ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಟಾಸ್ಕ್‌ ಅಂತ ಗೊತ್ತಿದ್ದರೂ ಅತಿಥಿಗಳ ಜೊತೆ ಗಿಲ್ಲಿ ಹಿಂಗೆ ವರ್ತಿಸುತ್ತಿರುವುದೇಕೆ? ಉಳಿದ ಸ್ಪರ್ಧಿಗಳಿಗೆ ಶುರುವಾಯ್ತು ಪುಕಪುಕ!

BBK 12 Gilli Nata: 'ಬಿಗ್ ಬಾಸ್ ಪ್ಯಾಲೇಸ್' ಟಾಸ್ಕ್‌ನಲ್ಲಿ ಹೋಟೆಲ್ ಸಿಬ್ಬಂದಿಯಾಗಿ ಪಾತ್ರ ನಿರ್ವಹಿಸುತ್ತಿರುವ ಗಿಲ್ಲಿ ನಟ, ನಿಯಮಗಳನ್ನು ಗಾಳಿಗೆ ತೂರಿ ವೈಯಕ್ತಿಕ ಆಟವಾಡುತ್ತಿದ್ದಾರೆ. ಅತಿಥಿಗಳಾಗಿ ಬಂದಿರುವ ಹಿಂದಿನ ಸೀಸನ್‌ನ ಸ್ಪರ್ಧಿಗಳಾದ ರಜತ್, ಉಗ್ರಂ ಮಂಜು ಅವರ ಕಾಲೆ ಎಳೆಯುತ್ತಿದ್ದಾರೆ. ಕ್ಯಾಪ್ಟನ್‌ ಅಭಿಷೇಕ್‌ಗೂ ಕೂಡ ಗಿಲ್ಲಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ʻಬಿಗ್‌ ಬಾಸ್‌ʼ ಮನೆಯಲ್ಲಿ ಈಗ ಪ್ಯಾಲೇಸ್‌ ಟಾಸ್ಕ್‌ ನಡೆಯುತ್ತಿದೆ. ಅದಕ್ಕಾಗಿ ಹಿಂದಿನ ಸೀಸನ್‌ನ ಸ್ಪರ್ಧಿಗಳನ್ನು ಕರೆಸಿಕೊಳ್ಳಲಾಗಿದೆ. ಉಗ್ರಂ ಮಂಜು, ರಜತ್‌, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ಮತ್ತು ತ್ರಿವಿಕ್ರಮ್‌ ಅವರು ಬಿಗ್‌ ಬಾಸ್‌ ಮನೆಯೊಳಗೆ ಕಾಲಿಟ್ಟಿದ್ದಾರೆ. ಸದ್ಯ ಸ್ಪರ್ಧಿಗಳೆಲ್ಲರೂ ಹೋಟೆಲ್‌ನ ಸಿಬ್ಬಂದಿಗಳಂತೆ ಬದಲಾಗಿದ್ದಾರೆ. ಆದರೆ ಗಿಲ್ಲಿ ನಟ ಮಾತ್ರ ಪಾತ್ರದಿಂದ ಆಚೆ ಬಂದು ವರ್ತಿಸುತ್ತಿರುವುದು ಉಳಿದವರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ಗಿಲ್ಲಿ ನಟ ಮಾಡಿದ್ದೇನು?

ಸದ್ಯ ಟಾಸ್ಕ್‌ನ ರೂಪುರೇಷೆ ಹೇಗಿದೆ ಎಂದರೆ, ಸ್ಪರ್ಧಿಗಳೆಲ್ಲರೂ ಹೋಟೆಲ್‌ ಸಿಬ್ಬಂದಿಯಾಗಿರಬೇಕು. ಅವರಿಗೆ ನೀಡಿರುವ ಪಾತ್ರಗಳಲ್ಲೇ ಜೀವಿಸಬೇಕು. ಕ್ಯಾಪ್ಟನ್‌ ಆಗಿರುವ ಅಭಿಷೇಕ್‌ ಈ ಬಿಬಿ ಪ್ಯಾಲೇಸ್‌ನ ಮ್ಯಾನೇಜರ್‌ ಆಗಿದ್ದರೆ, ಸ್ಪದಂನಾ ರಿಸೆಪ್ಷನಿಸ್ಟ್‌ ಆಗಿದ್ದಾರೆ. ಹೀಗೆ ಬೇರೆಯವರಿಗೆ ಬೇರೆ ಬೇರೆ ಜವಾಬ್ದಾರಿ ನೀಡಲಾಗಿದೆ. ಅಶ್ವಿನಿ ಮತ್ತು ಗಿಲ್ಲಿಗೆ ಸಪ್ಲೇಯರ್‌ ಪಾತ್ರಗಳನ್ನು ನೀಡಲಾಗಿದೆ. ಆದರೆ ಗಿಲ್ಲಿ ಮಾತ್ರ ಆ ಪಾತ್ರದಿಂದ ಆಚೆ ಬಂದು ವರ್ತಿಸುತ್ತಿದ್ದಾರೆ.

BBK 12: ವೀಕ್ಷಕರು ನಿರೀಕ್ಷಿಸಿದಂತೆಯೇ ಆಯ್ತು; ಗಿಲ್ಲಿ ನಟನ ಮಾತಿಗೆ ʻಕಿಚ್ಚʼ ಸುದೀಪ್‌ ನಾನ್‌ಸ್ಟಾಪ್‌ ನಗು!

ಅತಿಥಿಗಳಿಗೆ ಕಿರಿ ಕಿರಿ ಆಗ್ತಿದೆಯಾ?

ಇನ್ನು, ಮನೆಯೊಳಗೆ ಬಂದಿರುವ ಅತಿಥಿಗಳಿಗೆ ಗಿಲ್ಲಿ ವರ್ತನೆಯಿಂದ ಕಿರಿಕಿರಿ ಆಗ್ತಾ ಇದೆಯಾ ಎಂಬ ಪ್ರಶ್ನೆ ಮೂಡಿದೆ. ಸದ್ಯ ರಿಲೀಸ್‌ ಆಗಿರುವ ಹೊಸ ಪ್ರೋಮೋದಲ್ಲಿ "ಇಲ್ಲಿಗೆ ವಾವ್‌ ಅನ್ನೋ ಥರ ಯಾರಾದರೂ ಬರ್ತಾರೆ ಎಂದುಕೊಂಡಿದ್ದೆ. ಆದರೆ ಇಲ್ಲಿ ವ್ಯಾ ಥೂ ಅನ್ನೋ ಥರ ಆಗೋಯ್ತು. ಐದು ಜನ ನೆಂಟರು ಬಂದ್ರು. ತಿಂದ್ರು ತಿಂದ್ರು, ತಿಂದಮೇಲೆ ದೌಲತ್ತು. ತಿನ್ನೋ ಅವರಿಗೆ ಇಷ್ಟು ಇರಬೇಕಾದರೆ, ತಂದಾಕುವ ನಮಗೆ ಎಷ್ಟಿರಬೇಡ" ಅಂತ ಗಿಲ್ಲಿ ಹೇಳಿರುವುದು ಅತಿಥಿಗಳಿಗೆ ಕಿರಿಕಿರಿ ಉಂಟು ಮಾಡಿದೆ. ಅದಕ್ಕೂ ಮುಂಚೆ ಮಂಜು ಮದುವೆ ಬಗ್ಗೆ ಮಾತಾಡ್ತಾ, "ಎರಡನೇಯದ್ದಾ ಅಥವಾ ಮೂರನೇದ್ದಾ?” ಅಂತ ಗಿಲ್ಲಿ ಪ್ರಶ್ನೆ ಮಾಡಿದ್ದು, ಮತ್ತೊಂದು ಕಡೆ, "ನೀವೆಲ್ಲರೂ ಬಿಟ್ಟಿ ಊಟ ಮಾಡೋಕೆ ಬಂದಿದ್ದೀರಾ?” ಎಂದು ಗಿಲ್ಲಿ ಕೇಳಿದ್ದು ಅತಿಥಿಗಳಿಗೆ ಕಿರಿಕಿರಿ ಎನಿಸಿತ್ತು.

Bigg Boss Kannada 12: ಗಿಲ್ಲಿ ನಟ ಕ್ಷಮೆ ಕೇಳಿದ್ರೂ, ಕೇಳಿಲ್ಲ ಅಂತ ಅಭಿಷೇಕ್‌ ಹೇಳಿದ್ದೇಕೆ?

ಬಿಬಿಕೆ 12 ಹೊಸ ಪ್ರೋಮೋ



ಸ್ಪರ್ಧಿಗಳಿಗೆ ಢವಢವ

ಈ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಅತಿಥಿಗಳನ್ನು ಮೆಚ್ಚಿಸಬೇಕು, ಅವರಿಂದ ಟಿಪ್ಸ್‌ ಪಡೆಯಬೇಕು. ನಂತರ ಅದು ಕ್ಯಾಪ್ಟನ್ಸಿ ಟಾಸ್ಕ್‌ಗೆ ಅನುಕೂಲವಾಗುತ್ತದೆ. ಆದರೆ ಗಿಲ್ಲಿ ನಟ ಎಲ್ಲಾ ನಿಮಯಮಗಳನ್ನು ಗಾಳಿಗೆ ತೂರಿ ಅತಿಥಿಗಳ ಕಾಲನ್ನೇ ಎಳೆಯುತ್ತಾ ಮಜಾ ಮಾಡುತ್ತಿರುವುದು ಮಿಕ್ಕ ಸ್ಪರ್ಧಿಗಳಿಗೆ ಆತಂಕ ಉಂಟು ಮಾಡಿದೆ. ಅಭಿಷೇಕ್‌ ಪದೇಪದೇ ಗಿಲ್ಲಿ ಕಂಟ್ರೋಲ್‌ ಮಾಡುವುದು, ಗಿಲ್ಲಿ ಮಾತನಾಡುವಾಗ ಸೂರಜ್‌ ತಡೆಯುವುದಕ್ಕೆ ಮುಂದಾಗುವುದನ್ನು ವೀಕ್ಷಕರು ಗಮನಿಸಿದ್ದಾರೆ. ಒಟ್ನಲ್ಲಿ ಯಾರೇ ಬಂದರೂ ಗಿಲ್ಲಿ ನಟನ ವೈಯಕ್ತಿಕ ಆಟಕ್ಕೆ ಯಾರಿಂದಲೂ ಕಡಿವಾಣ ಹಾಕಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ ಅನ್ನೋದಂತೂ ಸತ್ಯ.

ಇನ್ನೂ ಎರಡ್ಮೂರು ದಿನ ಈ ಟಾಸ್ಕ್‌ ಮುಂದುವರಿಯಲಿದ್ದು, ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್‌ ಅವರು ಈ ಬಗ್ಗೆ ಏನಾದರೂ ಮಾತನಾಡಬಹುದೇ ಎಂಬ ನಿರೀಕ್ಷೆ ಆಡಿಯನ್ಸ್‌ಗೆ ಇದೆ.