ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಕುಚಿಕುಗಳ ಮಧ್ಯೆ ಮಾರಾಮಾರಿ! ಗಿಲ್ಲಿಯನ್ನೇ ಟಾರ್ಗೆಟ್‌ ಮಾಡಿದ ರಕ್ಷಿತಾ

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಜಗಳ ತಾರಕಕ್ಕೇರಿದೆ. ವಂಶದ ಕುಡಿಯೇ ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದೆ. ರಘು (Raghu) ಕೂಡ ಗಿಲ್ಲಿ ವಿರುದ್ಧವೇ ಕೂಗಾಡಿದ್ದಾರೆ. ಗಿಲ್ಲಿ ಕೂಡ ಈಗ ಅಬ್ಬರಿಸಿದ್ದಾರೆ. ಸದಸ್ಯರಿಗೆ 1ರಿಂದ 11 ರ್ಯಾಕಿಂಗ್‌ ನೀಡಬೇಕಿತ್ತು. ಧನುಷ್‌ ಅವರು ಎರಡನೇ ಸ್ಥಾನವನ್ನು ಗಿಲ್ಲಿಗೆ ನೀಡಿದರು. `ನಿನ್ನ ವಿಷಯಕ್ಕೆ ಬಂದಾಗ ನೀನು ಸ್ಟ್ಯಾಂಡ್‌ ತೆಗೆದುಕೊಳ್ತೀಯಾ ಅಂತ ಅನ್ನಿಸಿತು' ಅಂತ ಗಿಲ್ಲಿಗೆ ಹೇಳಿದ್ದಾರೆ. ಧನುಷ್‌ ಕೊಟ್ಟ ನಂಬರ್‌ಗೆ ಹಾಗೂ ಮಾತಿಗೆ ರಕ್ಷಿತಾ, ರಘು ಕೆಂಡ ಆದರು.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 12) ಸ್ಪರ್ಧಿಗಳ ಮಧ್ಯೆ ಜಗಳ ತಾರಕಕ್ಕೇರಿದೆ. ವಂಶದ ಕುಡಿಯೇ ಗಿಲ್ಲಿ (Gilli Nata) ವಿರುದ್ಧ ತಿರುಗಿ ಬಿದ್ದಿದೆ. ರಘು (Raghu) ಕೂಡ ಗಿಲ್ಲಿ ವಿರುದ್ಧವೇ ಕೂಗಾಡಿದ್ದಾರೆ. ಗಿಲ್ಲಿ ಕೂಡ ಈಗ ಅಬ್ಬರಿಸಿದ್ದಾರೆ. ಸದಸ್ಯರಿಗೆ 1ರಿಂದ 11 ರ್ಯಾಕಿಂಗ್‌ ನೀಡಬೇಕಿತ್ತು. ಧನುಷ್‌ ಅವರು ಎರಡನೇ ಸ್ಥಾನವನ್ನು ಗಿಲ್ಲಿಗೆ ನೀಡಿದರು. `ನಿನ್ನ ವಿಷಯಕ್ಕೆ ಬಂದಾಗ ನೀನು ಸ್ಟ್ಯಾಂಡ್‌ (Stand) ತೆಗೆದುಕೊಳ್ತೀಯಾ ಅಂತ ಅನ್ನಿಸಿತು' ಅಂತ ಗಿಲ್ಲಿಗೆ ಹೇಳಿದ್ದಾರೆ. ಧನುಷ್‌ ಕೊಟ್ಟ ನಂಬರ್‌ಗೆ ಹಾಗೂ ಮಾತಿಗೆ ರಕ್ಷಿತಾ (Rakshitha), ರಘು ಕೆಂಡ ಆದರು.

`ಮನೆ ಕೆಲಸ ಆಗಲಿ ಏನೂ ನಿಭಾಯಿಸಲ್ಲ' ಅಂತ ಗಿಲ್ಲಿ ಬಗ್ಗೆ ರಕ್ಷಿತಾ ಕಾರಣ ಕೊಟ್ಟರು. `ಮನೆಯಲ್ಲಿ ಶುದ್ಧ ಸೋಮಾರಿ ಅವನೇ . ಆದರೆ ಎರಡನೇ ಸ್ಥಾನದಲ್ಲಿ ಇದ್ದಾರೆ' ಅವರು ಅಂತ ರಘು ಕಾರಣ ಕೊಟ್ಟರು. ಇದನ್ನು ಕೇಳಿ ಗಿಲ್ಲಿ ಕೆಂಡ ಆಗಿದ್ದಾರೆ.

ಇದನ್ನೂ ಓದಿ: Bigg Boss Kannada 12: ರಜತ್‌ ಮಾಸ್‌ ಆಗಿ ಬಂದ್ರು, ಆದ್ರೆ ಈಗ ಠುಸ್‌ ಎಂದ ಗಿಲ್ಲಿ! ಇನ್ನೇನಿದ್ರು ಆಟ ಒಂದೇ ಎಂದ ಮಾತಿನ ಮಲ್ಲ

`ಯಾರೂ ಕೇಳಿದರು ಮನೆಕೆಲಸ ಅಂತ ಕಾರಣ ಕೊಡ್ತಾರೆ. ಏನು ಮನೆ ಕೆಲಸಕ್ಕಾ ನಾನು ಬಂದಿದ್ದು'? ಅಂತ ಕೂಗಾಡಿದ್ದಾರೆ. ಗಿಲ್ಲಿ ಮಾತು ರಘುಗೆ ಇನ್ನಷ್ಟು ಕೆರಳಿಸಿದೆ. ಮಾತನಾಡಬೇಡ ಅಂತ ಗಿಲ್ಲಿ ಮೇಲೆ ಕೂಗಾಡಿದ್ದಾರೆ ರಘು.

ಕಲರ್ಸ್‌ ಕನ್ನಡ ಪ್ರೋಮೋ



ರಘು ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿತ್ತು. ಗಿಲ್ಲಿ ಮಾಡೋ ಕೀಟಲೆಗಳನ್ನು ರಘು ಸಹಿಸಿಕೊಂಡಿದ್ದರು. ಆದರೆ, ಈಗ ಎಲ್ಲವೂ ಬದಲಾಗಿದೆ.

ಬಟ್ಟೆ ವಿಚಾರಕ್ಕೆ ಜಗಳ

ಇದಕ್ಕೂ ಮುಂಚೆ ರಘು ಹಾಗೂ ಗಿಲ್ಲಿ ಮಧ್ಯೆ ಬಟ್ಟೆ ವಿಚಾರಕ್ಕೆ ಜಗಳ ಆಗಿತ್ತು. ಮ್ಯಾಕ್ಸ್‌ ಮಂಜು ಅವರು ಗಿಲ್ಲಿ ನಟನ ಬಟ್ಟೆಗಳನ್ನು ನೋಡಿದ್ದರು. ಇಷ್ಟೆಲ್ಲ ಚೆನ್ನಾಗಿ ಬಟ್ಟೆ ಇದ್ದರೂ ಕೂಡ ಹಾಕಿಕೊಳ್ತಿಲ್ಲ ಎಂದು ಮಂಜು ಅವರು ಪ್ರಶ್ನೆ ಮಾಡಿದ್ದರು.

ಇದನ್ನೂ ಓದಿ: Bigg Boss Kannada 12: ಏಕಾಏಕಿ ಎದ್ದು ಕಿವಿ ಹಿಡಿದುಕೊಂಡು, ಸುದೀಪ್‌ ಬಳಿ ಕೈ ಮುಗಿದು ಸ್ಪರ್ಧಿಗಳು ಮನವಿ ಮಾಡಿದ್ದೇನು?

ಗಿಲ್ಲಿ ಮಂಜು ಅವರ ಬಾಸ್ಕೆಟ್‌ನಲ್ಲಿರುವ ಬಟ್ಟೆ, ಶೂಗಳನ್ನು ಹೊರಗಡೆ ತೆಗೆದು ತೋರಿಸಿದ್ದರು. ಎರಡು ವಾರಗಳಿಂದ ಬಟ್ಟೆಗಳನ್ನು ಕಳಿಸುತ್ತಿದ್ದಾರೆ. ಬಟ್ಟೆ ಕಳಿಸಲಿಲ್ಲ ಎಂದಾಗ ನಾವೆಲ್ಲ ಕೊಟ್ಟೆವು, ಈಗ ಬಟ್ಟೆ ಕೊಟ್ಟಿದೀವಿ, ಕ್ಯಾಮರಾ ಮುಂದೆ ಚೆನ್ನಾಗಿ ಕಾಣಿಸಿಕೋ ಎಂದು ಹೇಳಿದೆವು, ಆದರೆ ಕೇಳುತ್ತಿಲ್ಲ. ಇವತ್ತು ಹೇಳಿದೆ, ಇನ್ಮುಂದೆ ಬಟ್ಟೆ ಆದರೂ ಹಾಕಿಕೊಳ್ಳಲಿ, ಅಥವಾ ಬಿಡಲಿ ಎಂದು ರಘು ಅವರು ಹೇಳಿದ್ದರು. ಇದರ ಬಗ್ಗೆ ಇಬ್ಬರ ಮಧ್ಯೆ ವಾಗ್ವಾದವೂ ನಡೆದಿತ್ತು.

Yashaswi Devadiga

View all posts by this author