್ದೀರಿ. ನಮ್ಮ ಕಾವ್ಯ ಟಫ್ ಸ್ಪರ್ಧಿ ಅಲ್ವಾ? ಹಿಂಗೆ ತುಳಿದುಬಿಡೋಣ ಎಂದುಕೊಂಡಿದ್ದೀರಾ ಅಲ್ವಾ? ಅದೆಲ್ಲಾ ನಡೆಯೋದಿಲ್ಲ. ಇನ್ನು ನೋಡೋಕೆ ತುಂಬಾ ಇದೆ" ಎಂದು ಕಾರ್ತಿಕ್ ಹೇಳಿದ್ದಾರೆ.
ಪಿಆರ್ ಟೀಮ್‌ಗಳು ಇರುವುದು ನಿಜವೇ?
"ಕಾವ್ಯ ಬಗ್ಗೆ ನೆಗೆಟಿವಿಟಿ ಹಂಚುತ್ತಿರುವ ಪಿಆರ್ ಟೀಮ್‌ಗಳಿಗೆ ಹೇಳುತ್ತಿರುವುದು ಒಂದೇ ಮಾತು. ಫಿನಾಲೆ ಟೈಮ್‌ನಲ್ಲಿ ಸುದೀಪ್ ಸರ್ ಅವರ ಒಂದು ಕೈಯಲ್ಲಿ ನಮ್ಮ ಕಾವ್ಯ ಕೈ ಇದ್ದೇ ಇರುತ್ತದೆ, ಬರೆದಿಟ್ಟುಕೊಳ್ಳಿ.." ಎಂದು ಕಾರ್ತಿಕ್ ಎಚ್ಚರಿಕೆ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅಲ್ಲದೆ, ಕಾವ್ಯ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವಿಟಿ ಹಂಚುತ್ತಿದ್ದಾರಾ? ಅದಕ್ಕಾಗಿ ಬೇರೆ ಸ್ಪರ್ಧಿಗಳು ಪಿಆರ್ ಟೀಮ್‌ಗಳನ್ನು ನೇಮಿಸಿಕೊಂಡಿದ್ದಾರಾ ಎಂಬೆಲ್ಲಾ ಅನುಮಾನಗಳು ಹುಟ್ಟಿಕೊಂಡಿವೆ. ಈ ಹಿಂದೆಯೂ ಕೂಡ ಸ್ಪರ್ಧಿಗಳ ಪರವಾಗಿ ಪಿಆರ್ ಟೀಮ್‌ಗಳು ಕೆಲಸ ಮಾಡುತ್ತಿವೆ ಎಂಬ ಮಾತುಗಳು ಕೇಳಿಬಂದಿದ್ದವು.