ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss kannada 13: ನಮ್ಮನ್ನ ಕರೆಸಿ ಈ ರೀತಿ ರೋಧನೆ ಏಕೆ ಕೊಡ್ತಾ ಇದ್ದೀರಾ ಬಿಗ್‌ ಬಾಸ್‌? ಸ್ಪರ್ಧಿಗಳು ಗರಂ

Bigg Boss kannada 13:ಬಿಗ್​​ಬಾಸ್ ಕನ್ನಡ ಸೀಸನ್ 13 ಆರಂಭವಾಗಿದೆ. ಬರೋಬ್ಬರಿ 16 ಮಂದಿ ಸ್ಪರ್ಧಿಗಳನ್ನು ಸುದೀಪ್ ಅವರು ಬಿಗ್​​ಬಾಸ್ ಮನೆಗೆ ಸ್ವಾಗತ ಮಾಡಿದ್ದಾರೆ. ಇದೀಗ ಮೊದಲ ದಿನವೇ ಸ್ಪರ್ಧಿಗಳ ರೋಧನೆ ಶುರು ಆಗಿದೆ. ಹೊಸ ಪ್ರೋಮೋ ಔಟ್‌ ಆಗಿದೆ. ಒಟ್ಟಾರೆಯಾಗಿ ಮೊದಲ ದಿನವೇ ಸ್ಪರ್ಧಿಗಳಿಗೆ ಕಠಿಣ ಸವಾಲು ಎದುರಾಗಿದೆ.

ಬಿಗ್‌ ಬಾಸ್‌ ಕನ್ನಡ

ಬಿಗ್​​ಬಾಸ್ ಕನ್ನಡ ಸೀಸನ್ 13 (Bigg Boss Kannada 13) ಆರಂಭವಾಗಿದೆ. ಬರೋಬ್ಬರಿ 16 ಮಂದಿ ಸ್ಪರ್ಧಿಗಳನ್ನು ಸುದೀಪ್ ಅವರು ಬಿಗ್​​ಬಾಸ್ ಮನೆಗೆ ಸ್ವಾಗತ ಮಾಡಿದ್ದಾರೆ. ಇದೀಗ ಮೊದಲ ದಿನವೇ ಸ್ಪರ್ಧಿಗಳ ರೋಧನೆ ಶುರು ಆಗಿದೆ. ಹೊಸ ಪ್ರೋಮೋ ಔಟ್‌ ಆಗಿದೆ.

ಬಿಗ್‌ ಬಾಸ್‌ ಮನೆಗೆ ರೆಡಿ ಆಗಿ ಹಾರಲು ನಿಮಗೆಲ್ಲ ಸ್ವಾಗತ ಎಂದು ಅನೌನ್ಸ್‌ ಮಾಡಿದ್ದಾರೆ ಬಿಗ್‌ ಬಾಸ್‌. ರಾತ್ರಿಯಾಗುತ್ತಿದ್ದಂತೆ ವಿಮಾನದ ಮಾದರಿಯ ಸೀಟುಗಳಲ್ಲೇ ಮಲಗಬೇಕಾದ ಪರಿಸ್ಥಿತಿ ಬಂದಾಗ ಸ್ಪರ್ಧಿಗಳ ನಡುವೆ ಅಸಮಾಧಾನ ಮತ್ತು ಕಿರಿಕಿರಿ ಶುರುವಾಗಿದೆ. ‘ಹೇಗೆ ಮಲಗಿಕೊಳ್ಳುವುದು ಹೇಳಿ, ನಮಗೆ ಆಗಲ್ಲ’ ಎಂದು ಸ್ಪರ್ಧಿಗಳು ಅಳಲು ತೋಡಿಕೊಂಡಿದ್ದಾರೆ. ಸ್ಪರ್ಧಿಗಳು ಕೂಡ ವಿಚಿತ್ರವಾಗಿ ನಡೆದುಕೊಂಡಿದ್ದಾರೆ. ಕೆಲವರು ಗಗನ್‌ ಚಿನ್ನಪ್ಪ ಇದ್ದವರು. ಒಳ್ಳೆ ಚೈಲ್ಡ್‌ ಥರ ಆಡ್ತಾ ಇದ್ದಾರೆ ಎಂದಿದ್ದಾರೆ. ಫ್ಲೈಟ್‌ನಲ್ಲಿ ಸ್ಪರ್ಧಿಗಳು ಹೈರಾಣು ಆಗಿದ್ದಾರೆ. ಸಿರಿಯೆಸ್‌ ಆಗಿ ಆಗ್ತಿಲ್ಲ ಅಂತ ಗೋಗೆರೆದಿದ್ದಾರೆ. ಬಿಗ್‌ ಬಾಸ್‌ಗೆ ಕೇಳೋ ಪ್ರಶ್ನೆ ಇದು ನಮ್ಮನ್ನ ಕರೆಸಿ ಈ ರೀತಿ ರೋಧನೆ ಯಾಕೆ ಅಂತ ಸ್ಪರ್ಧಿಗಳು ಮಾತನಾಡಿದ್ದಾರೆ. ಒಟ್ಟಾರೆಯಾಗಿ ಮೊದಲ ದಿನವೇ ಸ್ಪರ್ಧಿಗಳಿಗೆ ಕಠಿಣ ಸವಾಲು ಎದುರಾಗಿದೆ.

ಇದನ್ನೂ ಓದಿ: Bigg Boss Kannada 13: ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಕೌಂಡಿನ್ಯ ಈಗ ಬಿಗ್​​ಬಾಸ್​​ಗೆ!

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಸಾಮಾನ್ಯರಿಗೂ ಅವಕಾಶ ನೀಡಲಾಗಿದೆ. 60 ಜನ ಸಾಮಾನ್ಯರನ್ನು ಆಡಿಷನ್ ಮಾಡಿ ಈ ಪೈಕಿ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಧನುಷ್, ಲಿಖಿತ್, ಮಾಡರ್ನ್ ಮಹಾಕವಿ ಮಂಜ ಹಾಗೂ ಕಿರಣ್ ಶಾಸ್ತ್ರಿ ಇದ್ದಾರೆ. ಕಿರಣ್ ಅವರು ಮುಖ ನೋಡಿ ಭವಿಷ್ಯ ಹೇಳುತ್ತೇನೆ ಎಂದು ಈ ಮೊದಲು ಹೇಳಿದ್ದರು. ಬಿಗ್ ಬಾಸ್ ಮನೆಗೆ ಹೋದ ಬಳಿಕ ಎಲ್ಲರ ಮುಖ ನೋಡಿ ಭವಿಷ್ಯ ಹೇಳುವಂತೆ ಸೂಚನೆ ನೀಡಲಾಯಿತು.



ಓಂ ಪ್ರಕಾಶ್ ರಾವ್ ಅವರಿಗೆ ಬಿಗ್‌ ಬಾಸ್ ಅನುಭವ ಇದೇ ಮೊದಲೇನಲ್ಲ. ಈ ಹಿಂದೆ ‘ಬಿಗ್‌ ಬಾಸ್ ಕನ್ನಡ ಸೀಸನ್ 4’ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಅವರು, ಅನಾರೋಗ್ಯದ ಕಾರಣದಿಂದ ಏಳನೇ ವಾರದಲ್ಲೇ ಮನೆಯಿಂದ ಹೊರಬಂದಿದ್ದರು.

ಇದನ್ನೂ ಓದಿ: Bigg Boss Kannada 13: ʻಪವಿತ್ರ ಬಂಧನʼ ಖ್ಯಾತ ನಟ ಯಶಸ್‌ ಕೃಷ್ಣ ಬಿಗ್‌ ಬಾಸ್‌ಗೆ ಎಂಟ್ರಿ!

ಇದೀಗ ಹಲವು ವರ್ಷಗಳ ಬಳಿಕ ಮತ್ತೆ ಅದೇ ವೇದಿಕೆಗೆ ಮರಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂದರ್ಶನಗಳಲ್ಲಿನ ನೇರ ಮಾತುಗಳು ಹಾಗೂ ‘ಕ್ವಾಟ್ಲೆ ಕಿಚನ್’ ಕಾರ್ಯಕ್ರಮದ ಮೂಲಕವೂ ಓಂ ಪ್ರಕಾಶ್ ರಾವ್ ಸಾಕಷ್ಟು ಸುದ್ದಿಯಲ್ಲಿದ್ದರು. ಒಂದೆಡೆ ಈಗಾಗಲೇ ಬಿಗ್‌ ಬಾಸ್ ಅನುಭವ ಹೊಂದಿರುವ ಓಂ ಪ್ರಕಾಶ್ ರಾವ್.

Yashaswi Devadiga

View all posts by this author