ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ರಿಷಾ ಗೌಡ ಮಾಡಿದ ಆ ಒಂದು ಕೆಲಸ ಗಿಲ್ಲಿ ಹಾರ್ಟ್‌ನ ಬ್ರೇಕ್‌ ಮಾಡ್ತಾ? ಏನಿದು ಹೊಸ ವಿಷ್ಯ?

BBK 12 Risha Gowda Interview: ʻಬಿಗ್‌ ಬಾಸ್‌ʼ ಕನ್ನಡ ಸೀಸನ್‌ 12ರ ವೈಲ್ಡ್‌ ಕಾರ್ಡ್‌ ಸ್ಪರ್ಧಿ ರಿಷಾ ಗೌಡ ಅವರು ಎಲಿಮಿನೇಟ್ ಆಗಿದ್ಧಾರೆ. ಸದ್ಯ ವಿಶ್ವವಾಣಿ ಟಿವಿಗೆ ವಿಶೇಷ ಸಂದರ್ಶನ ನೀಡಿರುವ ಅವರು, ಗಿಲ್ಲಿ ನಟನೊಂದಿಗಿನ ತಮ್ಮ ಒಡನಾಟದ ಕುರಿತು ಮಾತನಾಡಿದ್ದಾರೆ. "ನನ್ನ ಆ ಒಂದು ನಿರ್ಧಾರದಿಂದ ಗಿಲ್ಲಿ ತಮ್ಮನ್ನು ನಂಬಲಿಲ್ಲ" ಎಂದು ರಿಷಾ ಅಭಿಪ್ರಾಯಪಟ್ಟಿದ್ದಾರೆ.

ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದ ರಿಷಾ ಗೌಡ ಅವರು ಎಲಿಮಿನೇಟ್‌ ಆಗಿ ಹೊರಗೆ ಬಂದಿದ್ದಾರೆ. ವಿಶ್ವವಾಣಿ ಟಿವಿಗೆ ಎಕ್ಸ್‌ಕ್ಲೂಸಿವ್‌ ಸಂದರ್ಶನ ನೀಡಿರುವ ರಿಷಾ ಗೌಡ ಅವರು, ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಗಿಲ್ಲಿ ನಟ ಜೊತೆಗೆ ಇರುವ ಒಡನಾಟ ಎಂಥದ್ದು ಎಂಬುದರ ಬಗ್ಗೆ ರಿಷಾ ಗೌಡ ಅವರು ಮಾತನಾಡಿದ್ದಾರೆ.

ಗಿಲ್ಲಿ ಆರಂಭದಲ್ಲಿ ನಂಜೊತೆ ಚೆನ್ನಾಗಿದ್ದ

"ನಾನು ಬಿಗ್‌ ಬಾಸ್‌ ಮನೆಯೊಳಗೆ ಹೋದಾಗ ಮೊದಲು ನನ್ನ ವೆಲ್‌ಕಮ್‌ ಮಾಡಿದ್ದೇ ಗಿಲ್ಲಿ. ಆ ಹುಡುಗ ನನ್ನನ್ನು ಆರಂಭದಲ್ಲಿ ತುಂಬಾ ಚೆನ್ನಾಗಿ ನೋಡಿಕೊಂಡ. ಆದರೆ ನಾನು ಅವನನ್ನು ಸೇವ್‌ ಮಾಡುವ ಟೈಮ್‌ನಲ್ಲಿ ಅವನಿಗೆ ಹಾರ್ಟ್‌ ಕೊಡಲಿಲ್ಲ. ಸುಧಿಗೆ ಕೊಟ್ಟೆ. ಆಗ ಗಿಲ್ಲಿ ನಟ ಬೇಜಾರು ಮಾಡಿಕೊಂಡು ಬಿಡ್ತಾನೆ" ಎಂದು ರಿಷಾ ಗೌಡ ಹೇಳಿದ್ದಾರೆ.

Bigg Boss Kannada 12: ರಿಷಾಗೆ ವಾರ್ನಿಂಗ್‌ ಕೊಟ್ಟ ಮಾಳು; ಇಬ್ಬರ ಕಿರುಚಾಟಕ್ಕೆ ಮನೆಮಂದಿ ಸೈಲೆಂಟ್‌

ಹಾರ್ಟ್‌ ಕೊಡದೇ ನಾನು ಎಡವಿದೆ

"ನನ್ನ ಆ ಒಂದು ನಿರ್ಧಾರದಿಂದ, ಇಲ್ಲ ಇವಳನ್ನು ನಾನು ನಂಬೋಕೆ ಆಗಲ್ಲ ಅಂತ ಸೀರೀಯಸ್‌ ಆಗಿ ಗಿಲ್ಲಿ ಅಂದುಕೊಳ್ತಾನೆ. ನಾನು ಗಿಲ್ಲಿ ಹಾರ್ಟ್‌ ಕೊಡದೇ ಇರುವುದು ನಾನು ಎಡವಿದೆ ಅನ್ನಿಸ್ತು. ನಮ್ಮಿಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್‌ ಇತ್ತು. ಅವನು ನನ್ನ ಬಟ್ಟೆ ಮುಟ್ಟೋದಕ್ಕೂ ಅದೇ ಕಾರಣ. ನಾನಾಗಿದ್ದಕ್ಕೆ ಅವನು ನನ್ನ ಬಟ್ಟೆ ಮುಟ್ಟಿದ. ಬೇರೆಯವರ ಬಟ್ಟೆಗಳನ್ನು ಅವನು ಮುಟ್ಟುತ್ತಿರಲಿಲ್ಲ" ಎಂದಿದ್ದಾರೆ ರಿಷಾ ಗೌಡ.

ರಿಷಾ ಗೌಡ ಅವರ ಸಂದರ್ಶನ



ಆ ಒಂದು ಘಟನೆ ಆಗಿರದಿದ್ದರೆ...

"ನಾನು ಆರಂಭದಿಂದಲೇ ನನ್ನ ಇರೋದು ಹೀಗೆ ಅಂತ ಗೊತ್ತಾಗಿದ್ರೆ ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ. ಆದರೆ ನಾನು ಒಳಗೆ ಹೋಗುತ್ತಿದ್ದಂತೆಯೇ ಫನ್‌ ವರ್ಷನ್‌ ಅಲ್ಲಿ ತೆಗೆದುಕೊಂಡು ಹೋದರು. ನಾನು ಅದನ್ನು ಕೂಡ ಅಕ್ಸೆಪ್ಟ್‌ ಮಾಡಿಬಿಟ್ಟೆ. ನಾನು ಎಷ್ಟು ಫನ್‌ ಆಗಿರುತ್ತೇನೋ, ಅಷ್ಟೇ ಸಿಟ್ಟು, ಕೋಪ ನನ್ನಲ್ಲಿದೆ. ನಾನು ಫನ್‌ ಸೈಡ್‌ ನೋಡಿದ್ದ ಆಡಿಯೆನ್ಸ್‌, ನಾನು ಕೆಲವೊಮ್ಮೆ ಕೋಪ ಮಾಡಿಕೊಂಡಿದ್ದನ್ನು ಕಂಡು ಅಚ್ಚರಿ ಆಗಿರುತ್ತಾರೆ. ಅದನ್ನು ಅಲ್ಲಿರುವವರೇ ತೆಗೆದುಕೊಂಡಿರಲ್ಲ. ಆ ಒಂದು ಘಟನೆ ಆಗಿರಲಿಲ್ಲ ಅಂದರೆ ನಾನು ಇನ್ನೂ ಬಿಗ್‌ ಬಾಸ್‌ ಮನೆಯೊಳಗೆ ಇರುತ್ತಿದ್ದೆ ಅನಿಸುತ್ತದೆ" ಎಂದು ರಿಷಾ ಗೌಡ ಹೇಳಿದ್ದಾರೆ.

BBK 12: ಅಶ್ವಿನಿ ಗೌಡಾಗೆ ಶಾಕ್ ಮೇಲೆ ಶಾಕ್: ರಘು ಆಯ್ತು ಈಗ ರಿಷಾ ಗೌಡ ಸರದಿ

ಗಿಲ್ಲಿಗೆ ʻನಿನ್‌ ಮುಖ ತೋರ್ಸುʼ ಅಂತಿದ್ದೆ

"ಶನಿವಾರದ ಎಪಿಸೋಡ್‌ನಲ್ಲಿ ವಿಟಿ ಹಾಕಿದಾಗಲೇ ಗಿಲ್ಲಿಗೆ ಹೊಡೆದ ಇನ್ಸಿಡೆಂಟ್‌ ಅಷ್ಟೊಂದು ಸೀರಿಯಸ್‌ ಆಗಿದೆ ಎಂಬುದು ನನಗೆ ಗೊತ್ತಾಗಿದ್ದು. ಅವನ ಮೇಲಿದ್ದ ಸಲುಗೆಯಿಂದಲೇ ನಾನು ಹೊಡೆದಿದ್ದೆ. ಗಿಲ್ಲಿ ಜೊತೆಗಿನ ಇನ್ಸಿಡೆಂಟ್‌ ಆಗದೇ ಹೋಗಿದ್ದರೆ ನಾನು ಇನ್ನೂ ಕೂಡ ಬಿಗ್‌ ಬಾಸ್‌ ಮನೆಯಲ್ಲಿ ಇರುತ್ತಿದ್ದೆ ಎಂದು ಅನಿಸುತ್ತದೆ. ಗಿಲ್ಲಿ ಜೊತೆಗೆ ಕೋಳಿ ಜಗಳ ಮಾಡಿದ್ದರೂ, ಬೆಳ್‌ ಬೆಳಗ್ಗೆ ನಿನ್‌ ಮುಖ ತೋರ್ಸು ಇಡೀ ದಿನ ಚೆನ್ನಾಗಿರುತ್ತೆ ಅಂತ ನಾನು ಗಿಲ್ಲಿಗೆ ಹೇಳ್ತಿದ್ದೆ. ಈ ಥರ ಯಾರಿಗೆ ಹೇಳೋಕೆ ಆಗುತ್ತೆ? ಅದರಲ್ಲೂ ಶನಿವಾರ ಭಾನುವಾರ ಅವನ ಮುಖ ನೋಡಿದ್ರೆ ಸೇವ್‌ ಆಗ್ತಿನಿ ಅಂದುಕೊಂಡಿದ್ದೆ" ಎಂದಿದ್ದಾರೆ ರಿಷಾ ಗೌಡ.