ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ʻಎಷ್ಟರಲ್ಲಿ ಇರಬೇಕೋ, ಅಷ್ಟ್ರಲ್ಲಿರು ಮಗಾʼ ಅಂತ ಗಿಲ್ಲಿಗೆ ಮಾತಿನಲ್ಲೇ ಡಿಚ್ಚಿ ಕೊಟ್ಟ ರಜತ್‌; ಅಂಥ ಡೈಲಾಗ್‌ ಬೇಕಿತ್ತಾ?

BBK 12 Gilli Nata: ಬಿಗ್ ಬಾಸ್ ಕನ್ನಡ 12ಕ್ಕೆ ಮಾಜಿ ಸ್ಪರ್ಧಿಗಳಾದ ರಜತ್, ಮಂಜು ಮುಂತಾದವರು ಎಂಟ್ರಿ ನೀಡಿದ್ದಾರೆ. ಆದರೆ ಕಲರ್ಸ್‌ ಕನ್ನಡ ರಿಲೀಸ್‌ ಮಾಡಿರುವ ಪ್ರೋಮೋ ನೋಡಿದ್ರೆ ಏನೋ ವಿವಾದ ಶುರುವಾಂತಿದೆ. ಗಿಲ್ಲಿ ನಟ ಅವರ ವ್ಯಂಗ್ಯದ ಮಾತುಗಳಿಂದ ಪರಿಸ್ಥಿತಿ ಬಿಗಡಾಯಿಸಿದಂತೆ ಕಾಣುತ್ತಿದೆ!

ʻಬಿಗ್‌ ಬಾಸ್‌ʼ ಕನ್ನಡ ಸೀಸನ್‌ 12ರಲ್ಲಿ ಈಗ ಹೊಸ ಟ್ವಿಸ್ಟ್‌ ಸಿಕ್ಕಿದೆ. ಹಾಗಂತ, ಮನೆಗೆ ಕಾಲಿಟ್ಟವರೇನೂ ಹೊಸಬರಲ್ಲ. ಹೌದು, ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಮಾಜಿ ಸ್ಪರ್ಧಿಗಳು ಎಂಟ್ರಿ ನೀಡಿದ್ದಾರೆ. ದೊಡ್ಮನೆಗೆ ಈಗ ಬಿಬಿ ರೆಸಾರ್ಟ್‌ ಆಗಿದೆ. ಆ ಮನೆಯೊಳಗೆ ಉಗ್ರಂ ಮಂಜು, ರಜತ್‌, ಮೋಕ್ಷಿತಾ, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಮುಂತಾದವರು ಆಗಮಿಸಿದ್ದಾರೆ. ಆದರೆ ಈ ವೇಳೆ ಗಿಲ್ಲಿ ಆಡಿದ ಮಾತುಗಳೇ ಮುಳ್ಳಾಗಿವೆ. ಅಷ್ಟಕ್ಕೂ ಆಗಿದ್ದೇನು?

ಹದ್ದುಮೀರಿ ಮಾತನಾಡಿದ್ರಾ ಗಿಲ್ಲಿ ನಟ?

ಗಿಲ್ಲಿ ನಟ ಅವರ ಮೇಲಿರುವ ದೊಡ್ಡ ದೂರು ಏನೆಂದರೆ, ವ್ಯಂಗ್ಯ ಮಾಡುವುದು, ಅಗತ್ಯವಿಲ್ಲದ ಕಡೆಯಲ್ಲೂ ಮಾತನಾಡುವುದು.. ಇದರಿಂದ ಬೇರೆಯವರಿಗೆ ಹರ್ಟ್‌ ಆಗುತ್ತದೆ ಎಂಬ ಮಾತುಗಳನ್ನು ಪದೇಪದೇ ಹೇಳಲಾಗಿದೆ. ಈ ಬಗ್ಗೆ ವೀಕೆಂಡ್‌ಗಳಲ್ಲೂ ಚರ್ಚೆ ಆಗಿದೆ. ಆದರೆ ಇದೀಗ ಬಿಗ್‌ ಬಾಸ್‌ ಮನೆಯೊಳಗೆ ಆಗಮಿಸಿರುವ ಅತಿಥಿಗಳ ಬಗ್ಗೆಯೇ ಗಿಲ್ಲಿ ನಟ ಕಾಮೆಂಟ್‌ ಮಾಡಿರುವುದು ಮನೆಯೊಳಗಿನ ವಾತಾವರಣದ ಬಿಸಿಯನ್ನು ಹೆಚ್ಚಿಸಿದೆ.

BBK 12: ವೀಕ್ಷಕರು ನಿರೀಕ್ಷಿಸಿದಂತೆಯೇ ಆಯ್ತು; ಗಿಲ್ಲಿ ನಟನ ಮಾತಿಗೆ ʻಕಿಚ್ಚʼ ಸುದೀಪ್‌ ನಾನ್‌ಸ್ಟಾಪ್‌ ನಗು!

ಮಂಜು ಮದುವೆ ಬಗ್ಗೆ ಪ್ರಸ್ತಾಪ

ಬಿಗ್‌ ಬಾಸ್‌ ಮನೆಯೊಳಗೆ ಅತಿಥಿಯಾಗಿ ಹೋಗಿರುವ ಉಗ್ರಂ ಮಂಜು ಅವರಿಗೆ ಈಚೆಗೆ ಮದುವೆ ಫಿಕ್ಸ್‌ ಆಗಿದೆ. ಈ ವಿಚಾರವನ್ನು ಬಿಗ್‌ ಬಾಸ್‌ ಅವರು ಹೇಳಿದ್ದಾರೆ. "ನಮ್ಮ ನಲ್ಮೆಯ ಮಹಾರಾಜ ಮಂಜು ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ.." ಎಂದು ಬಿಗ್‌ ಬಾಸ್‌ ತಿಳಿಸಿದ್ದಾರೆ. ಆಗ ಎಲ್ಲರೂ ಓಹೋ ಎಂದು ಕಿರುಚಿದ್ದಾರೆ. ಆದರೆ. ಗಿಲ್ಲಿ ನಟ ಮಾತ್ರ, "ಎರಡನೇಯದ್ದ.. ಮೂರನೇಯದ್ದ.." ಎಂದು ಹೇಳಿದ್ದಾರೆ. ಆಗ ಗಿಲ್ಲಿ ಕಡೆ ಮಂಜು ಲುಕ್‌ ಕೊಟ್ಟಿದ್ದಾರೆ. ಪ್ರೋಮೋದಲ್ಲಿರುವ ನೆಕ್ಟ್ಸ್‌ ಡೈಲಾಗ್‌ ಏನಪ್ಪ ಅಂದ್ರೆ, "ಕೆಲವೊಂದು ಪರ್ಸನಲ್‌ಗೆ ಅಂತ ಬಂದುಬಿಟ್ರೆ ನೀನು ಸಪ್ಲೇಯರ್ ಅಲ್ಲ, ನಾನು ಅತಿಥಿನೂ ಅಲ್ಲ.. ಬೇರೆ ಆಗಿಬಿಡ್ತಿವಿ" ಎಂದು ಮಂಜು ವಾರ್ನಿಂಗ್‌ ಗಿಲ್ಲಿಗೆ ಕೊಟ್ಟಿದ್ದಾರೆ.

ಕಲರ್ಸ್‌ ಕನ್ನಡ ರಿಲೀಸ್‌ ಮಾಡಿರುವ ಹೊಸ ಪ್ರೋಮೋ



BBK 12: ಒಂದೇ ಒಂದು ನಿರ್ಧಾರದಿಂದ ಎಲ್ಲರ ಬಾಯಿ ಮುಚ್ಚಿಸಿದ ಗಿಲ್ಲಿ ನಟ; ಇದೇ ನೋಡ್ರಿ ಅಸಲಿ ಆಟ!

ಬಿಟ್ಟಿ ಊಟ ಅಂದಿದ್ದೇ ತಡ ಕಿಡಿ ಹೊತ್ತಿಕೊಳ್ತು!

ಆ ಬಳಿಕ ಮೋಕ್ಷಿತಾ ಪೈ, "ನಮ್ಮ ಅಣ್ಣನಿಗೆ ಮದುವೆ ಫಿಕ್ಸ್‌ ಆಗಿದೆ, ಅದಕ್ಕೆ ಬ್ಯಾಚುಲರೇಟ್‌ ಪಾರ್ಟಿ ಮಾಡೋಕೆ ಬಂದಿದ್ದೇವೆ" ಎಂದಿದ್ದಾರೆ. ಅದಕ್ಕೂ ಕೌಂಟರ್‌ ಕೊಟ್ಟ ಗಿಲ್ಲಿ ನಟ, "ಹಂಗಂದ್ರೆ ನೀವೆಲ್ಲಾ ಬಿಟ್ಟಿ ಊಟ ಮಾಡೋಕೆ ಬಂದಿದ್ದೀರಾ" ಎಂದು ಕೇಳಿದ್ದಾರೆ.‌ ತಕ್ಷಣವೇ ಕ್ಯಾಪ್ಟನ್‌ ಅಭಿ, ಜಾಹ್ನವಿ ಕೂಡ ಗರಂ ಆಗಿರುವುದು ಪ್ರೋಮೋದಲ್ಲಿ ಕಂಡಿದೆ. ಬಿಟ್ಟಿ ಊಟ ಎಂದಿದ್ದಕ್ಕೆ ಗರಂ ಆದ ರಜತ್‌, "ನೀವು ಕೊಡ್ತಾ ಇದ್ಧೀಯೇನಪ್ಪಾ ಬಿಟ್ಟಿ ಊಟ? ಮಾತುಗಳು ಕರೆಕ್ಟ್‌ ಆಗಿ ಬರಲಿ. ಮಗಾ ಎಲ್ಲರತ್ರ ಮಾತನಾಡಿದಂಗೆ ನನ್ನ ಹತ್ರ ಮಾತಾಡೋಕೆ ಬರಬೇಡ. ಎಷ್ಟರಲ್ಲಿ ಇರಬೇಕೋ, ಅಷ್ಟ್ರಲ್ಲಿರು ಮಗಾ" ಎಂದಿದ್ದಾರೆ. ಆ ಕ್ಷಣವೇ ತಪ್ಪಾಯ್ತು, ಸಾರಿ, ಸಾರಿ ಎಂದು ಪದೇಪದೇ ಕೇಳಿದ್ದಾರೆ ಗಿಲ್ಲಿ ನಟ. ಇದರ ಪೂರ್ಣ ಮಾಹಿತಿ ಇಂದಿನ (ನ.25) ಸಂಚಿಕೆಯಲ್ಲಿ ಗೊತ್ತಾಗಲಿದೆ.

ಅಲ್ಲದೆ, ಗಿಲ್ಲಿ ನಟ ತಮಾಷೆಗೆ ಹೇಳಿದ್ದರೂ, ಇದು ಸೀರಿಯಸ್‌ ಆಗಿರುವ ಥರ ಕಾಣಿಸುತ್ತದೆ. ಹಲವು ಬಾರಿಗೆ ಇನ್ನೊಬ್ಬರಿಗೆ ಹರ್ಟ್‌ ಆಗುವ ಥರ ಮಾತನಾಡಬೇಡ ಎಂದು ಎಲ್ಲರೂ ಗಿಲ್ಲಿಗೆ ಎಚ್ಚರಿಸಿದ್ದರೂ, ಗಿಲ್ಲಿ ಮತ್ತೆ ಮತ್ತೆ ಅದೇ ತಪ್ಪು ಮಾಡ್ತಿದ್ದಾರಾ ಎಂಬ ಅನುಮಾನ ಮೂಡಿದೆ.