ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಈ ವಾರ ಕೂಡ ವೋಟಿಂಗ್‌ ಲೈನ್‌ ತೆರೆದಿಲ್ಲ; ಆದರೂ ಇಬ್ಬರು ಸ್ಪರ್ಧಿಗಳು ಬಿಗ್‌ ಬಾಸ್‌ನಿಂದ ಹೊರಬೀಳುವುದು ಖಚಿತ!

BBK 12 Weekend Twist: ಬಿಗ್ ಬಾಸ್ ಕನ್ನಡ 12ರ ಮನೆಯಲ್ಲಿ ಈ ವಾರವೂ ನಾಮಿನೇಟ್ ಆದ ಸ್ಪರ್ಧಿಗಳಿಗೆ ಎಲಿಮಿನೇಷನ್ ಭೀತಿ ಇಲ್ಲ. ಯಾಕೆಂದರೆ ಕಳೆದ ವಾರದಂತೆ ಈ ವಾರವೂ ವೋಟಿಂಗ್ ಲೈನ್ಸ್ ತೆರೆದಿಲ್ಲ. ಆದರೆ, ಮನೆಯೊಳಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಂತೆ ಮಿಂಚುತ್ತಿದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಅವರು ಈ ವಾರ ಮನೆಯಿಂದ ಹೊರಹೋಗುವುದು ಖಚಿತ ಎನ್ನಲಾಗುತ್ತಿದೆ.

‌ʻಬಿಗ್‌ ಬಾಸ್ ಕನ್ನಡ 12’ರಲ್ಲಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಬರ್ತಿವೆ. ಇದು ಆರಂಭದಿಂದಲೂ ಇದನ್ನು ನಾವು ನೋಡಿಕೊಂಡೇ ಬಂದಿದ್ದೇವೆ ಕಳೆದ ವಾರ ಫೇಕ್‌ ಎಲಿಮಿನೇಷನ್‌ ಮಾಡಿ, ಧ್ರುವಂತ್‌ ಮತ್ತು ರಕ್ಷಿತಾ ಶೆಟ್ಟಿಯನ್ನ ಸೀಕ್ರೆಟ್‌ ರೂಮ್‌ಗೆ ಕಳುಹಿಸಲಾಗಿತ್ತು. ಈ ವಾರ ಕೂಡ ಬಿಗ್‌ ಬಾಸ್‌ ಮನೆಯಲ್ಲಿ ಎಲಿಮಿನೇಷನ್‌ ನಡೆಯೋದಿಲ್ಲ. ಯಾಕೆಂದರೆ, ಕಳೆದ ವಾರದಂತೆ ಈ ವಾರ ಕೂಡ ವೋಟಿಂಗ್‌ ಲೈನ್ಸ್‌ ತೆರೆದಿಲ್ಲ!

ವೋಟಿಂಗ್‌ ಲೈನ್ಸ್‌ ತೆರೆದಿಲ್ಲ, ಎಲಿಮಿನೇಷನ್‌ ಇಲ್ಲ!

ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಸ್ಪಂದನಾ ಸೋಮಣ್ಣ, ಮಾಳು ನಿಪನಾಳ್ ಸೇರಿದಂತೆ ಒಂದಷ್ಟು ನಾಮಿನೇಟ್ ಆಗಿದ್ದಾರೆ. ಈ ವಾರ ಯಾರು ಎಲಿಮಿನೇಟ್‌ ಆಗಬಹುದು? ಡಬಲ್‌ ಎಲಿಮಿನೇಷನ್‌ ಆಗಬಹುದಾ ಎಂಬೆಲ್ಲಾ ಮಾತುಗಳು ಕೇಳಿಬಂದಿದ್ದವು. ಈವರೆಗೂ ನಾಮಿನೇಟ್‌ ಆಗಿರುವ ಸ್ಪರ್ಧಿಗಳಿಗೆ ಒಂದು ಆತಂಕ ಇದ್ದೇ ಇದೆ. ಆದರೆ ಈ ವಾರ ವೋಟಿಂಗ್ ಲೈನ್ ಓಪನ್ ಆಗಿಲ್ಲ. ಕಳೆದ ವಾರ ಕೂಡ ಓಪನ್‌ ಆಗಿರಲಿಲ್ಲ. ಹಾಗಾಗಿ, ಸ್ಪರ್ಧಿಗಳ್ಯಾರು ಬಿಗ್‌ ಬಾಸ್‌ ಮನೆಯಿಂದ ಎಲಿಮಿನೇಟ್‌ ಆಗುವುದಿಲ್ಲ ಎನ್ನಲಾಗಿದೆ.

BBK 12: ಕಾದಿದ್ದು ಸಾಕು, ಬಿಗ್ ಬಾಸ್ ಈಸ್ ಬ್ಯಾಕ್: ಬಿಗ್ ಬಾಸ್ ಕನ್ನಡದ ಲೋಗೋ ಲಾಂಚ್

ಮನೆಯಿಂದ ಹೊರಗೆ ಹೋಗುವುದು ಖಚಿತ

ನಾಮಿನೇಟ್ ಆಗಿರುವ ಸ್ಪರ್ಧಿಗಳು ಎಲಿಮಿನೇಟ್‌ ಆಗದೇ ಇದ್ದರೂ, ಇಬ್ಬರು ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಯಿಂದ ಹೊರಗೆ ಹೋಗವುದು ಖಚಿತ. ಗೊಂದಲವಾಗುತ್ತಿದೆಯಾ? ಹೌದು, ಇಲ್ಲೇ ಇರುವುದು ಟ್ವಿಸ್ಟ್.‌ ಬಿಗ್‌ ಬಾಸ್‌ ಮನೆಗೆ ಎರಡು ವಾರಗಳ ಹಿಂದೆ 5 ಮಂದಿ ಕಳೆದ ಸೀಸನ್‌ನ ಸ್ಪರ್ಧಿಗಳು ಎಂಟ್ರಿ ನೀಡಿದ್ದರು. ಅದರಲ್ಲಿ ಮಂಜು, ತ್ರಿವಿಕ್ರಮ್‌, ಮೋಕ್ಷಿತಾ ಪೈ ಒಂದು ವಾರ ಇದ್ದು ಹೊರಗೆ ಹೋದರು. ರಜತ್‌ ಮತ್ತು ಚೈತ್ರಾ ಕುಂದಾಪುರ ಅವರನ್ನು ಮನೆಯೊಳಗೆ ಇರಿಸಿಕೊಳ್ಳಲಾಗಿತ್ತು. ಅವರನ್ನು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಎಂದು ಬಿಂಬಿಸಲಾಗಿತ್ತು.

BBT 9: ಬಿಗ್ ಬಾಸ್ ಬಗ್ಗೆ ಬಿಗ್ ಅಪ್ಡೇಟ್: ಈ ಬಾರಿ ಒಂದಲ್ಲ ಎರಡು ಬಿಗ್ ಬಾಸ್ ಮನೆ

ಮೂಲಗಳ ಪ್ರಕಾರ, ಅತಿಥಿಗಳಾಗಿ ಮನೆಯೊಳಗೆ ಇಷ್ಟು ದಿವಸ ಇದ್ದ ಚೈತ್ರಾ ಮತ್ತು ರಜತ್‌ ಅವರನ್ನು ಹೊರಗೆ ಈ ವಾರ ಕರೆಸಿಕೊಳ್ಳಲಾಗುತ್ತಿದೆಯಂತೆ. ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳಂತೆ ಆಟದಲ್ಲಿ ಭಾಗಿಯಾಗಿದ್ದ ರಜತ್‌ ಮತ್ತು ಚೈತ್ರಾ ಹಾಲಿ ಸ್ಪರ್ಧಿಗಳಿಗೆ ನಡುಕು ಹುಟ್ಟಿಸಿದ್ದಂತೂ ಸುಳ್ಳಲ್ಲ.

ಅದೇ ರೀತಿ ಸೀಕ್ರೆಟ್‌ ರೂಮ್‌ನಲ್ಲಿ ಇರುವ ರಕ್ಷಿತಾ ಮತ್ತು ಧ್ರುವಂತ್ ಕೂಡ ಈ ವಾರ ಪುನಃ ಮನೆಯೊಳಗೆ ಕಾಲಿಡುತ್ತಾರಾ? ಎಲ್ಲದಕ್ಕೂ ವೀಕೆಂಡ್‌ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ. ಒಟ್ಟಾರೆ, ಸದ್ಯ ಮನೆಯೊಳಗೆ ಇರುವ ಸ್ಪರ್ಧಿಗಳಿಗಂತೂ ಈ ವೀಕೆಂಡ್‌ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಇದೆ ಅನ್ನೋದಂತೂ ಪಕ್ಕಾ!