ಬಿಗ್ ಬಾಸ್ ( Bigg Boss Kannada 12) ಶುರುವಾದಾಗಿನಿಂದ ಕಾವ್ಯ (Kavya and Gilli) ಹಾಗೂ ಗಿಲ್ಲಿ ಜೋಡಿ ವೀಕ್ಷಕರನ್ನ ಸೆಳೆದಿತ್ತು. ಆದರೀಗ ಗಿಲ್ಲಿ ಮಾತಿಗಳಿಂದ ಕಾವ್ಯ ಕಣ್ಣೀರಿಡುತ್ತಿದ್ದಾರೆ. ಗಿಲ್ಲಿ ಕೂಡ ತಮ್ಮ ವಾದಗಳಿಂದ ಇಡೀ ಮನೆಯಲ್ಲಿ ವಿಲನ್ ಆಗುತ್ತಿದ್ದಾರೆ. ಗಿಲ್ಲಿ ಪ್ರಮುಖವಾಗಿ ಅಶ್ವಿನಿ ಮತ್ತು ಜಾನ್ವಿಯನ್ನು (Ashwini Gowda) ಎದುರು ಹಾಕಿಕೊಂಡಿದ್ದಾರೆ. ಈ ಬಗ್ಗೆ ಕಾವ್ಯಾ, ಗಿಲ್ಲಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದಾರೆ ಆದರೆ ಗಿಲ್ಲಿಗೆ ಅದು ಅರ್ಥವಾಗಿಲ್ಲ.
ಬಿಗ್ ಬಾಸ್ ಶುರುವಾದ ಆರಂಭದಲ್ಲಿ ಗಿಲ್ಲಿ ತಮ್ಮ ತಮಾಷೆ ಮೂಲಕವೇ ವೀಕ್ಷಕರ ಗಮನ ಸೆಳೆದಿದ್ದರು. ರಕ್ಷಿತಾ ಇನ್ನೂ ಕೆಲವರ ಪರವಾಗಿ ಸ್ಟ್ಯಾಂಡ್ ತೆಗೆದುಕೊಂಡಿದ್ದರು. ಕಿಚ್ಚನಿಂದ ಚಪ್ಪಾಳೆ ಸಹ ತೆಗೆದುಕೊಂಡರು. ಆದರೀಗ ಗಿಲ್ಲಿ ಅವರ ಟ್ರ್ಯಾಕ್ ಬದಲಾಗಿದೆ.
ಇದನ್ನೂ ಓದಿ: Bigg Boss Kannada 12: ಬರ್ತ್‌ಡೇ ಪಾರ್ಟಿಗೆ ಗಿಲ್ಲಿನ ಮಾತ್ರ ಸೇರಿಸಲ್ಲ! ಹೀಗ್ಯಾಕೆ ಅಂದ್ರು ಡಾಗ್ ಸತೀಶ್?
ಗೇಲಿ ಮಾಡುತ್ತಿರುವ ಗಿಲ್ಲಿ
ಸದ್ಯ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ, ಗಿಲ್ಲಿ, ರಘು, ಅಶ್ವಿನಿ ಮಧ್ಯೆ ಪೈಪೋಟಿ ನಡೆಯುತ್ತಿದೆ. ಆದರೆ ಗಿಲ್ಲಿ ನಿನ್ನೆಯ ಎಪಿಸೋಡ್‌ನಲ್ಲಿ ಅಶ್ವಿನಿ ಹಾಗೂ ಜಾಹ್ನವಿ ಅವರ ಕಾಲೆಳೆದಿದ್ದಾರೆ. ಗಿಲ್ಲಿ ನಟ ಬಿಗ್ ಬಾಸ್ ಮನೆಯ ಸದಸ್ಯರನ್ನು ಗೇಲಿ ಮಾಡುತ್ತಿರುವುದು ಯಾರಿಗೂ ಹಿಡಿಸುತ್ತಿಲ್ಲ.
ಟಾಸ್ಕ್ ನಡೆಯುವಾಗ ಗೆಳೆಯರಾದ ಧನುಶ್ ಮತ್ತು ಅಭಿ ಮೇಲೂ ಗಿಲ್ಲಿ ಜಗಳ ಮಾಡಿದರು. ಇಬ್ಬರೂ ಸೇರಿ ಸಮಾಧಾನದಿಂದಲೇ ಗಿಲ್ಲಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದರು. ಆದರೂ ಗಿಲ್ಲಿ ವಾದ ಮುಂದುವರಿಸಿದರು. ಜಾನ್ವಿಗೆ ವಯಸ್ಸೆಷ್ಟು ಎಂದು ಹಿಯಾಳಿಸುವುದು, ಅಶ್ವಿನಿಗೆ ಹಿಯಾಳಿಸುವುದು, ಈ ರೀತಿ ಮನೆಯಲ್ಲಿ ಮಾಡಿದ್ದಾರೆ.
ಅರ್ಥ ಮಾಡಿಸಲು ಪ್ರಯತ್ನಿಸಿದ ಕಾವ್ಯ
ಇನ್ನು ಗಿಲ್ಲಿಯ ಈ ನಡವಳಿಕೆ ಬಗ್ಗೆ ಕಾವ್ಯ ಅವರು ಅರ್ಥ ಮಾಡಿಸಲು ನೋಡಿದರು. ಆದರೆ ಗಿಲ್ಲಿ ಮಾತ್ರ ಅರ್ಥ ಮಾಡಿಕೊಳ್ಳಲು ನೋಡಿಲ್ಲ. ಈಗೀಗ ಕಾವ್ಯ ಮತ್ತು ಗಿಲ್ಲಿ ನಡುವೆಯೂ ಭಿನ್ನಾಭಿಪ್ರಾಯ ಬರುತ್ತಿದೆ. ಗಿಲ್ಲಿಯ ವರ್ತನೆಗೆ ಅಶ್ವಿನಿ ಗೌಡ ಅವರು ಕಣ್ಣೀರಿಟ್ಟಿದ್ದಾರೆ.
ಅಷ್ಟೇ ಅಲ್ಲ ಎರಡು ತಂಡಗಳನ್ನಾಗಿ ಮಾಡಿದ್ದರು ಬಿಗ್ ಬಾಸ್. ಗಿಲ್ಲಿ ತಂಡ ಎರಡು ಗೇಮ್‌ನಲ್ಲಿ ಸೋತಿದೆ. ಗೆದ್ದ ತಂಡದ ಬಗ್ಗೆ ಅನೌನ್ಸ್ ಮಾಡದಯೇ ಗಿಲ್ಲಿ ಸತಾಯಿಸಿದ್ದರು. ಇದಾದ ಬಳಿಕ ಕಾವ್ಯ ಅವರು ಗಿಲ್ಲಿ ತಪ್ಪನ್ನು ಮನವರಿಕೆ ಮಾಡಲು ನೋಡಿದರು. ಆದರೂ ತನ್ನದೇ ಸರಿ ಎಂದು ಗಿಲ್ಲಿ ವಾದಿಸಿದರು.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಮಾಡಿದ ಆ ಒಂದು ತಪ್ಪಿಂದ ಇಡೀ ಮನೆಗೆ ಶಿಕ್ಷೆ!
ಕಾವ್ಯಾ ಹಲವು ಬಾರಿ ಗಿಲ್ಲಿಗೆ ಅವರ ತಪ್ಪನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡಿದರು. ಕಣ್ಣೀರು ಸಹ ಹಾಕಿದರು. ಗಿಲ್ಲಿ ನಟ ಇವೆಲ್ಲವನ್ನೂ ಕೇಳಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಇದರಿಂದ ನೊಂದುಕೊಂಡ ಕಾವ್ಯಾ ಬೇಸರ ಪಟ್ಟುಕೊಂಡು ಅಲ್ಲಿಂದ ಹೊರ ನೆಡೆದು ಬೆಡ್ ರೂಮ್‌ಗೆ ಬಂದಿದ್ದರು. ಆ ಬಳಿಕ ಕಾವ್ಯ ಅವರಿಗೆ ಗಿಲ್ಲಿ ಕ್ಷಮೆ ಕೇಳಿದರೂ ಸರಿ ಹೋಗಿಲ್ಲ.