ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಸ್ಪರ್ಧಿಗಳ ಮಧ್ಯೆ ಸ್ನೇಹ ಹುಟ್ಟೋದು, ಪ್ರೀತಿ ಚಿಗುರೋದು ಕಾಮನ್. ಹಲವು ಸೀಸನ್‌ಗಳಲ್ಲಿ ವೀಕ್ಷಕರು ಇದನ್ನ ನೋಡುತ್ತಾ ಬಂದಿದ್ದಾರೆ. ಆದರೆ ಕೆಲವು ಸ್ಪರ್ಧಿಗಳ ನಡುವೆ ಪೊಸೆಸಿವ್ (possessive) ಕೂಡ ಇರೋ ಉದಾಹರಣೆಗಳೂ ಇವೆ. ಇಷ್ಟೂ ದಿನ `ವಂಶದ ಕುಡಿ' ಎನಿಸಿಕೊಂಡಿದ್ದ ರಕ್ಷಿತಾಗೂ (Rakshitha Shetty) ಈಗ ಇದೇ ಪೊಸೆಸಿವ್‌ನೆಸ್ ಕಾಡ್ತಾ ಇದೆಯಾ? ಅನ್ನೋದೇ ಕೆಲವು ನೆಟ್ಟಿಗರ ಅಭಿಪ್ರಾಯ. ಕೆಲವು ದಿನಗಳಿಂದ ರಕ್ಷಿತಾ ಅವರು ಕಾವ್ಯ ವಿಚಾರವಾಗಿ ರಿಯಾಕ್ಟ್ ಮಾಡೋದನ್ನ ನೋಡಿ, ಮನೆಯಲ್ಲಿ ಸೈಲೆಂಟ್ ಲವ್ ಸ್ಟೋರಿ (Love Story) ಶುರು ವಾಗಿದೆಯಾ? ಅಂತ ಪೋಸ್ಟ್ ಮಾಡ್ತಿದ್ದಾರೆ. ಈ ಚರ್ಚೆ ಆಗ್ತಾ ಇರೋದು ಏಕೆ?
ಕಾವ್ಯ ವಿರುದ್ಧ ಕೆಲವು ಆರೋಪ
ಈ ವಾರ ನಾಮಿನೇಶನ್ ಪ್ರಕ್ರಿಯೆಯಲ್ಲಿ ಕಾವ್ಯ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದರು ರಕ್ಷಿತಾ. ಕಾವ್ಯ ಅವರೇ ಗಿಲ್ಲಿಗೆ ದೊಡ್ಡ ಸಮಸ್ಯೆ. ಅವರಿಂದ ಗಿಲ್ಲಿಗೆ ಆಟದಲ್ಲಿ ಸಮಸ್ಯೆ ಆಗ್ತಿದೆ ಎನ್ನುವ ಅಭಿಪ್ರಾಯ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ನಿನ್ನೆಯ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಹೀನಾಯವಾಗಿ ಸೋತು ಹೋದರು ಗಿಲ್ಲಿ ಹಾಗೂ ಕಾವ್ಯ.
ಸ್ಪಂದನಾ ಅವರು ಗಿಲ್ಲಿ ಅವರನ್ನು ತಮಾಷೆ ಕೂಡ ಮಾಡಿದ್ದಾರೆ. ಆದರೆ ಕಾವ್ಯ ಮಾತ್ರ, ಸ್ಪಂದನಾ ಪರವಾಗಿಯೇ ಮಾತನಾಡಿದರು.
ವೈರಲ್ ವಿಡಿಯೋ
ಸ್ಪಂದನಾ ಪರ ಕಾವ್ಯ!
ಗಿಲ್ಲಿ ಅವರು ಕಾವ್ಯಗೆ ಸ್ಪಂದನಾ ನಾನು ಸೋತಿದ್ದಕ್ಕೆ ನಗ್ತಾ ಇದ್ಲು. ಇನ್ನೂ ಅವಳಿಗೆ ಇದೆ ಸುಮ್ನೆ ಬಿಡಲ್ಲ ಅಂತ ಹೇಳುತ್ತಾರೆ. ತಕ್ಷಣ ಕಾವ್ಯ ತನ್ನ ಗೆಳತಿ ಸ್ಪಂದನಾ ಬಗ್ಗೆ ಸ್ಟ್ಯಾಂಡ್ ತೆಗೊಂಡು. ʻಇಲ್ಲ ಗಿಲ್ಲಿ ನೀನು ತಪ್ಪು ತಿಳ್ಕೊಳ್ಬೇಡ.. ಅವಳ ತಲೇಲಿ ಯಾವ ಉದ್ದೇಶ ಇತ್ತು ಗೊತ್ತಿಲ್ಲ ಅಲ್ವಾ. ಅವಳು ಗೆದ್ದಿರೋ ಖುಷಿಗೆ ನಗ್ತಾ ಇದ್ಲು ಅನ್ಸುತ್ತೆ ಎಂದು ಹೇಳಿ ಗಿಲ್ಲಿಗೆ ಸ್ಪಂದನಾ ಮೇಲೆ ಬಂದ ಅಭಿಪ್ರಾಯವನ್ನು ಬೇರೆ ರೀತಿ ಹೇಳುತ್ತಾರೆ.
ಅಪ್‌ಸೆಟ್ ಆದ ಗಿಲ್ಲಿಯನ್ನ ಸಮಾಧನ ಪಡಿಸಿದ ರಕ್ಷಿತಾ
ಗಿಲ್ಲಿ ಹೀನಾಯವಾಗಿ ಸೋತ ಬಳಿಕ ತಲೆ ತಗ್ಗಿಸಿಕೊಂಡು ಒಂದು ಮೂಲೆಯಲ್ಲಿ ಕುಳಿತಿರುತ್ತಾರೆ. ಆ ತಕ್ಷಣ ರಕ್ಷಿತಾ ನೇರವಾಗಿ ಬಂದು ಗಿಲ್ಲಿಗೆ ಸಮಾಧಾನ ಪಡಿಸುತ್ತಾರೆ. ʻನಾನು ಒಂದು ವೇಳೆ ಕ್ಯಾಪ್ಟನ್ ಆದರೆ ನೀವು ವಾಯ್ಸ್ ಕ್ಯಾಪ್ಟನ್ಸ್ ಆಗ್ತೀರಾ. ಬೇಜಾರು ಯಾಕೆ?ʼ ಅಂತ ರಕ್ಷಿತಾ ಸಮಾಧಾನ ಮಾಡಿದ್ರು. ಆದರೆ ಗಿಲ್ಲಿ ಮಾತ್ರ ಸುಮ್ಮನೆ ಇಲ್ಲಿಂದ ಹೊರಟು ಹೋಗು ಅಂದಿದ್ದಾರೆ.
ಒಂಥರಾ ಸೈಲೆಂಟ್ ಲವ್ ಸ್ಟೋರಿ?
ಈ ವಿಡಿಯೋ ಈಗ ಭರ್ಜರಿ ವೈರಲ್ ಆಗ್ತಿದೆ. ಕೆಲವರು ರಕ್ಷಿತಾ -ಗಿಲ್ಲಿ ಬಾಂಡಿಂಗ್ ಸೂಪರ್ ಅಂತ ಕಮೆಂಟ್ ಮಾಡ್ತಿದ್ದಾರೆ. ಇನ್ನೂ ಕೆಲವರು ಕಾವ್ಯಗಿಂತ ರಕ್ಷಿತಾ ಬೆಟರ್ ಅಂತ ಕಮೆಂಟ್ ಮಾಡ್ತಿದ್ದಾರೆ.
ಈಗ ರಕ್ಷಿತಾ ಬಗ್ಗೆ ಸಖತ್ ಪೋಸ್ಟ್ ವೈರಲ್ ಆಗ್ತಿದೆ. ಕಾವ್ಯ ಎಲ್ಲಾದರೂ ಗಿಲ್ಲಿಯನ್ನ ಇನ್ಸಲ್ಟ್ ಮಾಡಿದ್ರೆ ರಕ್ಷಿತಾಗೆ ಕೋಪ ಬರತ್ತೆ. ಒಂಥರಾ ಸೈಲೆಂಟ್ ಲವ್ ಸ್ಟೋರಿ ಇದು ಎಂದು ಕಮೆಂಟ್ ಮಾಡ್ತಿದ್ದಾರೆ. ಇನ್ನೂ ಕೆಲವರು ಇದಲ್ಲ ಲವ್ ಅಲ್ಲ. ಅವರಿಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್‌ಶಿಪ್ ಇದೆ ಅಷ್ಟೇ ಅಂತ ಕಮೆಂಟ್ ಮಾಡ್ತಿದ್ದಾರೆ. ಇನ್ನೂ ಕೆಲವರು ಒಳ್ಳೆಯ ಬಾಂಡಿಂಗ್ ಇರೋ ಗೆಳೆತನವನ್ನು ಟ್ರಯಾಂಗಲ್ ಲವ್ ಸ್ಟೋರಿ ರೀತಿ ಬಿಂಬಿಸಬೇಡಿ ಅಂತ ಕಮೆಂಟ್ ಮಾಡ್ತಿದ್ದಾರೆ.
ಗಿಲ್ಲಿಗೆ ಕಾವ್ಯ ವಾರ್ನಿಂಗ್!
ಈ ವಾರ ರಕ್ಷಿತಾ ಶೆಟ್ಟಿ ಅವರು ತಮ್ಮ ಅನಿಸಿಕೆಗಳನ್ನು ಮುಲಾಜಿಲ್ಲದೇ ಹೇಳಿದ್ದರು. ಕಾವ್ಯ ಬೆನ್ನಿಗೆ ರಕ್ಷಿತಾ ಶೆಟ್ಟಿ ಚೂರಿ ಹಾಕಿದ್ದರು. ಇದು ಕಾವ್ಯಾಗೂ ಕೋಪ ಬಂದಿದೆ. ಅಷ್ಟೇ ಅಲ್ಲ ನಿನ್ನೆ ಮೊದಲ ಹಂತದಲ್ಲಿ ಮಾಳು ನಿಪನಾಳ ಮತ್ತು ರಕ್ಷಿತಾ ಶೆಟ್ಟಿ ಅವರು ಟಾಸ್ಕ್ ಗೆದ್ದರು.
ಅದನ್ನು ಬಿಗ್ ಬಾಸ್ ಘೋಷಿಸಿದಾಗ ಗಿಲ್ಲಿ ನಟ ಅವರು ರಕ್ಷಿತಾಳನ್ನು ಅಭಿನಂದಿಸಲು ಮುಂದಾದರು. ‘ನನ್ನ ವಂಶದ ಕುಡಿ’ ಎಂದು ರಕ್ಷಿತಾನ ತಬ್ಬಿಕೊಳ್ಳಲು ಹೋದ ಗಿಲ್ಲಿಗೆ ಕಾವ್ಯ ಅವರು ವಾರ್ನಿಂಗ್ ಕೊಟ್ಟರು.