ಹೇಳಿ ಕೇಳಿ ಈ ಸೀಸನ್ ನಡೆಯುತ್ತಿರುವುದೇ ಏವಿಯೇಷನ್ ಥೀಮ್‌ನಲ್ಲಿ. ಹೀಗಾಗಿ, ಈ ವಾರದ ಆರಂಭದಲ್ಲೇ 'ಎಮರ್ಜೆನ್ಸಿ ಎಕ್ಸಿಟ್' ಟ್ವಿಸ್ಟ್ ಘೋಷಣೆ ಮಾಡಲಾಗಿತ್ತು. ಅದೇ ಟ್ವಿಸ್ಟ್ ಅಡಿಯಲ್ಲಿ ಎಲ್ಲಾ ಸ್ಪರ್ಧಿಗಳನ್ನು ನಾಮಿನೇಟ್ (Nomination) ಮಾಡುವ ಮೂಲಕ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ ಎಂಬ ಸುಳಿವು ನೀಡಿದ್ದರು ಕಿಚ್ಚ ಸುದೀಪ್. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ವೈಲ್ಡ್ ಕಾರ್ಡ್ (Wild Card Entry) ಎಂಟ್ರಿಯ ಪಟ್ಟಿಯಲ್ಲಿ ಮೂವರು ಮಾಜಿ ಬಿಗ್ ಬಾಸ್ ಸ್ಪರ್ಧಿಗಳು (Bigg Boss Kannada 13) ಹಾಗೂ ಇಬ್ಬರು ಹೊಸ ಮುಖಗಳ ಹೆಸರುಗಳು ಕೇಳಿಬರುತ್ತಿವೆ.
ನಿರ್ಗಮನ ದೊಡ್ಡ ಚರ್ಚೆ
ತಾಂಡವ್ ರಾಮ್ ಅವರ ದಿಢೀರ್ ನಿರ್ಗಮನ ದೊಡ್ಡ ಚರ್ಚೆಯ ವಿಷಯವಾಗಿತ್ತು. ಪ್ರೋಮೋ ಈಗ ತಾಂಡವ್ ಮನೆಯೊಳಗೆ ಬರ್ತಾ ಇರೋದು ಕನ್‌ಫರ್ಮ್ ಆಗಿದೆ. ಇದೀಗ ಹೊಸ ಸುದ್ದಿ ಪ್ರಕಾರ ಬರೋಬ್ಬರಿ ಐವರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: Bigg Boss Kannada 13: ಇದರ ಅರ್ಥ ತಾಂಡವ್ ಜರ್ನಿ ಕಂಪ್ಲೀಟ್ ಆಗಿಲ್ಲ; ಶಾಕ್ ಕೊಟ್ಟೇ ಬಿಟ್ರು ಕಿಚ್ಚ
ವಾಹಿನಿಯಿಂದ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲ. ವೈಲ್ಡ್ ಕಾರ್ಡ್ ಎಂಟ್ರಿಯ ಪಟ್ಟಿಯಲ್ಲಿ ಮೂವರು ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಹಾಗೂ ಇಬ್ಬರು ಹೊಸ ಮುಖಗಳ ಹೆಸರುಗಳು ಕೇಳಿಬರುತ್ತಿವೆ. ತೇಜಸ್ವಿನಿ ಪ್ರಕಾಶ್ ಅವರ ಹೆಸರು ಕೂಡ ಚರ್ಚೆಯಲ್ಲಿದೆ.
ಸೀಸನ್ 7ರ ಸ್ಪರ್ಧಿ ಹಾಗೂ ಖ್ಯಾತ ಡ್ಯಾನ್ಸರ್ ಕಿಶನ್ ಬಿಳಗಲಿ ಅವರ ಹೆಸರು ಕೂಡ ವೈಲ್ಡ್ ಕಾರ್ಡ್ ಪಟ್ಟಿಯಲ್ಲಿ ಇದೆ ಎನ್ನಲಾಗುತ್ತಿದೆ. ಹಾಸ್ಯ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯರಾಗಿರುವ ಕಾಮಿಡಿ ಕಲಾವಿದ ಪ್ರಶಾಂತ್ ಗೌಡ ಅವರ ಹೆಸರೂ ಕೇಳಿಬರುತ್ತಿದೆ. ಕನ್ನಡದ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಹಿರಿಯ ನಟಿ ವಿಜಯಲಕ್ಷ್ಮಿ ಅವರ ಹೆಸರು ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಆದಿ ಲೋಕೇಶ್, ತೇಜಸ್ವಿನಿ ಪ್ರಕಾಶ್ ಮತ್ತು ಕಿಶನ್ ಬಿಳಗಲಿ ಅವರು ಹಿಂದಿನ ಸೀಸನ್‌ಗಳ ಮಾದರಿಯಲ್ಲಿ ವಿಶೇಷ ಅತಿಥಿಗಳಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ವಿಜಯಲಕ್ಷ್ಮಿ ಮತ್ತು ಪ್ರಶಾಂತ್ ಗೌಡ ಸ್ಪರ್ಧಿಗಳಾಗಿ ಆಟ ಮುಂದುವರಿಸಬಹುದು ಎಂಬ ಮಾತುಗಳು ಹರಿದಾಡುತ್ತಿವೆ.
ಇದನ್ನೂ ಓದಿ: Shri Ramayan: ಕನ್ನಡಕ ಧರಿಸಿದ ವಾನರ; ‘ರಾಮಾಯಣ’ ಪೋಸ್ಟರ್ ನೋಡಿ ನೆಟ್ಟಿಗರ ಟ್ರೋಲ್
ಕಿಚ್ಚ ಸುದೀಪ್ ಅವರ ಘೋಷಣೆಯ ಬಳಿಕ ದೊಡ್ಮನೆಯಲ್ಲಿ ಎಲಿಮಿನೇಷನ್ ಕುರಿತ ಚರ್ಚೆಗಳು ಜೋರಾಗಿದ್ದವು. ಆದರೆ ಅಂತಿಮವಾಗಿ ಯಾವ ಸ್ಪರ್ಧಿ ಹೊರಬರಲಿದ್ದಾರೆ ಎಂಬುದನ್ನು ಊಹಿಸುವುದೇ ಕಷ್ಟವಾಗಿತ್ತು. ಮುಂದಿನ ದಿನಗಳಲ್ಲಿ ಮನೆಯೊಳಗಿನ ಸ್ಪರ್ಧಿಗಳ ನಡುವಿನ ಸಮೀಕರಣಗಳು ಹೇಗೆ ಬದಲಾಗಲಿವೆ ಎಂಬ ಕುತೂಹಲವೂ ಹೆಚ್ಚಾಗಿದೆ.