ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಸ್ಪರ್ಧಿಗಳಿಗೆ ಬಿಗ್‌ ಸರ್‌ಪ್ರೈಸ್‌ ಕೊಟ್ಟ ಕಿಚ್ಚ!

Sudeep: ಬಿಗ್‌ ಬಾಸ್‌ ಕನ್ನಡ 12ರ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಅಶ್ವಿನಿ ಗೌಡ ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ ತಲುಪಿದ್ದಾರೆ. ಫಿನಾಲೆ ಸಮೀಪ ಇರುವಾದ ಸುದೀಪ್‌ ಅವರು ಸ್ಪರ್ಧಿಗಳಿಗೆ ಸ್ಪೆಷಲ್‌ ಊಟವನ್ನ ಕಳುಹಿಸಿ ಕೊಡುತ್ತಾರೆ. ಇದು ಪ್ರತೀ ಸೀಸನ್‌ನಿಂದ ನಡೆದುಕೊಂಡು ಬಂದಿದೆ. ಈ ಬಾರಿ ಊಟದ ಜೊತೆ ಲೆಟರ್‌ ಕೂಡ ಕಳುಹಿಸಿ ಕೊಟ್ಟಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಕನ್ನಡ 12ರ (Bigg Boss Kannada 12) ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಅಶ್ವಿನಿ ಗೌಡ (Ashwini Gowda), ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ ತಲುಪಿದ್ದಾರೆ. ಫಿನಾಲೆ ಸಮೀಪ ಇರುವಾದ ಸುದೀಪ್‌ ಅವರು ಸ್ಪರ್ಧಿಗಳಿಗೆ ಸ್ಪೆಷಲ್‌ ಊಟವನ್ನ ಕಳುಹಿಸಿ ಕೊಡುತ್ತಾರೆ. ಇದು ಪ್ರತೀ ಸೀಸನ್‌ನಿಂದ ನಡೆದುಕೊಂಡು ಬಂದಿದೆ. ಈ ಬಾರಿ ಊಟದ ಜೊತೆ ಲೆಟರ್‌ (Letter) ಕೂಡ ಕಳುಹಿಸಿ ಕೊಟ್ಟಿದ್ದಾರೆ.

ಒಂದು ಟ್ವಿಸ್ಟ್‌

ಬಿಗ್‌ ಬಾಸ್‌ ಪ್ರತಿ ಸೀಸನ್‌ಲ್ಲಿಯೂ ಸ್ಪರ್ಧಿಗಳ ಇಷ್ಟದ ತಿನಿಸುಗಳನ್ನು ಮೊದಲೇ ತಿಳಿದುಕೊಂಡು ಅವರ ಇಷ್ಟಕ್ಕೆ ಅನುಗುಣವಾಗಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಡುಗೆಗಳನ್ನು ಮಾಡಿ ಕಿಚ್ಚ ಕಳಿಸುತ್ತಾರೆ. ಈ ವಾರ ನನ್ನ ಕಡೆಯಿಂದ ನಿಮಗೆಲ್ಲ ಒಂದು ಒಳ್ಳೆಯ ಊಟ ಇದೆ ಎಂದಿದ್ದರು. ಅದರಂತೆ ಕಳುಹಿಸಿ ಕೊಟ್ಟಿದ್ದಾರೆ. ಆದ್ರೆ ಬಾರಿ ಒಂದು ಟ್ವಿಸ್ಟ್‌ ಇದೆ. ಪ್ರತಿ ಸೀಸನ್‌ನಲ್ಲಿ ಸುದೀಪ್‌ ಅವರು ತಾವೇ ಸ್ವತಃ ಅಡುಗೆ ಮಾಡಿ ಸ್ಪರ್ಧಿಗಳಿಗೆ ಕಳುಹಿಸಿ ಕೊಡುತ್ತಾರೆ. ಆದರೆ ಈ ಬಾರಿ ಅವರು ಮಾಡಿದಂತೆ ಇಲ್ಲ.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಮನೆಗೆ ʻರಾಣಿʼ ಎಂಟ್ರಿ! ಅಶ್ವಿನಿ ಗೌಡ ಭಾವುಕ



ಸುದೀಪ್ ಅಡುಗೆ ಮಾಡುವ ವಿಡಿಯೋವನ್ನು ಸಹ ಬಿಗ್​​ಬಾಸ್ ಶೋನಲ್ಲಿ ತೋರಿಸಲಾಗುತ್ತದೆ. ಆದರೆ ಈ ಬಾರಿ ಅದೆಲ್ಲ ಇಲ್ಲ. ಸುದೀಪ್ ಅವರು ಊಟವನ್ನು ಕಳಿಸಿಕೊಟ್ಟಿದ್ದಾರೆ ಆದರೆ ಅವರೇ ಖುದ್ದು ಅಡುಗೆ ಮಾಡಿಲ್ಲ. ಹಾಗೇ ತಾವೇ ಬರೆದ ಲೆಟರ್‌ ಕೂಡ ಕಳುಹಿಸಿ ಕೊಟ್ಟಿದ್ದಾರೆ.

ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಗಿಲ್ಲ ನಟ, ಧನುಷ್, ಮ್ಯೂಟೆಂಟ್ ರಘು ಮತ್ತು ಕಾವ್ಯಾ ಶೈವ ಅವರು ಈಗ ಬಿಗ್ ಬಾಸ್ ಫಿನಾಲೆಗೆ ಎಂಟ್ರಿ ನೀಡಿದ್ದಾರೆ. ಪೈಪೋಟಿ ಜೋರಾಗಿದೆ. ಆದರೆ ಎಲ್ಲರಿಗಿಂತ ಗಿಲ್ಲಿ ನಟ ಅವರಿಗೆ ಹೆಚ್ಚು ಫ್ಯಾನ್ ಫಾಲೋಯಿಂಗ್ ಇದೆ. ಹಾಗಾಗಿ ಅವರೇ ಬಿಗ್ ಬಾಸ್ ಟ್ರೋಫಿ ಗೆಲ್ಲಬಹುದು ಎಂಬ ಅಭಿಪ್ರಾಯ ಬಲವಾಗಿದೆ.

ಇದನ್ನೂ ಓದಿ: Bigg Boss Kannada 12 Finale: ಮಿಡ್‌ ವೀಕ್‌ನಲ್ಲಿ ಶಾಕ್ ಕೊಟ್ಟ ʻಬಿಗ್‌ ಬಾಸ್‌ʼ; ʻಕಿಚ್ಚನ ಚಪ್ಪಾಳೆʼ ಪಡೆದ ನಾಲ್ಕೇ ದಿನಕ್ಕೆ ದೊಡ್ಮನೆಗೆ ಧ್ರುವಂತ್ ವಿದಾಯ!

ಆಕ್ಟಿವಿಟಿ ರೂಮ್‌ ಒಳಗೆ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಧ್ರುವಂತ್‌, ರಘು, ಕಾವ್ಯ ಮತ್ತು ಅಶ್ವಿನಿ ಗೌಡ ಅವರು ಹೋಗಿದ್ದರು. ಅಲ್ಲಿಂದ ಒಬ್ಬರೊಬ್ಬರನ್ನೇ ಹೊರಗೆ ಕರೆದ ಬಿಗ್‌ ಬಾಸ್‌ ಸೇಫ್‌ ಮಾಡುತ್ತ ಹೋದರು. ಮೊದಲು ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಅಶ್ವಿನಿ ಗೌಡ. ರಘು ಅವರು ಕ್ರಮವಾಗಿ ಸೇಫ್‌ ಆದರು. ಅಂತಿಮವಾಗಿ ಕಾವ್ಯ ಮತ್ತು ಧ್ರುವಂತ್‌ ಮಾತ್ರ ಉಳಿದುಕೊಂಡರು. ಆದರಲ್ಲಿ ಕಾವ್ಯ ಅವರು ಸೇಫ್‌ ಆದರೆ, ಧ್ರುವಂತ್‌ ಎಲಿಮಿನೇಟ್‌ ಆದರು.

Yashaswi Devadiga

View all posts by this author