ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BBK 13: ಯಶಸ್‌ ಕೃಷ್ಣಗೆ ʻಮಾಸ್ಟರ್ ಸ್ಟ್ರೋಕ್ʼ ಕೊಟ್ಟ ಕ್ಯಾಪ್ಟನ್ ಗಗನ್‌! ಬಿಗ್‌ ಬಾಸ್‌ನಲ್ಲಿ ಇರುವವರೆಗೂ ಲವರ್‌ ಬಾಯ್‌ಗೆ ಟೆನ್ಶನ್‌ ತಪ್ಪಿದ್ದಲ್ಲ!

‌ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ಫಿನಾಲೆ ಹಂತಕ್ಕೆ ತಲುಪುತ್ತಿದ್ದಂತೆ ಮನೆಯಲ್ಲಿ ಪೈಪೋಟಿ ತಾರಕಕ್ಕೇರಿದೆ. ವಿಶೇಷ ಟಾಸ್ಕ್‌ನಲ್ಲಿ ಬಜರ್ ಒತ್ತಿ ವಿಶೇಷ ಅಧಿಕಾರ ಪಡೆದ ಕ್ಯಾಪ್ಟನ್ ಗಗನ್ ಚಿನ್ನಪ್ಪ, ಪ್ರಬಲ ಪ್ರತಿಸ್ಪರ್ಧಿ ಯಶಸ್ ಕೃಷ್ಣ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ಫಿನಾಲೆ ಹಂತಕ್ಕೆ ಸಮೀಪಿಸುತ್ತಿದ್ದಂತೆ ಮನೆಯಲ್ಲಿ ಪೈಪೋಟಿ ತಾರಕಕ್ಕೇರಿದೆ. ಕೇವಲ ಕೆಲವೇ ವಾರಗಳು ಬಾಕಿ ಇರುವ ಈ ನಿರ್ಣಾಯಕ ಘಟ್ಟದಲ್ಲಿ ಮನೆಯ ಕ್ಯಾಪ್ಟನ್ ಗಗನ್ ಚಿನ್ನಪ್ಪ ಅವರು ಸಹ ಸ್ಪರ್ಧಿ ಯಶಸ್ ಕೃಷ್ಣ ಅವರಿಗೆ ದೊಡ್ಡ ಶಾಕ್ ನೀಡಿದ್ದಾರೆ.

ತಮ್ಮ ವಿಶೇಷ ಅಧಿಕಾರವನ್ನು ಬಳಸಿಕೊಂಡಿರುವ ಗಗನ್, ಯಶಸ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದು, ಈ ನಾಮಿನೇಷನ್ ಕೇವಲ ಈ ವಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಯಶಸ್ ಅವರು ಬಿಗ್ ಬಾಸ್ ಮನೆಯಲ್ಲಿ ಇರುವವರೆಗೂ ಪ್ರತಿ ವಾರ ನಾಮಿನೇಷನ್‌ಗೆ ಒಳಗಾಗಲಿದ್ದಾರೆ ಎಂಬ ಬಿಗ್ ಟ್ವಿಸ್ಟ್‌ನೊಂದಿಗೆ 'ಕಲರ್ಸ್ ಕನ್ನಡ' ಹೊಸ ಪ್ರೋಮೋ ಹಂಚಿಕೊಂಡಿದೆ.

ಯಶಸ್‌ಗೆ ಗಗನ್‌ ಗುನ್ನ!

ಬಿಗ್ ಬಾಸ್ ನೀಡಿದ ವಿಶೇಷ ಟಾಸ್ಕ್‌ನಲ್ಲಿ ಗಗನ್ ಚಿನ್ನಪ್ಪ ಮತ್ತು ಗಾನವಿ ಅವರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳುವ ಜೊತೆಗೆ ಮಹತ್ವದ ಪವರ್ ಪಡೆಯುವ ಅವಕಾಶ ನೀಡಲಾಗಿತ್ತು. ಬಿಗ್ ಬಾಸ್ ಕೇಳುವ ಪ್ರಶ್ನೆಗಳಿಗೆ ಯಾರು ಮೊದಲು ಬಜರ್ ಒತ್ತುತ್ತಾರೋ ಅವರಿಗೆ ಈ ವಿಶೇಷ ಅಧಿಕಾರ ಲಭಿಸುವ ನಿಯಮವಿತ್ತು. ಈ ಚಟುವಟಿಕೆಯಲ್ಲಿ ಮೇಲುಗೈ ಸಾಧಿಸಿದ ಗಗನ್ ಅವರಿಗೆ, "ಪ್ರತಿ ವಾರ ನೇರವಾಗಿ ನಾಮಿನೇಟ್ ಆಗುವ ಒಬ್ಬ ಸ್ಪರ್ಧಿಯ ಹೆಸರನ್ನು ಸೂಚಿಸಿ" ಎಂದು ಬಿಗ್ ಬಾಸ್ ಆದೇಶಿಸಿದರು. ಕ್ಷಣವೂ ಯೋಚಿಸದ ಗಗನ್, ಯಶಸ್ ಕೃಷ್ಣ ಅವರ ಹೆಸರನ್ನು ತೆಗೆದುಕೊಳ್ಳುವ ಮೂಲಕ ಮನೆಯಲ್ಲಿ ಸಂಚಲನ ಮೂಡಿಸಿದರು.

BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಯೊಳಗೆ ಎಂಟ್ರಿ ಕೊಡೋದು ಯಾರು? 'ಬಿಗ್‌ ಬಾಸ್‌ ಕನ್ನಡ‌' ಟೀಮ್‌ನಿಂದ ಬಿಗ್‌ ಅಪ್ಡೇಟ್‌!

ನಿನ್ನಿಂದ ನಂಗೆ ಅಪಾಯ, ಅದಕ್ಕೆ ನಾಮಿನೇಟ್‌ ಮಾಡಿದೆ!

ಬಿಗ್ ಬಾಸ್ ಈ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸುತ್ತಿದ್ದಂತೆ ಯಶಸ್ ಕೃಷ್ಣ ತೀವ್ರ ಅಸಮಾಧಾನಗೊಂಡರು. ಕ್ಯಾಪ್ಟನ್ ಗಗನ್ ಅವರನ್ನು ನೇರವಾಗಿ ಪ್ರಶ್ನಿಸಿದ ಯಶಸ್, "ನಾನು ಕಠಿಣ ಸ್ಪರ್ಧಿ ಎಂಬ ಕಾರಣಕ್ಕೆ ನನ್ನನ್ನು ನಾಮಿನೇಟ್ ಮಾಡಿದ್ದೀರಾ?" ಎಂದು ಕೇಳಿದ್ದಾರೆ. ಇದಕ್ಕೆ ನೇರವಾಗಿಯೇ ಉತ್ತರಿಸಿದ ಗಗನ್, "ಹೌದು, ನೀನು ನನಗೆ ಪ್ರಬಲ ಪ್ರತಿಸ್ಪರ್ಧಿ. ನಿನ್ನಿಂದ ನನ್ನ ಆಟಕ್ಕೆ ಅಪಾಯವಿದೆ, ಹಾಗಾಗಿಯೇ ನಾಮಿನೇಟ್ ಮಾಡಿದೆ" ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಎಲಿಮಿನೇಷನ್‌ ಟೆನ್ಶನ್ ತಪ್ಪಿದ್ದಲ್ಲ!

ಗಗನ್ ಉತ್ತರದಿಂದ ಮತ್ತಷ್ಟು ಕೆರಳಿದ ಯಶಸ್, "ಎದುರಾಳಿಯನ್ನು ಎದುರು ಇಟ್ಟುಕೊಂಡು ನೇರವಾಗಿ ಹೋರಾಡಬೇಕು" ಎಂದು ಸವಾಲು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗಗನ್, "ಆಟದ ನಿಯಮವೇ ಹೀಗಿದೆ ಗುರು. ನಾವು ಉಳಿದುಕೊಳ್ಳಬೇಕೆಂದರೆ ನಮ್ಮ ಆಟಕ್ಕೆ ಅಪಾಯವಾಗುವ ಸ್ಪರ್ಧಿಗಳನ್ನು ಹೊರಹಾಕಲೇಬೇಕು" ಎಂದಿದ್ದಾರೆ. ಆಗ ಯಶಸ್, "ನಾಮಿನೇಷನ್‌ಗೆ ಹೆದರುವವರು ಇನ್ನೇನು ಫಿನಾಲೆಗೆ ಬರುತ್ತೀರಿ? ನಾನು ಹೀಗೆಯೇ ಪ್ರಬಲ ಪೈಪೋಟಿ ನೀಡುತ್ತಲೇ ಇರುತ್ತೇನೆ" ಎಂದು ತಿರುಗೇಟು ನೀಡಿದ್ದು, "ಹಾಗೇ ಇರಿ, ನಾನು ಮುಖಾಮುಖಿ ಎದುರಿಸುತ್ತೇನೆ" ಎಂದು ಗಗನ್ ಕೂಡ ಸವಾಲು ಸ್ವೀಕರಿಸಿದ್ದಾರೆ. ಒಟ್ಟಿನಲ್ಲಿ ಈ ಬೆಳವಣಿಗೆಯಿಂದ ಬಿಗ್ ಬಾಸ್ ಮನೆಯಲ್ಲಿ ಇನ್ನು ಮುಂದೆ 'ಲವರ್ ಬಾಯ್' ಯಶಸ್ ಅವರಿಗೆ ಪ್ರತಿ ವಾರವೂ ಎಲಿಮಿನೇಷನ್ ಟೆನ್ಶನ್ ತಪ್ಪಿದ್ದಲ್ಲ ಎಂಬಂತಾಗಿದೆ.