ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಟಾಸ್ಕ್ ಮಾಸ್ಟರ್‌, ಈ ಸೀಸನ್ ಮೊದಲ ಫೈನಲಿಸ್ಟ್ ಧನುಷ್‌ ಜರ್ನಿ ಹೇಗಿತ್ತು?

Dhanush Gowda: ಬಿಗ್‌ ಬಾಸ್‌ ಕನ್ನಡ 12ರ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ ತಲುಪಿದ್ದಾರೆ. ಧ್ರುವಂತ್‌ ಔಟ್‌ ಆಗಿದ್ದಾರೆ. ಬಿಗ್‌ ಬಾಸ್‌ ಸೀಸನ್‌ನ ಈ ಆರು ಸ್ಪರ್ಧಿಗಳ ಜರ್ನಿಯೇ ಬಹಳ ರೋಚಕ. ಮೊದಲಾಗಿ ಧನುಷ್‌ ಗೌಡ. ಹಲವು ಬಾರಿ ಮನೆಯ ಕ್ಯಾಪ್ಟನ್‌ ಆದ ಕೀರ್ತಿ ಧನುಷ್‌ಗೆ ಸಲ್ಲುತ್ತದೆ. ಅಷ್ಟೇ ಅಲ್ಲ ಈ ಸೀಸನ್‌ ಕಟ್ಟ ಕಡೆಯ ಕ್ಯಾಪ್ಟನ್‌ ಕೂಡ ಧನುಷ್‌ ಆಗಿದ್ದರು.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಕನ್ನಡ 12ರ (Bigg Boss Kannada 12) ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ ತಲುಪಿದ್ದಾರೆ. ಧ್ರುವಂತ್‌ ಔಟ್‌ ಆಗಿದ್ದಾರೆ. ಬಿಗ್‌ ಬಾಸ್‌ ಸೀಸನ್‌ನ ಈ ಆರು ಸ್ಪರ್ಧಿಗಳ ಜರ್ನಿಯೇ ಬಹಳ ರೋಚಕ. ಮೊದಲಾಗಿ ಧನುಷ್‌ ಗೌಡ (Dhanush Gowda Bigg Boss Journey). ಹಲವು ಬಾರಿ ಮನೆಯ ಕ್ಯಾಪ್ಟನ್‌ ಆದ ಕೀರ್ತಿ ಧನುಷ್‌ಗೆ ಸಲ್ಲುತ್ತದೆ. ಅಷ್ಟೇ ಅಲ್ಲ ಈ ಸೀಸನ್‌ ಕಟ್ಟ ಕಡೆಯ ಕ್ಯಾಪ್ಟನ್‌ (Captain) ಕೂಡ ಧನುಷ್‌ ಆಗಿದ್ದರು. ಈ ಸೀಸನ್‌ ಟಾಸ್ಕ್‌ ಮಾಸ್ಟರ್‌ (Task master) ಅಂದರೆ ಧನುಷ್‌, ಈ ಬಿರುದು ಅವರು ಈ ಸೀಸನ್‌ನಲ್ಲಿ ಪಡೆದುಕೊಂಡಿದ್ದಾರೆ.

ಟಾಪ್‌ 6ಗೆ ಮೊದಲ ಎಂಟ್ರಿ!

ಕಳೆದ ವಾರ ಧನುಷ್ ಅವರು ಕ್ಯಾಪ್ಟನ್ ಆದರು. ಅವರು ಈ ಸೀಸನ್​ನ ಕೊನೇ ಕ್ಯಾಪ್ಟನ್ ಆದ್ದರಿಂದ ಅವರಿಗೆ ಕೆಲವು ವಿಶೇಷ ಅಧಿಕಾರಗಳು ಸಿಕ್ಕವು. ಟಾಪ್ 6 ಆಟದಲ್ಲಿ ನೇರವಾಗಿ ಸ್ಪರ್ಧಿಸುವ ಚಾನ್ಸ್ ಅವರಿಗೆ ಸಿಕ್ಕಿತ್ತು. ಅದನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡರು. ಆರಂಭದಲ್ಲಿ ಧನುಷ್ ಅವರು ಹೆಚ್ಚು ಆ್ಯಕ್ಟೀವ್ ಆಗಿರಲಿಲ್ಲ.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಮನೆಗೆ ʻರಾಣಿʼ ಎಂಟ್ರಿ! ಅಶ್ವಿನಿ ಗೌಡ ಭಾವುಕ

ಟಾಸ್ಕ್ ಚೆನ್ನಾಗಿ ಆಡಿದ್ದರೂ ಕೂಡ ಮನರಂಜನೆ ನೀಡುವುದರಲ್ಲಿ ಹಿಂದುಳಿದಿದ್ದರು. ಆದರೆ ಟಾಸ್ಕ್​​ನಲ್ಲಿ ಸಿಕ್ಕ ಅವಕಾಶಗಳನ್ನು ಅವರು ಸೂಕ್ತವಾಗಿ ಉಪಯೋಗಿಸಿಕೊಂಡು ಇನ್ನುಳಿದವರನ್ನು ಹಿಂದಿಕ್ಕಿದರು.



ಸೈಕಲ್‌ ತುಳಿದು ಭೇಷ್‌ ಎನಿಸಿಕೊಂಡಿದ್ದ ಧನುಷ್‌

ಡೇಂಜರಸ್‌ ವೀಕ್‌ನಲ್ಲಿ ಇಡೀ ಮನೆ ನಿದ್ದೆ ಮಾಡಬೇಕು ಅಂದ್ರೆ ಧನುಷ್ ಹಾಗೂ ರಘು ನಿರಂತರವಾಗಿ ಇಡೀ ರಾತ್ರಿ ಸೈಕಲ್ ತುಳಿಯುತ್ತಲೇ ಇರಬೇಕಿತ್ತು. ಈ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದರು. ಇಡೀ ರಾತ್ರಿ ಧನುಷ್ ಹಾಗೂ ರಘು ಸೈಕಲ್‌ ತುಳಿದು ಭೇಷ್‌ ಎನಿಸಿಕೊಂಡಿದ್ದರು. ಇದಂತಲ್ಲ ಯಾವುದೇ ಟಾಸ್ಕ್‌ ಕೊಟ್ಟರೂ ಧನುಷ್‌ ಲೀಲಾ ಜಾಲವಾಗಿ ಮಾಡಿ ಮುಗಿಸುತ್ತಾರೆ. ಯಾವುದೊಂದು ಟಾಸ್ಕ್‌ನಲ್ಲಿಯೂ ಫೇಲ್‌ ಆಗದ ಸ್ಪರ್ಧಿ ಅಂದರೆ ಅದುವೇ ಧನುಷ್‌.

ನೆಗೆಟಿವ್‌ ಏನು?

ಪ್ರತಿಯೊಂದು ಟಾಸ್ಕ್ ಗಳನ್ನು ಅದ್ಭುತವಾಗಿ ಮಾಡುವ, ಯಾವಾಗಲೂ ಎಷ್ಟು ಬೇಕು ಅಷ್ಟು ಮಾತಾಡಿಕೊಂಡು ಸೈಲೆಂಟ್ ಆಗಿರುವ ಧನುಷ್ ಗೌಡ ಬಿಗ್ ಬಾಸ್ ನಲ್ಲಿ ಹೈಲೈಟ್ ಆಗ್ತಾನೆ ಇಲ್ಲ ಎಂದು ಅನೇಕ ಬಾರಿ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು.

ಕಿಚ್ಚನ ಚಪ್ಪಾಳೆ ಪಡೆದುಕೊಂಡಿದ್ದ ಧನುಷ್‌

ಬಿಗ್​ಬಾಸ್​ನಲ್ಲಿ ಕಿಚ್ಚನ ಚಪ್ಪಾಳೆಗಾಗಿ ಸ್ಪರ್ಧಿಗಳು ಕಾಯ್ತಿರುತ್ತಾರೆ. ಧನುಷ್‌ ಅವರ ತ್ಯಾಗ ಹಾಗೂ ಸೈಲೆನ್ಸ್‌ ವಿಚಾರಕ್ಕೆ ಕಿಚ್ಚ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಿಚ್ಚ ಸುದೀಪ್‌ ಮೊದಲಿಗೆ ಲೆಟರ್‌ ವಿಚಾರವನ್ನು ಪ್ರಸ್ತಾಪಿಸಿದರು. ಕೆಲವೊಮ್ಮೆ ಇಲ್ಲಿ, ಅಂದರೆ ಹಿಂದಿನ ಸೀಸನ್‌ನಲ್ಲಿಯೂ ಈ ರೀತಿ ನಡೆದಿತ್ತು. ತ್ಯಾಗ ಮಾಡಿದ ತಕ್ಷಣ ಎಲ್ಲವೂ ಸತ್ಯ ಅಂತಲ್ಲ. ತ್ಯಾಗ ಮಾಡಿದ ತಕ್ಷಣ ಅವರು ತಪ್ಪು ಅಂತಲ್ಲ. ಕೆಲವೊಮ್ಮೆ ತ್ಯಾಗ ಮಾಡಿರೋದನ್ನ ಪದೇ ಪದೇ ಹೇಳಿಕೊಳ್ಳುವವರೂ ಇರ್ತಾರೆ.



ವೋಟ್‌ ಸಿಗಬೇಕು ಎನ್ನುವ ಕಾರಣವೂ ಇರಬಹುದು. ಅಂತಹದರಲ್ಲಿ ಎಲ್ಲಿಯೂ ಮಾತನಾಡದೇ, ತ್ಯಾಗ ಮಾಡಿರೋದನ್ನ ಕೂಡ ಹೇಳದೇ ಸೈಲೆಂಟ್‌ ಆಗಿ ಇದ್ದು, ವ್ಯಕ್ತಿತ್ವ ಗೆದ್ದಿರುವ ಧನುಷ್‌ ಅವರಿಗೆ ಕಿಚ್ಚನ ಚಪ್ಪಾಳೆ ಎಂದಿದ್ದರು ಕಿಚ್ಚ. ಈ ಕೈಯಲ್ಲಿ ಕೊಟ್ಟಿದ್ದು, ಮತ್ತೊಂದು ಕೈಗೆ ಗೊತ್ತಾಗದ ರೀತಿಯಲ್ಲಿ ನಡೆದುಕೊಂಡ್ರಿ. ಇದು ಇಷ್ಟವಾಯಿತು ಎಂದು ಕಿಚ್ಚ ಅವರು ಧನುಷ್‌ ಅವರನ್ನು ಹೊಗಳಿದ್ದರು ಕಿಚ್ಚ.

ಇದನ್ನೂ ಓದಿ: Bigg Boss Kannada 12: ಸ್ಪರ್ಧಿಗಳಿಗೆ ಬಿಗ್‌ ಸರ್‌ಪ್ರೈಸ್‌ ಕೊಟ್ಟ ಕಿಚ್ಚ!

ತುಂಬಾ ಸೈಲೆಂಟ್‌, ಕಾಮ್‌ ಹಾಗೇ ಅತ್ಯಂತ ಏಕಾಗ್ರತೆಯಿಂದ ಟಾಸ್ಕ್‌ ನಿಭಾಯಿಸಿರುವ ಧನುಷ್‌ ಈಗ ಫಿನಾಲೆಗೆ ಹೋಗಿದ್ದಾರೆ. ಗೆದ್ದು ಬಾ ಧನುಷ್‌ ಅಂತ ಅವರ ಫ್ಯಾನ್ಸ್‌ ಹಾರೈಸಿದ್ದಾರೆ, ಈ ಸೀಸನ್‌ ಟ್ರೋಫಿ ಯಾರ ಪಾಲು ಆಗಲಿದ ಎಂಬುದೇ ವೀಕ್ಷಕರಲ್ಲಿ ಇರೋ ಕುತೂಹಲ.

Yashaswi Devadiga

View all posts by this author