ಬಿಗ್ ಬಾಸ್ ಸೀಸನ್ ಫಿನಾಲೆ (Bigg Boss Kannada 12) ಕ್ಷಣಗಣೆ ಆರಂಭಗೊಂಡಿದೆ. ಇದೀಗ ಹೊಸ ಪ್ರೋಮೋ ಔಟ್ ಆಗಿದೆ. ಪ್ರೋಮೋ ನೋಡಿ ವೀಕ್ಷಕರು ಶಾಕ್ ಆಗಿದ್ದಾರೆ. ಈ ಬಾರಿಯ ವೋಟಿನ (Total Vote) ಲೆಕ್ಕ ಕೊಟ್ಟಿದ್ದಾರೆ ಕಿಚ್ಚ ಸುದೀಪ್ (Sudeep). ಸ್ಪರ್ಧಿಗಳು ಊಹಿಸಿದ್ದಕ್ಕಿಂತ ಹೆಚ್ಚು ವೋಟ್ ವಿನ್ನರ್‌ಗೆ (Winner) ಸಿಕ್ಕಿದೆ. ಹಾಗಾದ್ರೆ ಈ ಸೀಸನ್ ವಿನ್ನರ್ ಯಾರು ಇರಬೋದು? ಯಾರಿಗೆ ಇಷ್ಟು ವೋಟ್ ಸಿಕ್ಕಿದೆ?
ಪ್ರೋಮೋದಲ್ಲಿ ಸುದೀಪ್ ಅವರು, ಕಳೆದ ವರ್ಷ ವಿನ್ನರ್‌ಗೆ 5 ಕೋಟಿ ರೂ ಚಿಲ್ಲರೆ ವೋಟ್ ಬಂದಿತ್ತು. ಈ ಕ್ರೇಜ್ ಕ್ರಿಯೇಟ್ ಆಗಿ ಈ ಸೀಸನ್‌ನಲ್ಲಿ ಎಷ್ಟು ವೋಟ್ ಬಂದಿರಬಹುದು? ಅಂತ ಸ್ಪರ್ಧಿಗಳಿಗೆ ಸುದೀಪ್ ಪ್ರಶ್ನೆ ಇಟ್ಟರು. ಆಗ ರಘು ಅವರು 12 ರಿಂದ 13 ಕೋಟಿ ವೋಟ್ ಬಂದಿರಬಹುದು ಎಂದರು.
ಗಿಲ್ಲಿ ಇದ್ದವರು 8 ರಿಂದ 10 ಕೋಟಿ ವೋಟ್ ಬಂದಿರಬಹುದು ಎಂದರು. ಮೊದಲನೇ ಸ್ಥಾನ 12 ಗಂಟೆ ತನಕ ಬಂದದ್ದು 37+ ಕೋಟಿ ವೋಟುಗಳು. ಎರಡನೇ ಸ್ಥಾನ ಬಹಳ ಅಂತರದ ಕಮ್ಮಿ ಇದೆ ಎಂದರು ಕಿಚ್ಚ.
ಇದನ್ನೂ ಓದಿ: Bigg Boss Kannada 12: ನಾನು ಶಿವಣ್ಣ ಅವರ ಕಾಲು ಧೂಳಿಗೂ ಸಮ ಇಲ್ಲ ಎಂದ ಗಿಲ್ಲಿ ನಟ!
ಕಲರ್ಸ್ ಕನ್ನಡ ಪ್ರೋಮೋ
ಅಂದಹಾಗೆ, ಕಳೆದ ಸೀಸನ್‌ನಲ್ಲಿ ಹನುಮಂತ ಲಮಾಣಿ ಅವರು ವಿನ್ನರ್ ಆಗಿದ್ದರು. ಅವರು ದಾಖಲೆಯ 5.23 ಕೋಟಿ ಮತಗಳನ್ನು ಪಡೆದುಕೊಂಡಿದ್ದರು. ಇದು ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಸ್ಪರ್ಧಿಯೊಬ್ಬರು ಪಡೆದ ಅತಿ ಹೆಚ್ಚು ಮತಗಳ ದಾಖಲೆಯಾಗಿದೆ. ರನ್ನರ್ ಅಪ್ ಆಗಿದ್ದ ತ್ರಿವಿಕ್ರಮ್ ಅವರು ಸುಮಾರು 2.53 ಕೋಟಿ ಮತಗಳನ್ನು ಪಡೆದಿದ್ದರು. ಇದೀಗ ಈ ಎಲ್ಲ ದಾಖಲೆಗಳನ್ನು ಉಡೀಸ್ ಮಾಡಿದ್ದಾರೆ ಸ್ಪರ್ಧಿ.
ಗಿಲ್ಲಿ ಕ್ರೇಜ್!
ಪ್ರೋಮೋ ಔಟ್ ಆದ ಕೂಡಲೇ ಕಮೆಂಟ್‌ನಲ್ಲಿ ಗಿಲ್ಲಿನೇ ವಿನ್ನರ್ ಅಂತ ಕಮೆಂಟ್ ಮಾಡ್ತಿದ್ದಾರೆ ವೀಕ್ಷಕರು. ಧ್ರುವಂತ್ ಅವರು ಮಿಡ್ ವೀಕ್ ಅಲ್ಲಿ ಎಲಿಮಿನೇಟ್ ಆದಮೇಲೆ ಬಿಗ್ ಬಾಸ್ ಮನೆಯಲ್ಲಿ ಧನುಷ್, ಅಶ್ವಿನಿ ಗೌಡ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ರಘು ಮತ್ತು ಕಾವ್ಯ ಉಳಿದುಕೊಂಡಿದ್ದಾರೆ. ಇವರೆಲ್ಲರೂ ಫೈನಲಿಸ್ಟ್ ಆಗಿದ್ದು, ಇವರಲ್ಲಿ ಯಾರಿಗೆ ಜಾಸ್ತಿ ವೋಟ್ ಬರಲಿದೆಯೋ, ಅವರೇ ಈ ಸೀಸನ್‌ನ ವಿನ್ನರ್. ಈಗಾಗಲೇ ವೋಟಿಂಗ್ ಲೈನ್ಸ್ ಓಪನ್ ಆಗಿದ್ದು, ಬಿಗ್ ಬಾಸ್ ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Bigg Boss Kannada 12: ಈ ಸೀಸನ್ ವಿನ್ನರ್‌ಗೆ ಬಂದಿದೆ ಬರೋಬ್ಬರಿ 37 ಕೋಟಿಗೂ ಅಧಿಕ ವೋಟುಗಳು! ಯಾರದು?
ಜಿಯೋ ಹಾಟ್‌ಸ್ಟಾರ್ ಆಪ್ ಮೂಲಕ ಒಬ್ಬ ಸ್ಪರ್ಧಿಗೆ ಒಬ್ಬ ಬಳಕೆದಾರರು 99 ವೋಟ್‌ಗಳನ್ನು ಹಾಕಬಹುದಾಗಿದೆ. ಸದ್ಯ ವೋಟಿಂಗ್ ಆರಂಭವಾಗಿದ್ದು, ಜನವರಿ 18ರ ಭಾನುವಾರ ಬೆಳಗ್ಗೆ 10 ಗಂಟೆವರೆಗೂ ವೋಟಿಂಗ್ ಮಾಡಲು ಅವಕಾಶ ಇರುತ್ತದೆ. ಹಾಗಾಗಿ, ಸೋಶಿಯಲ್ ಮೀಡಿಯಾದಲ್ಲಿ ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಹಾಕಿ ಎಂದು ಅವರ ಬೆಂಬಲಿಗರು ಪ್ರಚಾರ ಮಾಡುತ್ತಿದ್ದಾರೆ.