ಈ ವಾರ ಬಿಗ್ ಬಾಸ್ ವೀಕೆಂಡ್ ಪಂಚಾಯ್ತಿಯಲ್ಲಿ (Bigg Boss Kannada 13) ಸುದೀಪ್ ಕಾಮನರ್ಸ್‌ಗಳಿಗೆ ಚಳಿ ಬಿಡಿಸಿದರು. ‘ಬಿಗ್ ಬಾಸ್ ಸೀಸನ್-13’ರ ಅಗ್ನಿಪರೀಕ್ಷೆ ಸ್ಪರ್ಧಿಗಳು ವರ್ಸ್ಟ್ ವರ್ತನೆ ಮಾಡಿದ್ದಾರೆ. ಇದೇ ಕಾರಣಕ್ಕೆ ಮುಂದಿನ ವರ್ಷ ಬಿಗ್ ಬಾಸ್ ಅಗ್ನಿಪರೀಕ್ಷೆ (Agniparikshe) ಕಾನ್ಸೆಪ್ಟ್‌ನೇ ಮಾಡಬೇಡಿ, ಸಾಮಾನ್ಯ ಜನತಗೆ ಅವಕಾಶ ಕ್ಯಾನ್ಸಲ್ ಆದರೆ, ಅದಕ್ಕೆ ಈ ನಾಲ್ಕು ಜನ ಕಾರಣ ಎಂದು ನೇರವಾಗಿ ಹೇಳಿದ್ದಾರೆ ಸುದೀಪ್.
ನಾಲ್ವರು ಸ್ಪರ್ಧಿಗಳ ನಡೆ-ನುಡಿ
ಈ ಬಾರಿಯ ಸೀಸನ್‌ನಲ್ಲಿ ‘ಅಗ್ನಿಪರೀಕ್ಷೆ’ ಎಂಬ ವಿಶೇಷ ಆಯ್ಕೆ ಪ್ರಕ್ರಿಯೆಯ ಮೂಲಕ ಕಾಮನ್ ಮ್ಯಾನ್ಗಳನ್ನು ಕರೆಸಲಾಗಿತ್ತು. ಈ ಕೋಟಾದಲ್ಲಿ ಮನೆಗೆ ಎಂಟ್ರಿ ಕೊಟ್ಟಿದ್ದ ಮಂಜು, ಕಿರಣ್, ಧನುಷ್ ಹಾಗೂ ಲಿಖಿತ್ ಎಂಬ ನಾಲ್ವರು ಸ್ಪರ್ಧಿಗಳ ನಡೆ-ನುಡಿ ಪ್ರೇಕ್ಷಕರ ತಾಳ್ಮೆ ಕೆರಳಿಸಿದೆ.
ಸಹ ಸ್ಪರ್ಧಿಗಳನ್ನ ಪೈಸೆ ಪೈಸೆ ಲೆಕ್ಕದಲ್ಲಿ ಹೀಯಾಳಿಸಿದ್ದ ಮಾಡ್ರನ್ ಮಹಾಕವಿ ಮಂಜ . ಈ ವರ್ತನೆಗೆ ಗರಂ ಆದ ಕಿಚ್ಚ ಸುದೀಪ್, “ನಿಮ್ಮ ಬೆಲೆ ಎಷ್ಟು ಮಂಜು, ನಿಮಗೆ ಮಾತ್ನಾಡೋಕೆ ಬರಲ್ಲ, ಮಿಸ್ಟರ್ ಸೌಂಡ್ ಮಂಜು, ಗಾಂಜಾಲಿ ಜಾಸ್ತಿ ಆಯ್ತು” ಎಂದು ಕಿಚ್ಚ ಸುದೀಪ್ ಮಾಡ್ರನ್ ಮಹಾಕವಿ ಮಂಜನಿಗೆ ಕ್ಲಾಸ್ ತಗೊಂಡರು.
ಇದನ್ನೂ ಓದಿ: Bigg Boss Kannada 13: 50 ಪೈಸೆ ಬೆಲೆ ಇಲ್ಲ ಎಂದ ಮಂಜನ ಮಾತಿಗೆ ಕಿಚ್ಚ ಗರಂ; ಇದು ತಪ್ಪು ಮಾಡಿದವರಿಗೆ ದಂಡನೆ!
“ಕಿರಣ್ ಶಾಸ್ತ್ರಿ ಅವರೇ ನಿಮ್ಮ ಜೊತೆಗೆ ಇದ್ದವರೇ ನಿಮ್ಮ ಪಾಯಿಂಟ್‌ಗಳನ್ನ ಎತ್ತಿಕೊಟ್ಟಿದ್ದಾರೆ. ಹೇಳ್ರಿ ಲಿಖಿತ್, ಮಾಡ್ರನ್ ಮಹಾಕವಿ ಮಂಜ, ಧನುಷ್ ಎಂದು ಟೈಮ್ ಕೊಟ್ಟು ಒಂದೊಂದೆ ಮಾತನ್ನ, ಆ ದಿನ ಟಾಸ್ಕ್‌ನಲ್ಲಿ ಏನು ನಡೆಯಿತು ಹೇಳಿ” ಅಂತ ಮೂವರಿಗೆ ಕೇಳ್ತಾರೆ. ಲಿಖಿತ್, ಮಂಜ ಎತ್ತಿಕೊಟ್ಟವರು, ಧನುಷ್ ಹಾಕೊಟ್ಟರು, ತಾಂಡವ್ ಬಲಿಪಶು ಆಗಿದ್ದು ಎಂದು ಕಿರಣ್ ಶಾಸ್ತ್ರಿ ಮುಂದೆ ಮೂವರ ಸತ್ಯ ಬಾಯಿ ಬಿಡಿಸುತ್ತಾರೆ.
ಕಾಮನರ್ಸ್ ಈ ಶೋಗೆ ಬೇಡ
ನಿಮ್ಮಿಂದ ಕೋಟಿ ಕೋಟಿ ವೀಕ್ಷಕರನ್ನ ಕಳೆದುಕೊಳ್ಳೋಕೆ ನಾವು ರೆಡಿಯಿಲ್ಲ. ನಾವು ಇದುವರೆಗೂ ಸಂಪಾದಿಸಿದ ಆಸ್ತಿ ಜನತೆ. 2 ನಿಮಿಷ ಲೈಟ್ ಆಫ್ ಮಾಡಿಸ್ತೀನಿ, ಎಲ್ಲರ ಬಂಡವಾಳ ಬಯಲಾಗುತ್ತೆ. ಮುಂದಿನ ಸೀಸನ್‌ನಿಂದ ಅಗ್ನಿಪರೀಕ್ಷೆ ತೆಗೆದು ಹಾಕಿ, ಕಾಮನರ್ಸ್ ಈ ಶೋಗೆ ಬೇಡ. ಹೀಗೆ ಹೇಳೋಕೆ ನನಗೆ ಬೇಸರ ಆಗುತ್ತೆ. ಅದೇಷ್ಟೋ ಲಕ್ಷಾಂತರ ಜನರು ಈ ಒಂದು ಅವಕಾಶಕ್ಕೆ ಕಾಯುತ್ತಿರುತ್ತಾರೆ. ಕ್ಷಾಂತರ ಜನರಲ್ಲಿ ನಿಮ್ಮನ್ನ ಆಯ್ಕೆ ಮಾಡಿದ್ರೇ, ಸಿಕ್ಕ ಅವಕಾಶನ ಹೀಗ ಬಳಿಸಿಕೊಳ್ಳೋದು? ಮುಂದಿನ ಸೀಸನ್‌ನಿಂದ ಸಾಮಾನ್ಯ ಜನತಗೆ ಬಿಗ್ ಅವಕಾಶ ತಪ್ಪಿದರೇ ಅದಕ್ಕೆ ಕಾರಣ ಈ ನಾಲ್ಕು ಜನ.
ಇದನ್ನೂ ಓದಿ: Deepika Padukone : ಎರಡನೇ ಬಾರಿಗೆ ಪೋಷಕರಾದ ದೀಪಿಕಾ-ರಣವೀರ್; ಹೆಣ್ಣು ಮಗು ಜನನ
ಇವರಿಂದಲೇ ಕಾಮನರ್ಸ್‌ಗೆ ಅವಕಾಶ ತಪ್ಪಿದ್ದು, ಎಂಬುವುದನ್ನ ನೆನಪಿಟ್ಟುಕೊಳ್ಳಿ" ಎಂದು ನೇರವಾಗಿ ಹೇಳಿದ್ದಾರೆ.