ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಏಕಾಏಕಿ ಎದ್ದು ಕಿವಿ ಹಿಡಿದುಕೊಂಡು, ಸುದೀಪ್‌ ಬಳಿ ಕೈ ಮುಗಿದು ಸ್ಪರ್ಧಿಗಳು ಮನವಿ ಮಾಡಿದ್ದೇನು?

Bigg Boss Kannada: ಶನಿವಾರ ಸುದೀಪ್‌ ಅವರು ಯಾವಾಗಲೂ ಗರಂ ಆಗಿಯೇ ವೀಕೆಂಡ್‌ ನಡೆಸಿಕೊಡುತ್ತಾರೆ. ಭಾನುವಾರ ಮಾತ್ರ ತಮಾಷೆಯಾಗಿ ಇರುತ್ತೆ. ಬರಬರುತ್ತಲೇ ಕರೆ ಮಾಡಿ ಮಾತನಾಡಲು ಹೇಳಿದರು. ಗಿಲ್ಲಿ, ಚೈತ್ರಾ, ಕಾವ್ಯ , ರಜತ್‌ ಮಾತನಾಡಿದರು. ಇದೆಲ್ಲ ಆದ ಬಳಿಕ ರಜತ್, ಮಾಳು, ಧನುಶ್ ಹಾಗೂ ಇನ್ನೂ ಕೆಲವರು ಎದ್ದವರೇ ಕಿವಿ ಹಿಡಿದುಕೊಂಡು ತಪ್ಪಾಯ್ತು ಎಂದು ಕೇಳುತ್ತಾ, ಸುದೀಪ್ ಅವರಿಗೆ ಕೈ ಮುಗಿದರು. ಕಾರಣವೇನು?

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ (Bigg Boss Kannada 12) ಮನೆಯಿಂದ ಜಾಹ್ನವಿ ಔಟ್‌ ಆಗಿದ್ದಾರೆ. ಶನಿವಾರ ಸುದೀಪ್‌ ಅವರು ಯಾವಾಗಲೂ ಗರಂ ಆಗಿಯೇ ವೀಕೆಂಡ್‌ ನಡೆಸಿಕೊಡುತ್ತಾರೆ. ಭಾನುವಾರ ಮಾತ್ರ ತಮಾಷೆಯಾಗಿ ಇರುತ್ತೆ. ಬರಬರುತ್ತಲೇ ಕರೆ ಮಾಡಿ ಮಾತನಾಡಲು ಹೇಳಿದರು. ಗಿಲ್ಲಿ (Gilli Nata), ಚೈತ್ರಾ, ಕಾವ್ಯ , ರಜತ್‌ ಮಾತನಾಡಿದರು. ಇದೆಲ್ಲ ಆದ ಬಳಿಕ ರಜತ್ (Rajath), ಮಾಳು, ಧನುಶ್ ಹಾಗೂ ಇನ್ನೂ ಕೆಲವರು ಎದ್ದವರೇ ಕಿವಿ ಹಿಡಿದುಕೊಂಡು ತಪ್ಪಾಯ್ತು ಎಂದು ಕೇಳುತ್ತಾ, ಸುದೀಪ್ ಅವರಿಗೆ ಕೈ ಮುಗಿದರು. ಕಾರಣವೇನು?

ಮೊದಲಿಗೆ ರಘು, ರಿಶಾ ಮತ್ತು ಸೂರಜ್ ಅವರು ವೈಲ್ಡ್‌ ಕಾರ್ಡ್‌ ಎಂಟ್ರಿ ಆಗಿ ಬಂದರು. ಈಗ ರಜತ್ ಮತ್ತು ಚೈತ್ರಾ ಕುಂದಾಪುರ ಅವರು ಬಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: 5 ಜನ ಅತಿಥಿಗಳಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್! ಮನೆಯಲ್ಲೇ ಉಳಿಯೋ ಆ ಇಬ್ಬರು ಯಾರು?

ಸ್ಮೋಕಿಂಗ್ ರೂಂಗೆ ಬೀಗ

ಕಾಕ್ರೂಚ್ ಸುಧಿ ಅವರಿಗೆ ಪಾಠ ಕಲಿಸಲು ಸುದೀಪ್‌ ಸ್ಮೋಕಿಂಗ್ ರೂಂಗೆ ಬೀಗ ಹಾಕಿಸಲು ಹೇಳಿದ್ದರು ಸುದೀಪ್‌. ಕಾಕ್ರೋಚ್ ಸುಧಿ ಸಿಗರೇಟ್ ಸೇದುತ್ತಾರೆ. ಇದು ಇಲ್ಲದೆ ಇವರಿಗೆ ಸಾಧ್ಯವೇ ಇಲ್ಲ. ಒಂದು ವೇಳೆ ಕಳಪೆ ಕೊಟ್ಟು ಜೈಲಿಗೆ ಕಳಿಸಿದ್ರೆ ಸಿಗರೇಟ್‌ ಸೇದುವುದು ಕಷ್ಟ ಆಗುತ್ತೆ ಅಂತ ಗಿಲ್ಲಿ ಅವರ ಹೆಸರು ತೆಗೆದುಕೊಂಡೆ ಎಂದು ಸುಧಿ ಹೇಳಿದ್ದರು. ಕಾಕ್ರೋಚ್ ಸುಧಿ ಮಾತು ಕೇಳಿದ್ಮೇಲೆ ಸುದೀಪ್ ಆ ಕೂಡಲೇ ಒಂದು ನಿರ್ಧಾರ ತೆಗೆದುಕೊಂಡರು.

ಬಿಗ್ ಬಾಸ್ ಇನ್ಮುಂದೆ ಎರಡು ವಾರ ಸ್ಮೋಕಿಂಗ್ ಝೋನ್ ಬಂದ್ ಮಾಡಿ ಅಂತಲೇ ಹೇಳಿದ್ದರು. ಸುದೀಪ್ ಅವರ ಮಾತಿನಂತೆ ಸ್ಮೋಕಿಂಗ್ ಏರಿಯಾ ಅನ್ನು ಬಂದ್ ಮಾಡಲಾಗಿದೆ.



ಸುದೀಪ್ ಅವರ ಬಳಿ ಸ್ಪರ್ಧಿಗಳು ಮನವಿ

ಮಾಳು, ಧನುಶ್ ಇನ್ನೂ ಕೆಲವರೂ ಸ್ಮೋಕಿಂಗ್ ಏರಿಯಾ ಅನ್ನು ಬಳಸುತ್ತಾರೆ. ರಜತ್‌ ಕೂಡ. ಅದನ್ನು ಮತ್ತೆ ತೆರೆಯುವಂತೆ ಇದೀಗ ಸುದೀಪ್ ಅವರ ಬಳಿ ಸ್ಪರ್ಧಿಗಳು ಮನವಿ ಮಾಡಿದರು. ಆದರೆ ಸುದೀಪ್‌ ಕೂಡ ಇಷ್ಟೆಲ್ಲ ಮನವಿ ಮಾಡಿದ್ದರೂ ಒಂದು ಟಾಸ್ಕ್‌ನ್ನು ಕೊಟ್ಟರು.

ಈ ಎಪಿಸೋಡ್ ಮುಗಿದ ಬಳಿಕ ಮಲಗುವ ಮುಂಚೆ ಎಲ್ಲ ಮಹಿಳಾ ಸ್ಪರ್ಧಿಗಳ ಬಳಿ ಹೋಗಿ ಅವರನ್ನು ಇಂಪ್ರೆಸ್‌ ಮಾಡಿ ಕೇಳಿ ಅವರು ವೋಟ್ ಹಾಕಲಿ. ನಿಮ್ಮ ಪರವಾಗಿ ವೋಟ್ ಬಂದರೆ ಮತ್ತೆ ಸ್ಮೋಕಿಂಗ್ ಜೋನ್ ತೆಗೆಯುತ್ತೇವೆ ಎಂದರು. ಒಟ್ಟಿನಲ್ಲಿ ಇದು ಸಕ್ಸೆಸ್‌ ಆಗತ್ತಾ? ಎಂದು ವೀಕ್ಷಕರಲ್ಲಿ ಇರೋ ಕುತೂಹಲ.

ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್‌ ಮನೆಯಿಂದ ಜಾಹ್ನವಿ ಔಟ್! ಕಣ್ಣೀರಿಟ್ಟ ಅಶ್ವಿನಿ ಗೌಡ

ಈ ವಾರ ಬಿಗ್‌ಬಾಸ್ ಮನೆಯಲ್ಲಿ ರಘು, ಧ್ರುವಂತ್, ಅಶ್ವಿನಿ ಗೌಡ, ಮಾಳು, ಜಾನ್ವಿ, ಕಾವ್ಯ ಹಾಗೂ ಗಿಲ್ಲಿ ನಾಮಿನೇಟ್ ಆಗಿದ್ದರು. ಎಲ್ಲರೂ ಈ ವಾರ ಉತ್ತಮವಾಗಿ ಆಟ ಆಡಿದ್ದರು. ಇವರ ಪೈಕಿ ಇದೀಗ ಜಾಹ್ನವಿ ಮನೆಯಿಂದ ಹೊರ ಬಂದಿದ್ದಾರೆ. ಜಾಹ್ನವಿಯವರು ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿದ್ದರು. ಸ್ಪಷ್ಟ ಕನ್ನಡದಲ್ಲಿ ಹಾಗೂ ತಮ್ಮ ಬ್ಯೂಟಿ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.

Yashaswi Devadiga

View all posts by this author