ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ಈ ವಾರ ಬಿಗ್ ಬಾಸ್ ಮನೆಗೆ ಹಳೇ ಸೀಸನ್ ಸ್ಪರ್ಧಿಗಳಾದ ಉಗ್ರಂ ಮಂಜು (Ugram Manju), ಮೋಕ್ಷಿತಾ ಪೈ, ರಜತ್, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಅತಿಥಿಗಳಾಗಿ ಬಂದಿದ್ದಾರೆ. ಅವರನ್ನು ರೋಸ್ಟ್ ಮಾಡಲು ಗಿಲ್ಲಿಗೆ (Gilli Nata) ಬಿಗ್ ಬಾಸ್ ಅವಕಾಶ ಕೊಟ್ಟರು. ಅಷ್ಟೇ ಅಲ್ಲ ಬಂದಾಗಿನಿಂದ ಗಿಲ್ಲಿ ಹಾಗೂ ಉಗ್ರಂ ಮಂಜು ನಡುವೆ ಜಗಳ ಆಗುತ್ತಲೇ ಇದೆ. ನಿನ್ನೆ ಕೆಲಸ ಕೊಡುವ ಮೂಲಕ ಉಗ್ರಂ ಮಂಜು ಗಿಲ್ಲಿ ಮೇಲಿನ ಸಿಟ್ಟನ್ನು ತೀರಿಸಿಕೊಂಡಂತಿದೆ. ಉಗ್ರಂ ಮಂಜು ನಡೆಗೆ ಫ್ಯಾನ್ಸ್ (Fans) ಕೆಂಡ ಆಗಿದ್ದಾರೆ.
ಗಿಲ್ಲಿಯೇ ಕ್ಲಿನರ್
ಗಿಲ್ಲಿ ಪ್ರತಿ ಮಾತಿಗೂ ಉಗ್ರಂ ಮಂಜು ರಿಯಾಕ್ಟ್ ಮಾಡ್ತಾ ಇದ್ದರು. ಬೇಕು ಅಂತ ಟೇಬಲ್ ಮೇಲೆ ನೀರು ಚೆಲ್ಲೋದು, ಟೇಬಲ್ ನಲ್ಲಿ ನೀರು ಚೆಲ್ಲಿ, ಕಾಫಿ ಚೆಲ್ಲಿ, ಕಸ ಮಾಡಿ, ಗಿಲ್ಲಿ ಬಳಿ ಕ್ಲೀನ್ ಮಾಡಿಸೋದು. ಗಿಲ್ಲಿ ಪಾತ್ರದಲ್ಲಿ ವೈಟರ್ ಆಗಿದ್ದರು. ಆದರೆ ಗಿಲ್ಲಿಯೇ ಕ್ಲಿನರ್ ಆಗಿ ಕ್ಲಿನ್ ಮಾಡುವಂತೆ ಹೇಳಿದ್ದಾರೆ ಮಂಜು. ಅಷ್ಟೇ ಅಲ್ಲ ಗಿಲ್ಲಿ ವಿಚಾರಕ್ಕೆ ಉಗ್ರಂ ಮಂಜು ಅವರು ಚೇರ್ ಎತ್ತಿ ಬಿಸಾಡಿ, ಅಭಿ ವಿರುದ್ಧವೇ ಕೂಗಾಡಿದ್ದಾರೆ. ಮ್ಯಾನೇಜರ್ ಅಂತ ಪ್ರೀತಿ, ವಿಶ್ವಾಸ ಇದೆ. ನೀರು ಕೊಡು ಅಂದರೆ ಕುಡಿದು ಕೊಡ್ತಾನೆ ಎಂದು ಅಬ್ಬರಿಸಿದ್ದಾರೆ.
ಇದನ್ನೂ ಓದಿ: Bigg Boss Kannada 12: ಜಾಹ್ನವಿ ಕುತಂತ್ರ ಫಲಿಸಿತಾ? ಅಸಲಿಗೆ ಗಿಲ್ಲಿ- ಕಾವ್ಯ ಮಾತನಾಡಿದ್ದಾದ್ರೂ ಏನು?
ಫ್ಯಾನ್ಸ್ ಕೆಂಡ
ಇನ್ನು ಉಗ್ರಂ ಮಂಜು ನಡೆಗೆ ಫ್ಯಾನ್ಸ್ ಕೂಡ ಕೆಂಡ ಆಗಿದ್ದಾರೆ. ʻಯಾವ ಅತಿಥಿ ಈ ರೀತಿ ಮಾಡ್ತಾನೆ ಮನೆಗೆ ಬಂದು. ಇದು ಎಷ್ಟು ಸರಿ ನೀವೇ ಹೇಳಿ ಗಿಲ್ಲಿನ ಎಷ್ಟು ಅಂತ target ಮಾಡ್ತಾ ಇದಾರೆ ನೋಡಿ ನೀವೇ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ವೈರಲ್ ವಿಡಿಯೋ
ಗಿಲ್ಲಿ ರೋಸ್ಟ್‌ಗೆ ಸೈಲೆಂಟ್ ಆದ್ರು ಮಾಜಿ ಸ್ಪರ್ಧಿಗಳು
‘ಜಡ್ಜಸ್ ತಮ್ಮ ಕೆಲಸ ಮಾಡುತ್ತಿಲ್ಲ. ಅವರು ಇಲ್ಲಿ ನಮಗೆ ಬೂಸ್ಟ್ ಆಗುತ್ತಾರೆ ಎಂದುಕೊಂಡಿದ್ದೆ. ಆದರೆ ಇಲ್ಲಿ ಬಂದು ನನ್ನ ಕೈಯಲ್ಲಿ ಸಿಕ್ಕಿಕೊಂಡು ಡಿಪ್ರೆಷನ್ನಲ್ಲಿ ಇದ್ದಾರೆ’ ಎಂದು ಗಿಲ್ಲಿ ನಟ ಹೇಳಿದರು.
ಇದನ್ನೂ ಓದಿ: Bigg Boss Kannada 12: ಜಾಹ್ನವಿ ಕುತಂತ್ರ ಫಲಿಸಿತಾ? ಅಸಲಿಗೆ ಗಿಲ್ಲಿ- ಕಾವ್ಯ ಮಾತನಾಡಿದ್ದಾದ್ರೂ ಏನು?
ನಾವು ಇಲ್ಲಿ ಮೊದಲೇ ಬಂದು ಹೋಗಿದ್ದೇವೆ.ಇವನು ಇಷ್ಟು ಕಿರಿಕಿರಿ ಎಂಬುದು ನನಗೆ ಹೊರಗೆ ಇದ್ದಾಗ ಗೊತ್ತಿರಲಿಲ್ಲ. ಇವನು ತುಂಬಾ ಕಿರಿಕಿರಿ ಮಾಡುತ್ತಿದ್ದಾನೆ. ಒಂದು ಸರಿ ಹೇಳಿದರೆ ಅರ್ಥ ಆಗಲ್ಲ ಇವನಿಗೆ. ಮನುಷ್ಯರ ಜಾತಿಗೆ ಸೇರಿದವರು ಒಂದು ಸಲ ಹೇಳಿದರೆ ಅರ್ಥ ಮಾಡಿಕೊಳ್ಳಬೇಕು’ ಎಂದು ರಜತ್ ಅವರು ಕೂಗಾಡಿದರು.