ಬಿಗ್ ಬಾಸ್ ಫಿನಾಲೆಗೆ (Bigg Boss Kannada Finale) ಕ್ಷಣಗಣನೆ ಆರಂಭವಾಗಿದೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ (Rakshitha Shetty) ಅವರು ಈಗ ಫಿನಾಲೆ ತಲುಪಿದ್ದಾರೆ. ವಯಸ್ಸು ಅನ್ನೋದು ಒಂದು ನಂಬರ್ ಅಷ್ಟೇ, ವಯಸ್ಸಿಗೂ ಮೀರಿ ಆಟ ಆಡಿ, vlogging ಜಗತ್ತಿಗೆ ಮಾತ್ರವಲ್ಲ ಇಡೀ ಯುವ ಸಮುದಾಯಕ್ಕೆ ಮಾದರಿ ಆದವರು ಅಂದ್ರೆ ಅದುವೇ ರಕ್ಷಿತಾ ಪುಟ್ಟಿ. ತಮ್ಮ ಪ್ರಬುದ್ಧ ನಡೆಯಿಂದ ಗಮನಸೆಳೆದ ರಕ್ಷಿತಾಗೆ ಕಿಚ್ಚ ಸುದೀಪ್ (Sudeep) ಅವರು ಮೆಚ್ಚುಗೆ ಕೂಡ ಸೂಚಿಸಿದ್ದೂ ಇದೆ.
ತಡವಾಗಿ ಎಂಟ್ರಿ ಕೊಟ್ಟಿದ್ದ ರಕ್ಷಿತಾ
ರಕ್ಷಿತಾ ಬಿಗ್ ಬಾಸ್ ಮನೆಗೆ ಒಂದು ವಾರದ ಬಳಿಕ ಎಂಟ್ರಿ ಕೊಟ್ಟವರು. ತುಳುನಾಡಿನ ಹುಡುಗಿ ರಕ್ಷಿತಾ ಶೆಟ್ಟಿ ಅಧಿಕೃತವಾಗಿ ಬಿಗ್ ಬಾಸ್ ಮನೆಗೆ ಲೇಟಾಗಿ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದರು. ರಕ್ಷಿತಾ ಶೆಟ್ಟಿ ಮನೆಯೊಳಗೆ ಕಾಲಿಟ್ಟ ಮರುಕ್ಷಣವೇ ಮನೆಯೊಳಗಿದ್ದ 18 ಕಂಟೆಸ್ಟೆಂಟ್‌ಗಳಿಗೆ ಭಾರೀ ಕ್ಲಾಸ್ ತೆಗೆದುಕೊಂಡಿದ್ದರು,
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಗೆ ʻರಾಣಿʼ ಎಂಟ್ರಿ! ಅಶ್ವಿನಿ ಗೌಡ ಭಾವುಕ
ಮೊದಲ ದಿನವೇ ನಾಮಿನೇಷನ್ ಮಾಡಿ ತುಳುನಾಡಿನ ಕನ್ನಡತಿ ರಕ್ಷಿತಾ ಶೆಟ್ಟಿ ಅವರನ್ನು ಹೊರಗೆ ಕಳುಹಿಸಿದ್ದು ಬಿಗ್ ಬಾಸ್ ವೀಕ್ಷಕರಿಗೆ ತೀವ್ರ ಬೇಸರ ತಂದಿತ್ತು. ಈ ನಿರ್ಧಾರ ತಪ್ಪು ಎಂದು ಹಲವು ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಆಟದಲ್ಲೂ ಸೈ, ಎಂಟರ್‌ಟೈನ್‌ಮೆಂಟ್‌ಗೂ ಜೈ
ರಕ್ಷಿತಾ ಟಾಸ್ಕ್ ಅಂತ ಬಂದರೆ ಸಖತ್ ಆಕ್ಟಿವ್ ಆಗಿ ಆಡಿದ್ದರು. ಮಾರ್ನಿಂಗ್ ಸಾಂಗ್ ಪ್ಲೇ ಆದ್ರೆ ಸಾಕು ಸಖತ್ ಸ್ಟೆಪ್ಟ್ ಇಡುವ ರಕ್ಷಿತಾ, ಮನೆಯಯಲ್ಲಿ ಮನರಂಜನೆಯನ್ನೂ ನೀಡಿದವರು .
ಧ್ರುವಂತ್, ಅಶ್ವಿನಿ ಜೊತೆ ವಾರ್
ಮೊದಲಿಗೆ ಅಶ್ವಿನಿ ಹಾಗೂ ಜಾಹ್ನವಿ ಅವರ ಜೊತೆ ಕಿರಿಕ್ ಮಾಡಿಕೊಂಡ ರಕ್ಷಿತಾ, ಈ ಬಗ್ಗೆಯೇ ಸಾಕಷ್ಟು ಸುದ್ದಿಯಾಗಿತ್ತು. ಅಶ್ವಿನಿ ಬಳಿಮ ಕ್ಷಮೆ ಕೂಡ ಕೇಳಿದ್ದರು. ಆದ್ರೆ ಧುವಂತ್ ಮಾತ್ರ ಕೊನೆಯ ಕ್ಷಣಗಳ ವರೆಗೆ ರಕ್ಷಿತಾ ಡ್ರಾಮಾ ಮಾಡ್ತಾರೆ ಅಂತ ವಾದಿಸಿದ್ದರು.
ಸೀಕ್ರೆಟ್ ರೂಮ್‌ನಲ್ಲಿ ಪುಟ್ಟಿಯದ್ದೇ ಹವಾ
ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಎಲಿಮಿನೇಟ್ ಮಾಡಿ, ಹೊರಗೆ ಕಳುಹಿಸಲಾಗಿತ್ತು. ಆದರೆ ಉಳಿದ ಸದಸ್ಯರಿಗೆ ಗೊತ್ತಿಲ್ಲದಂತೆ ಅವರಿಬ್ಬರನ್ನು ಸೀಕ್ರೆಟ್ ರೂಮ್‌ಗೆ ಕಳುಹಿಸಿದ್ದರು ಬಿಗ್ ಬಾಸ್. ಬಹಳ ಸೀಸನ್‌ಗಳ ಬಳಿಕ ಈ ಟಾಸ್ಕ್ ಮಾಡಿಸಲಾಗಿತ್ತು. ಆದರೆ ಧ್ರುವಂತ್ ಜೊತೆಗೆ ಇರಲಾರದೇ, ವಾಪಸ್ ಬಿಗ್ ಬಾಸ್ ಮನೆಗೆ ಕಳುಹಿಸಿ ಎಂದು ಗೋಳಾಡಿದ್ದರು ರಕ್ಷಿತಾ. ಆದರೂ ಛಲ ಬಿಡದ ರಕ್ಷಿತಾ ಅಲ್ಲಿಯೂ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದರು.
ಗಿಲ್ಲಿ ಮೇಲೆ ಪುಟ್ಟಿಗೆ ಕ್ರಶ್!
ಬಿಗ್‌ಬಾಸ್ ಕನ್ನಡ ಸೀಸನ್ 12 ಫಿನಾಲೆ ವಾರಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ, ಗಿಲ್ಲಿ–ರಕ್ಷಿತಾ ನಡುವಿನ ಸಂಬಂಧದ ಬಗ್ಗೆ ಭಾರೀ ಚರ್ಚೆ ಶುರುವಾಗಿತ್ತು. ಗಿಲ್ಲಿ ಜೊತೆ ಹೆಚ್ಚು ಸಮಯ ಕಳೆಯಲು ರಕ್ಷಿತಾ ಆಸಕ್ತಿ ತೋರಿಸುತ್ತಿದ್ದರು. ಗಿಲ್ಲಿ ಕಾವ್ಯಾ ಅಥವಾ ಇತರರ ಜೊತೆ ಮಾತನಾಡಿದರೆ ಬೇಸರಪಡುತ್ತಿದ್ದ ದೃಶ್ಯಗಳು ಕೂಡ ಮನೆಯಲ್ಲಿ ಕಂಡುಬಂದಿದ್ದವು. ಒಮ್ಮೆ ಗಿಲ್ಲಿಯಂತ ಬಾಯ್‌ಫ್ರೆಂಡ್ ಬೇಕು ಎಂದು ರಕ್ಷಿತಾ ಹೇಳಿದ್ದ ಮಾತು ಕೂಡ ವೀಕೆಂಡ್ ಎಪಿಸೋಡ್‌ನಲ್ಲಿ ಚರ್ಚೆಗೆ ಬಂದಿತ್ತು.ಗಿಲ್ಲಿ ನನಗೆ ಇಷ್ಟವಿಲ್ಲ, ನನ್ನ ಬಾಯ್‌ಫ್ರೆಂಡ್ ಅಥವಾ ಪತಿ ಆಗುವ ಅರ್ಹತೆಯೇ ಅವರಿಗೆ ಇಲ್ಲ ಎಂದು ರಕ್ಷಿತಾ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮಾತುಗಳು ಗಿಲ್ಲಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.
ಪ್ರೀತಿಯ ಅಣ್ಣ ರಘು
'ಸೂಪರ್ ಸಂಡೇ' ಸಂಚಿಕೆಯಲ್ಲಿ ರಕ್ಷಿತಾ ಶೆಟ್ಟಿ ತಮ್ಮ 'ಉತ್ತಮ' ಮೆಡಲ್ ಅನ್ನು ರಘುಗೆ ನೀಡುವ ಮೂಲಕ ಎಲ್ಲರ ಮನಗೆದ್ದರು. ಇದನ್ನು ಕಂಡು ರಘು ಭಾವುಕರಾದರು. ರಘು ಅವರಿಗೆ ರಕ್ಷಿತಾ ನೀಡಿದ ಉಡುಗೊರೆ ಎಲ್ಲರಿಗೂ ಶಾಕ್ ನೀಡಿತು. ಯಾಕೆಂದರೆ, ರಕ್ಷಿತಾ ತಮ್ಮಲ್ಲಿದ್ದ ಉತ್ತಮ ಮೆಡಲ್ ಅನ್ನು ರಘುಗೆ ನೀಡಿದರು. ಕಳೆದ ವಾರ ಅಶ್ವಿನಿಗೆ ಉತ್ತಮ ಸಿಕ್ಕಿತ್ತು. ಆಗ ರಘು, "ನನಗೆ ಒಂದು ವಾರ ಕೂಡ ಉತ್ತಮ ಬಂದಿಲ್ಲ.
ನನಗೆ ಉತ್ತಮ ಕೊಟ್ಟಿಲ್ಲ. ನಾನು ದಿವಸ ಅಡುಗೆ ಮಾಡ್ತಿದ್ದೆ. ಟಾಸ್ಕ್ ಚೆನ್ನಾಗಿ ಆಡುತ್ತಿದ್ದೆ. ಆದರೆ ಯಾರೂ ಹೇಳಲ್ಲ. ಅದೇ ಮಧ್ಯೆದಲ್ಲಿ ತಪ್ಪು ಮಾಡಿದ್ರೆ ಹಿಡಿತಾರೆ" ಎಂದು ಬೇಸರ ಮಾಡಿಕೊಂಡಿದ್ದರು. ಆ ಮಾತು ಹೇಳುವಾಗ ಅಲ್ಲಿ, ರಕ್ಷಿತಾ ಕೂಡ ಇದ್ದರು. ಇದೀಗ ರಘುಗೆ ತಮ್ಮಲ್ಲಿದ್ದ ಉತ್ತಮ ಮೆಡಲ್ ಅನ್ನು ನೀಡಿದ್ದರು.
ಕಿಚ್ಚನ ಚಪ್ಪಾಳೆ
ಅಶ್ವಿನಿ ಗೌಡ ಎದುರಿನಲ್ಲೇ ರಕ್ಷಿತಾ ಶೆಟ್ಟಿ ಅವರು ಕಿಚ್ಚನ ಚಪ್ಪಾಳೆ ಪಡೆದಿದ್ದರು. ಹೋದವಾರ ನಾನು ಕೆಲವರಿಗೆ ಬೈಯ್ದಿದ್ದೆ. ಅದಕ್ಕಿಂತಲೂ ಹೆಚ್ಚಾಗಿ ಅವರು ಹೋಗುತ್ತಿರುವ ಹಾದಿಯಲ್ಲಿ ಅವರೇ ಅವರಿಗೆ ಮುಳುವಾಗುತ್ತಿದ್ದಾರೆ ಎಂಬುದು ನಮಗೆ ಗೊತ್ತಾದಾಗ ನಾವು ಕ್ಲಾಸ್ ತೆಗೆದುಕೊಳ್ಳುವುದು ಯಾಕೆ ಎಂದರೆ, ತುಂಬ ಚೆನ್ನಾಗಿ ಆಡುತ್ತಿದ್ದೀರಿ.. ಹಾಳಾಗಬೇಡಿ ಅನ್ನೋದಕ್ಕೆ.
ಇದನ್ನೂ ಓದಿ: Bigg Boss Kannada 12: ಟಾಸ್ಕ್ ಮಾಸ್ಟರ್, ಈ ಸೀಸನ್ ಮೊದಲ ಫೈನಲಿಸ್ಟ್ ಧನುಷ್ ಜರ್ನಿ ಹೇಗಿತ್ತು?
ತಕ್ಷಣ ಆಟ ಬದಲಾಯಿಸಿಕೊಂಡು, ತಮ್ಮ ಹಿಂದಿನ ವ್ಯಕ್ತಿತ್ವಕ್ಕೆ ಹೋಗಿ, ತುಂಬಾ ಚೆನ್ನಾಗಿ ಆಟ ಆಡಿ, ತಿದ್ದಿಕೊಂಡು, ಮಾನವೀಯತೆ ತೋರಿಸಿ, ಬೈಯಿಸಿಕೊಂಡವರಿಂದಲೇ ಉತ್ತಮ ಅನಿಸಿಕೊಂಡ ರಕ್ಷಿತಾ ಅವರೇ ಈ ವಾರದ ಕಿಚ್ಚನ ಚಪ್ಪಾಳೆ ನಿಮಗೆ’ ಎಂದು ಸುದೀಪ್ ಹೇಳಿದ್ದರು.