ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಅಧಿಕಪ್ರಸಂಗ ಮಾತನಾಡಬೇಡ; ಗಗನ್-ಮಂಜು ಜಗಳಕ್ಕೆ 'BASE' ಜೋರಾಗೇ ಇದೆ

Bigg Boss Kannada 13: ಬಿಗ್‌ ಬಾಸ್‌ ಮನೆಯೊಳಗೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಮೊದಲ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಇದರಿಂದಾಗಿ ಸ್ಪರ್ಧಿಗಳಿಗೆ ಆತಂಕ ಶುರುವಾಗಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೊರಾಗಿದೆ. ಗಗನ್‌ ಚಿನ್ನಪ್ಪ ಹಾಗೂ ಮಂಜು ನಡುವೆಯೂ ಜಗಳ ಆಗಿದೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯೊಳಗೆ (Bigg boss kannada 13) ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಮೊದಲ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಇದರಿಂದಾಗಿ ಸ್ಪರ್ಧಿಗಳಿಗೆ ಆತಂಕ ಶುರುವಾಗಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೊರಾಗಿದೆ. ಗಗನ್‌ ಚಿನ್ನಪ್ಪ (Gagan Chinnappa) ಹಾಗೂ ಮಂಜು ನಡುವೆಯೂ ಜಗಳ ಆಗಿದೆ.

ಇದೀಗ ಬಿಗ್‌ ಬಾಸ್‌ ಒಂದು ಟಾಸ್ಕ್‌ ನೀಡಿದ್ದಾರೆ. ಎರಡು ತಂಡಗಳನ್ನಾಗಿ ಮಾಡಿ ಕೆಟ್ಟ ಫುಡ್‌ಗಳನ್ನು ಯಾರು ಬೇಗ ತಿಂದು ಮುಗಿಸುತ್ತಾರೋ ಅವರೇ ವಿನ್‌. ಇದರಲ್ಲಿ ಮಂಜ ತಿಂದು ತೇಗಿದರು. ಬಡದು ಬಾಯಿಗೆ ಹಾಕೊಂಡು ತೇಗಿ ಹೊರಟು ಹೋಗ್ತೀನಿ ಎಂದು ಅಬ್ಬರಿಸಿದ್ದಾರೆ ಮಂಜು. ಇದು ಗಗನ್‌ಗೆ ತುಸು ಕೋಪ ತರಿಸಿದೆ. ಅಧಿಕಪ್ರಸಂಗ ಮಾತನಾಡಬೇಡ ಎಂದಿದ್ದಾರೆ. ಸೈಡ್‌ ಹೋಗ್ರಿ ಎಂದಿದ್ದಾರೆ. ಅದೇ ಬೇಸ್‌ ವೈಸ್‌ ನಮ್ಮದೂ ಅಂತ ಮಂಜು ಟಾಂಗ್‌ ಕೊಟ್ಟಿದ್ದಾರೆ.

ಈ ಹಿಂದೆಯೂ ವಿಮಾನದಲ್ಲಿದ್ದಾಗ ಇಬ್ಬರ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಅಧಿಕ ಪ್ರಸಂಗತನ ಮಾತಾಡಬೇಡ, ಸೈಡ್‌ಗೆ ಹೋಗ್ರಿ ಎಂದು ಮಂಜನಿಗೆ ಗಗನ್ ವಾರ್ನಿಂಗ್ ಮಾಡಿದ್ದಾರೆ. ಇದರಿಂದ ಕೋಪಗೊಂಡ ಮಂಜ, ಆರಾಮ್ ಆಗಿ ಮಾತಾಡು ಬ್ರೋ ಎಂದು ಗಗನ್ ರೀತಿಯಲ್ಲಿ ಹೇಳಿ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: Bigg Boss Kannada 13: ಮಂಜನಿಗೆ ಕಚಡ, ಹಂದಿ ಎಂದ ಕಿರಣ್ ಶಾಸ್ತ್ರಿ; ಕೊನೆಗೆ ಗೋಳೋ ಅಂತ ಅತ್ತ ಸ್ಪರ್ಧಿ



ಬಿಗ್ ಬಾಸ್ ಕನ್ನಡ 13’ ಕಾರ್ಯಕ್ರಮ ಏವಿಯೇಷನ್ ಥೀಮ್‌ನಲ್ಲಿ ನಡೆಯುತ್ತಿದೆ. ಅದಕ್ಕೆ ತಕ್ಕ ಹಾಗೆ ‘ಬಿಗ್ ಬಾಸ್’ ಮನೆಯ ಮುಖ್ಯದ್ವಾರದ ಮೇಲೆಯೇ ವಿಮಾನವನ್ನ ನಿಲ್ಲಿಸಲಾಗಿದೆ. ವಿಮಾನ ಹಾರಾಟ ಮುಗಿಸಿ ‘ಬಿಗ್ ಬಾಸ್’ ಮನೆಯೊಳಗೆ ಬಂದ ಓಂ ಪ್ರಕಾಶ್ ರಾವ್, ಕಾವ್ಯ ಗೌಡ, ಸಂಗೀತಾ ಭಟ್, ಜಗದೀಶ್, ತಾಂಡವ್ ರಾಮ್, ಗಗನ್ ಚಿನ್ನಪ್ಪ, ಆಸಿಯಾ ಫಿರ್ದೋಸ್, ಯಶಸ್ ಕೃಷ್ಣ ‘ಸದ್ಯಕ್ಕೆ’ ಸೇಫ್‌ ಎಂದು ‘ಬಿಗ್ ಬಾಸ್’ ಘೋಷಿಸಿದರು.

ಸೌಂದರ್ಯ ಶೆಟ್ಟಿ, ಅವಿನಾಶ್ ಶಠಮರ್ಷಣ್, ಪ್ರಥಮ ಪ್ರಸಾದ್, ಕಿರಣ್ ಶಾಸ್ತ್ರಿ, ಲಿಖಿತ್ ಗೊಂದಿ, ವೈಷ್ಣವಿ, ಧನುಷ್ ಮಂಜುನಾಥ್ ಮತ್ತು ಮಾಡ್ರನ್ ಮಹಾಕವಿ ಮಂಜ ಸದ್ಯಕ್ಕೆ ನಾಮಿನೇಟ್ ಆಗಿದ್ದಾರೆ. ‘ಕೊಹಿನೂರ್’ ಚಾಲೆಂಜ್‌ನಲ್ಲಿ ಗಗನ್ ಚಿನ್ನಪ್ಪ ಗೆದ್ದು ವಿಐಪಿ ಆದರು.

ಇದನ್ನೂ ಓದಿ: Amrita Mahotsav: ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಬಹುಭಾಷಾ ತಾರೆ ರೋಜಾ ಆಗಮನ

ಇತ್ತ ಆಸಿಯಾ ಫಿರ್ದೋಸ್ ಸೋತು ಮತ್ತೆ ವಿಮಾನ ಏರಿದರು. ಹೀಗಾಗಿ, ಪ್ರಸ್ತುತ ಆಸಿಯಾ ಫಿರ್ದೋಸ್‌ ಸಹ ಡೇಂಜರ್ ಝೋನ್‌ನಲ್ಲಿದ್ದಾರೆ.

Yashaswi Devadiga

View all posts by this author