ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಕ್ಯಾಪ್ಟನ್ ಆದಕೂಡಲೇ ವರಸೆ ಬದಲಿಸಿದ್ರಾ ಗಿಲ್ಲಿ ನಟ? ಮನೆಯವರ ಸಿಟ್ಟಿಗೆ ಕಾರಣವಾಯ್ತಾ ಮಾತಿನ ಮಲ್ಲನ ಅದೊಂದು ನಿರ್ಧಾರ?

Gilli Nata: ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆದ ಮೊದಲ ದಿನವೇ ಗಿಲ್ಲಿ ನಟ ಹವಾ ಮಾಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಿಗ್ ಬಾಸ್ ನೀಡಿದ ವಿಶೇಷ ಅಧಿಕಾರ ಬಳಸಿ ಧ್ರುವಂತ್ ಮತ್ತು ರಾಶಿಕಾ ಅವರನ್ನು ನಾಮಿನೇಟ್ ಮಾಡಿರುವ ಗಿಲ್ಲಿ ವಿರುದ್ಧ 'ಫೇವರಿಸಂ' ಆರೋಪ ಕೇಳಿಬಂದಿದೆ.

ಗಿಲ್ಲಿ ನಟ ಸದ್ಯ ಬಿಗ್‌ ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ಆಗಿದ್ದಾರೆ. ಹಲವು ವಾರಗಳಿಂದ ಕ್ಯಾಪ್ಟನ್‌ ಆಗದಿದ್ದರೂ ವೈಸ್‌ ಕ್ಯಾಪ್ಟನ್‌ ಎಂದು ಹೇಳಿಕೊಂಡು ಓಡಾಡುತ್ತಿದ್ದರು ಗಿಲ್ಲಿ ನಟ. ಆದರೆ ಈ ಬಾರಿ ಅವರಿಗೆ ಕ್ಯಾಪ್ಟನ್‌ ಪಟ್ಟ ಒಲಿದಿದೆ. ಆದರೆ ಆರಂಭದಲ್ಲೇ ಅವರಿಗೊಂದು ಅಗ್ನಿ ಪರೀಕ್ಷೆ ಎದುರಾಗಿದೆ. ಅದೇ ನಾಮಿನೇಷನ್.‌ ಆದರೆ ಈ ವಿಚಾರದಲ್ಲಿ ಅವರ ವರಸೆ ಬದಲಾಗಿದೆ. ಅವರ ಮೇಲೆ ಪಕ್ಷಪಾತದ ಆರೋಪ ಕೇಳಿಬಂದಿದೆ.

ನಾಮಿನೇಷನ್‌ ಮಾಡುವ ಅಧಿಕಾರ ಪಡೆದುಕೊಂಡ ಗಿಲ್ಲಿ

ಮನೆಯ ಕ್ಯಾಪ್ಟನ್‌ ಆಗಿರುವುದರಿಂದ ಮನೆಯ ಸದಸ್ಯರನ್ನು ನಾಮಿನೇಟ್‌ ಮಾಡುವ ಅಧಿಕಾರವನ್ನು ಗಿಲ್ಲಿ ಪಡೆದುಕೊಂಡಿದ್ದಾರೆ. ಮನೆಯ ಒಂದೊಂದು ಜೋಡಿಯ ವಾದ ಪ್ರತಿವಾದವನ್ನು ಆಲಿಸಿ, ಅದರಲ್ಲಿ ಒಬ್ಬರನ್ನು ಮನೆಯಿಂದ ಹೊರಗೆ ಹೋಗುವಂತೆ ನಾಮಿನೇಟ್‌ ಮಾಡುವ ಅಧಿಕಾರವನ್ನು ಬಿಗ್ ಬಾಸ್‌ ಗಿಲ್ಲಿಗೆ ನೀಡಲಾಗಿದೆ. ಈ ವೇಳೆ ಕಾವ್ಯ ಜೊತೆಗೆ ಒಂದಷ್ಟು ಮಂದಿಯ ಹೆಸರುಗಳು ಕೇಳಿಬಂದಿವೆ.

ಗಿಲ್ಲಿ ನಟ ನಾಮಿನೇಷನ್‌ ಪ್ರೋಮೋ



ರಕ್ಷಿತಾ ಅವರು ಕಾವ್ಯ ಎದುರಾಳಿಯಾಗಿ, "ನನಗೆ ಕಾವ್ಯ ಅವರಲ್ಲಿ ವ್ಯಕ್ತಿತ್ವ, ಮನುಷ್ಯತ್ವ ಕಾಣಿಸ್ತಿಲ್ಲ" ಎಂದು ನೇರವಾಗಿ ಹೇಳಿದ್ದಾರೆ. ಈ ನಡುವೆ ಕಾವ್ಯ ಎದುರಾಳಿಯಾಗಿದ್ದ ರಾಶಿಕಾ ಮತ್ತು ಧ್ರುವಂತ್ ಅವರನ್ನು ಗಿಲ್ಲಿ ನಾಮಿನೇಟ್‌ ಮಾಡಿದ್ದಾರೆ. ಇದನ್ನು ಅಶ್ವಿನಿ ಗೌಡ ಖಂಡಿಸಿದ್ದಾರೆ. "ಇಲ್ಲಿ ಎಲ್ಲಾ ಅಂದುಕೊಂಡಂತೆಯೇ ನಡೆಯುತ್ತಿದೆ" ಎಂದಿದ್ದಾರೆ. ಅಲ್ಲದೆ, ಗಿಲ್ಲಿ ನಿರ್ಧಾರಕ್ಕೆ ಧ್ರುವಂತ್‌ ಮತ್ತು ರಾಶಿಕಾ ಕೂಡ ಅಸಹನೆ ವ್ಯಕ್ತಪಡಿಸಿದ್ದಾರೆ. ನಂತರ ಇದಕ್ಕೆ ಪ್ರತಿ ಹೇಳಿಕೆ ನೀಡಿರುವ ಗಿಲ್ಲಿ ನಟ, "ಇಲ್ಲಿ ಯಾವುದೇ ಫೇವರಿಸಂ ಇಲ್ಲ" ಎಂದು ಕಡ್ಡಿ ತುಂಡು ಮಾಡಿದಂತೆ ಗಿಲ್ಲಿ ನಟ ಹೇಳಿದ್ದಾರೆ.

The Devil Movie: `ಡೆವಿಲ್‌' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!

ಕೆಲಸ ಮಾಡುವ ವಿಚಾರಕ್ಕೂ ಜಗಳ

ಇನ್ನು, ಮನೆಯ ಸದಸ್ಯರ ಜೊತೆಗೆ ಕೆಲಸ ಮಾಡಿಸುವ ಹೊಣೆ ಗಿಲ್ಲಿ ನಟ ಅವರ ಮೇಲಿದೆ. ಹಾಗಾಗಿ, ಕೆಲಸ ಮಾಡದ ಅಶ್ವಿನಿ ಗೌಡ ಜೊತೆಗೆ ಗಿಲ್ಲಿ ಕಿರಿಕ್‌ ಮಾಡಿಕೊಂಡಿದ್ದಾರೆ. "ಕಿಚನ್ ಕ್ಲೀನ್ ಮಾಡಿ, ಕೆಲಸ ಮುಗಿಸಿ" ಎಂದು ಅಶ್ವಿನಿಗೆ ಗಿಲ್ಲಿ ಹೇಳಿದ್ದಾರೆ. "ಬೆಳಿಗ್ಗೆ ಮಾಡ್ತೀವಿ.. ಈಗ ಸುಸ್ತಾಗಿದೆ ಆಗಲ್ಲ" ಎಂಬ ಉತ್ತರವನ್ನು ಅಶ್ವಿನಿ ನೀಡುತ್ತಾರೆ. ಆಗ, "ಯಾಕೆ ಹಾರೆ ತಗೊಂಡು ಅಗಿಯಕ್ಕೆ ಹೋಗಿದ್ರಾ? ಈಗ ಮಾಡಲೇಬೇಕು" ಎಂದು ಗಿಲ್ಲಿ ಹೇಳಿದ್ದು, ಅಶ್ವಿನಿ ಕೋಪಕ್ಕೆ ಕಾರಣವಾಗಿದೆ. "ಮೆಲ್ಲಗೆ ಮಾತಾಡೋ... ಕ್ಯಾಪ್ಟನ್ ಆದ್ಮೇಲೆ ನಿಂಗೇನು ಎರಡು ಕೊಂಬು ಬಂದಿರುತ್ತಾ" ಎಂದು ಅಶ್ವಿನಿ ಕೇಳಿದ್ದಾರೆ. ಇದೆಲ್ಲದರ ಪೂರ್ಣ ಮಾಹಿತಿ ಇಂದಿನ (ಡಿ.29) ಸಂಚಿಕೆಯಲ್ಲಿ ಪ್ರಸಾರವಾಗಲಿದೆ.