ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿರುವ ಗಿಲ್ಲಿ ನಟ ಅವರು ಸದ್ಯ ಕನ್ನಡಿಗರಿಗೆ ಧನ್ಯವಾದ ಹೇಳಿದ್ದಾರೆ. ಬಿಗ್ ಬಾಸ್‌ನಿಂದ ಹೊರಬಂದಮೇಲೆ ಇದೇ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಗಿಲ್ಲಿ ನಟ ಅವರು, "ಈ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ , ಹೊಸ ದಾರಿ ಕಡೆ ಮುಖ ಮಾಡೋ ಹೊತ್ತು" ಎಂದು ಹೇಳಿಕೊಂಡಿದ್ದಾರೆ.
ಜನರ ಪ್ರೀತಿ ಕಂಡು ತುಂಬಾ ಖುಷಿ ಆಯ್ತು
"ನಮ್ಮ ಕನ್ನಡ ಜನತೆಗೆ ಯಾವ ರೀತಿ ಕೃತಜ್ಞತೆ ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ. ಬಿಗ್ ಬಾಸ್ ಮನೆಯಲ್ಲಿರುವಾಗ ಹೊರಗಡೆ ನನಗೆ ಜನರಿಂದ ಇಷ್ಟೊಂದು ದೊಡ್ಡ ಬೆಂಬಲ ಸಿಗುತ್ತದೆ ಎಂದು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಹೊರಗೆ ಬಂದಾಗ ತುಂಬಾ ಖುಷಿ ಆಯ್ತು. ಈಗಲೂ ಇದನ್ನು ನಂಬೋಕೆ ಆಗುತ್ತಿಲ್ಲ. ಯೋಧರು ವಿಡಿಯೋ ಮಾಡಿದ್ದರು, ಬೇರೆ ರಾಜ್ಯದವರು ಕೂಡ ನನಗೆ ಸಪೋರ್ಟ್ ಮಾಡಿದ್ದರು" ಎಂದು ಗಿಲ್ಲಿ ಹೇಳಿದ್ದಾರೆ.
Chowkidar Movie : ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್ ಡೇಟ್ ಅನೌನ್ಸ್! ಪಾತ್ರ ಏನು?
ಒಂದೇ ಒಂದು ನೆಗೆಟಿವ್ ವಿಡಿಯೋವನ್ನು ನಾನು ನೋಡಿಲ್ಲ
"ವಿದೇಶದಿಂದ ನನಗೆ ಬೆಂಬಲ ಸಿಕ್ಕಿದೆ. ಆಟೋ ಡ್ರೈವರ್‌ಗಳು ಆಟೋ ಮೇಲೆ ನನ್ನ ಸ್ಟಿಕ್ಕರ್ ಅಂಟಿಸಿದ್ದರು. ಸಂಕ್ರಾಂತಿ ಹಬ್ಬದಂದೂ ಹೋರಿಗಳ ಮೇಲೆ ನನ್ನ ಚಿತ್ರವನ್ನು ಬಿಡಿಸಿ, ಕಿಚ್ಚು ಹಾಯಿಸಿದ್ದಾರೆ. ಟ್ಯಾಟೂ ಹಾಕಿಸಿಕೊಂಡಿದ್ಧಾರೆ. ಒಬ್ಬರು ಇಬ್ಬರು ಅಂತ ಹೇಳೋದಕ್ಕೆ ಆಗೋದಿಲ್ಲ. ಹರಕೆ ಹೊತ್ತವರಿಗೆ, ಅದರಲ್ಲೂ ಮಾಧ್ಯಮದವರಿಗೆ, ಸೋಶಿಯಲ್ ಮೀಡಿಯಾದಲ್ಲಿ ಬೆಂಬಲಿಸಿದವರಿಗೆ ಧನ್ಯವಾದ. ಇದುವರೆಗೂ ನನ್ನ ಬಗ್ಗೆ ಒಂದೇ ಒಂದು ನೆಗೆಟಿವ್ ವಿಡಿಯೋವನ್ನು ನಾನು ಸೋಶಿಯಲ್ ಮೀಡಿಯಾದಲ್ಲಿ ನೋಡಿಲ್ಲ" ಎಂದು ಗಿಲ್ಲಿ ಹೇಳಿದ್ದಾರೆ.
ಗಿಲ್ಲಿ ನಟ ಸೋಶಿಯಲ್ ಮೀಡಿಯಾ ಪೋಸ್ಟ್
ಗೆಲುವಿನ ಕಿರೀಟ ತೊಡಿಸಿದ್ದೀರಿ
"ಇಷ್ಟು ದೂರ ಕರ್ಕೊಂಡು ಬಂದಿದ್ದೀರಾ .. ಮನಸ್ಸಲ್ಲಿ ಜಾಗ ಕೊಟ್ಟಿದ್ದೀರಾ.. ಕೈ ಮೇಲೆ ಹಚ್ಚೆ ಹಾಕಿಸ್ಕೊಂಡಿದ್ದೀರಾ.. ನಿರಂತರವಾಗಿ ಬೆಂಬಲಿಸಿದ್ದೀರಾ.. ಇದುವರೆಗೂ ಬರಿ ರನ್ನರ್ ಅಪ್ ಆಗೇ ಉಳಿದುಕೊಳ್ಳುತ್ತಿದ್ದ ಗಿಲ್ಲಿಗೆ ಗೆಲುವಿನ ಕಿರೀಟ ತೊಡಿಸಿದ್ದೀರಾ.. ಮೆರೆಸಿದ್ದೀರಾ.. ಈ ಪ್ರೀತಿಗೆ ಏನು ಹೇಳಿದ್ರು, ಎಷ್ಟು ಹೇಳಿದ್ರು ಕಡಿಮೇನೆ!! ಗಿಲ್ಲಿ ಗೆಲುವಿಗಾಗಿ ವೋಟ್ ಮಾಡಿದವರಿಗೆ, ಹರಕೆ ಹೊತ್ತೋರಿಗೆ, ಅಭಿಮಾನದಿಂದ ಜೊತೆ ನಿಂತೋರಿಗೆ ದೊಡ್ಡ ನಮಸ್ಕಾರ ಹಾಗೂ ತುಂಬು ಹೃದಯದ ಧನ್ಯವಾದಗಳು. ಈ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ , ಹೊಸ ದಾರಿ ಕಡೆ ಮುಖ ಮಾಡೋ ಹೊತ್ತು" ಎಂದು ಗಿಲ್ಲಿ ನಟ ಹೇಳಿದ್ದಾರೆ.