ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ಮೊದಲು ಎರಡು ವಾರ ಹೈಲೈಟ್ ಆಗಿದ್ದು ಜಾಹ್ನವಿ ಹಾಗೂ ಅಶ್ವಿನಿ ಗೌಡ (Ashwini Gowda). ಇವರಿಬ್ಬರ ಗ್ರೂಪಿಸಮ್‌ಗೆ ಮನೆಯೇ ಅಲ್ಲೋಲ ಕಲ್ಲೋಲ ಆಗಿತ್ತು. ಆದರೀಗ ಈ ಸ್ನೇಹ ಇಂದು ಛೀದ್ರವಾಗಿದೆ. ಬಿಬಿ ಕಾಲೇಜ್ ಟಾಸ್ಕ್ ವೇಳೆ ಅಶ್ವಿನಿ ಗೌಡ ಹಾಗೂ ಜಾಹ್ನವಿ (Janvi) ಬೇರೆ ಟೀಮ್ ಅಡಿ ಬಂದರು. ಆದರ ಇವರಿಬ್ಬರ ನಿಲುವಿಗೆ ಪ್ರಶ್ನೆ ಇಟ್ಟಿದ್ದು ಮಾತ್ರ ಮಾಸ್ಟರ್ ಗಿಲ್ಲಿ.
ನಿಜವಾಗಿಯೂ ಮನಸ್ತಾಪ ಆಗಿಲ್ಲ?
ಹೌದು, ಅಶ್ವಿನಿ ಗೌಡ ಹಾಗೂ ಜಾಹ್ನವಿ ಮಧ್ಯೆ ನಿಜವಾಗಿಯೂ ಮನಸ್ತಾಪ ಆಗಿಲ್ಲ ಅನ್ನೋದು ಗಿಲ್ಲಿಯ ವಾದ. ಇಬ್ಬರೂ ಜಗಳವಾಡಿಕೊಂಡಂತೆ ನಟಿಸುತ್ತಿದ್ದಾರೆ, ಎಲ್ಲರನ್ನ ಯಾಮಾರಿಸುತ್ತಿದ್ದಾರೆ ಎಂಬ ಅಭಿಪ್ರಾಯ ಗಿಲ್ಲಿ ಅವರದ್ದು ಮಾತ್ರ. ನಿನ್ನೆಯ ಸಂಚಿಕೆಯಲ್ಲಿ ಈ ಬಗ್ಗೆ ಜಾಹ್ನವಿ ಬಳಿ ನೇರವಾಗಿ ಈ ಬಗ್ಗೆ ಪ್ರಸ್ತಾಪ ಮಾಡುತ್ತಾರೆ ಗಿಲ್ಲಿ.
ರಾಶಿಕಾ ಹಾಗೂ ಸೂರಜ್ ಸಿಂಗ್ ಮೇಲೆ ಅಶ್ವಿನಿ ಗೌಡ ಅವರಿಗೆ ಅದೇನೋ ನಂಬಿಕೆ ಇತ್ತು. ತಮ್ಮ ಪರ ನಿಲ್ಲುತ್ತಾರೆ ಅನ್ನೋ ಸಮಾಧನ ಅವರಿಗಿತ್ತು. ಆದರೆ ಅದು ಕೂಡ ಸುಳ್ಳಾಗಿದೆ.
ರಾಶಿಕಾ ಫ್ಲರ್ಟ್
ನಿನ್ನೆಯ ಸಂಚಿಕೆಯಲ್ಲಿ ಅಶ್ವಿನಿ ಗೌಡ ಹಾಗೂ ಕಾವ್ಯ ಮಧ್ಯೆ ಜೋರಾಗಿ ಕಾಳಗವೇ ಆಯ್ತು. ಅಶ್ವಿನಿ ಗೌಡ ವಿರುದ್ಧ ಕಾವ್ಯ ಶೈವ ಹಾಗೂ ರಕ್ಷಿತಾ ಶೆಟ್ಟಿ ರೊಚ್ಚಿಗೆದ್ದಾಗ ಯಾರೂ ಅವರ ಪರ ನಿಲ್ಲಲ್ಲಿಲ್ಲ. ತಮಗೆ ಸಂಬಂಧವೇ ಇಲ್ಲದಂತೆ ಸೂರಜ್ ಹಾಗೂ ರಾಶಿಕಾ ಫ್ಲರ್ಟ್ ಮಾಡಿಕೊಂಡು ಕೂತಿದ್ದರು.
ಜಗಳ ಆರಂಭವಾದಾಗ ಇಗ್ನೋರ್ ಮಾಡಿದರು ರಾಶಿಕಾ ಶೆಟ್ಟಿ. ಈ ಹಿಂದೆ ರಾಶಿಕಾ ಶೆಟ್ಟಿ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಜಗಳ ಆದಾಗ, ಮಧ್ಯೆ ಬಂದು ರಾಶಿಕಾ ಶೆಟ್ಟಿ ಪರ ವಹಿಸಿ, ರಕ್ಷಿತಾ ಶೆಟ್ಟಿಗೆ ಅಶ್ವಿನಿ ಗೌಡ ಆವಾಜ್ ಹಾಕಿದ್ದರು. ಆದರೀಗ ಅಶ್ವಿನಿ ಪರ ಯಾರೂ ಇಲ್ಲದಂತಾಗಿದೆ.
ಇದನ್ನೂ ಓದಿ: Kantara Chapter 1 collection: ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಕಾಂತಾರ ಚಾಪ್ಟರ್ 1! ಕಾಂತಾರ, ಕೆಜಿಎಫ್ ದಾಖಲೆ ಉಡೀಸ್
ರಿಷಾ ಬಳಿ ಬೇಸರ
ಈ ಬಗ್ಗೆ ಅಶ್ವಿನಿ ಗೌಡ ಅವರು ಏನೇ ಆದರೂ ಯಾರು ಈ ಮನೆಯಲ್ಲಿ ಮಾತಾಡಲ್ಲವಲ್ಲ. ಅದು ನನಗೆ ಬೇಜಾರಾಗುತ್ತಿದೆ. ಎಂದು ರಿಷಾ ಬಳಿ ಬೇಸರ ಹೊರಹಾಕಿದ್ದಾರೆ. ಅಶ್ವಿನಿ ಗೌಡ ನೇರವಾಗಿ ಈಬಗ್ಗೆ ರಾಶಿಕಾ ಅವರಿಗೆ ಪ್ರಶ್ನೆ ಮಾಡಿದರು. ಅಲ್ಲಿ ಏನು ನಡೆಯಿತು ಅಂತ ಗೊತ್ತಾಯ್ತು ಎಂದು ರಾಶಿಕಾ ಹೇಳಿದರು. ಒಟ್ಟಿನಲ್ಲಿ ಇಡೀ ಮನೆಯಲ್ಲಿ ಎಲ್ಲರ ವಿಚಾರಕ್ಕೆ ಮೂಗು ತೂರಿಸುವ ಅಶ್ವಿನಿ ಗೌಡ ಅವರ ಸಪೋರ್ಟ್‌ಗೆ ಯಾರೂ ಇಲ್ಲದಂತಾಗಿದೆ. ಆದರೂ ಕೊನೆಯಲ್ಲಿ ರಿಷಾ ಅವರು ಅಶ್ವಿನಿ ಅವರನ್ನು ಸಮಾಧಾನ ಪಡಿಸಿದರು.
ಈ ವಾರದ ಪ್ರೋಮೋ ಔಟ್ ಆಗಿದೆ. ನೆಟ್ಟಿಗರು ಇದೀಗ ಕಮೆಂಟ್ ಮಾಡುತ್ತಿದ್ದಾರೆ. ಕಳೆದ ವಾರ ಯಾರಿಗೂ ಕಿಚ್ಚನ ಚಪ್ಪಾಳೆ ಸಿಕ್ಕಿರಲಿಲ್ಲ. ಮನೆಯ ಸ್ಪರ್ಧಿಗಳನ್ನು ಬಿಗ್‌ಬಾಸ್ ಎರಡು ತಂಡಗಳನ್ನಾಗಿ ಮಾಡಲಾಗಿತ್ತು. ಅಂತಿಮವಾಗಿ ನೀಲಿ ತಂಡದ ಧನುಷ್ ಕ್ಯಾಪ್ಟನ್ ಆದರು.ಇವತ್ತಿನ ಕಿಚ್ಚನ ಪಂಚಾಯ್ತಿಗೆ ವೀಕ್ಷಕರು ಕಾಯುತ್ತಿದ್ದಾರೆ. ಈ ವಾರ ಪಂಚಾಯ್ತಿಯಲ್ಲಿ ಕಿಚ್ಚ ಮಾತನಾಡಬೇಕಾದ ಟಾಪಿಕ್‌ಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.