‘ಬಿಗ್ ಬಾಸ್ ಕನ್ನಡ 13’ (bigg Boss Kannada 13) ಕಾರ್ಯಕ್ರಮದ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಧಿಕೃತ ಟಿವಿ ಸೀಸನ್ ಶುರುವಾಗುವ ಮುನ್ನ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ನಡೆಯುತ್ತಿದೆ. ಗ್ನಿಪರೀಕ್ಷೆ ಗೆದ್ದ 3 ಮಂದಿ ಮಾತ್ರ ದೊಡ್ಮನೆ ಸೇರುವ ಅವಕಾಶ ಇದೆ. ಆ ಸುವರ್ಣಾವಕಾಶ ಪಡೆಯಲು ಪ್ರಸ್ತುತ 18 ಮಂದಿ ಸೆಣಸಾಡುತ್ತಿದ್ದಾರೆ. ಪೂರ್ಣಿಮಾ ‘ಅಗ್ನಿಪರೀಕ್ಷೆ’ ವೇದಿಕೆ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಪೂರ್ಣಿಮಾ ಆಡಿರುವ ಮಾತುಗಳಿಗೆ ವಿನಯ್ ಗೌಡ, ಸಂಗೀತಾ ಶೃಂಗೇರಿ ಹಾಗೂ ಶ್ರುತಿ ಅಸಮಾಧಾನಗೊಂಡಿದ್ದಾರೆ. ಪೂರ್ಣಿಮಾ ಹಾಗೂ ನಿರ್ಣಾಯಕರ ನಡುವೆ ನಡದಿರುವ ಸಂಘರ್ಷ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಕ್ಯಾಮರಾ ಆಫ್ ಮಾಡಿ!
ಎಲಿಮಿನೇಷನ್ ಕ್ಷಣದಲ್ಲಿ ಸ್ಪರ್ಧಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ಪೂರ್ಣಿಮಾ ಶೋ ‘ಏಕಾಏಕಿ ‘’ಕ್ಯಾಮರಾ ಆಫ್ ಮಾಡಿಎಂದು ಪೂರ್ಣಿಮಾ ಹೇಳುತ್ತಾರೆ. ನನ್ನನ್ನೇ ಮನೆಯಿಂದ ಕಳುಹಿಸಲು ಮೊದಲೇ ಫಿಕ್ಸ್ ಆಗಿದೆ. ಹೈಟ್, ಸ್ಮಾರ್ಟ್, ಬ್ಯೂಟಿ ಇರುವವರನ್ನು ಮಾತ್ರ ಉಳಿಸಿಕೊಂಡು ನನ್ನಂತಹವರನ್ನು ಎಲಿಮಿನೇಟ್ ಮಾಡಲಾಗುತ್ತಿದೆ’ ಎಂದು ಬಹಿರಂಗವಾಗಿಯೇ ಪ್ರಶ್ನಿಸಿದರು.
ಇದನ್ನೂ ಓದಿ: Sahaa Movie: ಸಿನಿಮಾ ಇಷ್ಟವಾಗಲಿಲ್ಲ ಅಂದ್ರೆ ರಸ್ತೆಯಲ್ಲೇ ತಲೆ ಬೋಳಿಸಿಕೊಳ್ಳುತ್ತೇನೆ; ನಟಿಯ ನೇರ ಸವಾಲು!
‘’ನಿಮಗೆ ಏನು ಅನಿಸುತ್ತೆ, ಏನು ನಡೆಯುತ್ತಿದೆ ಇಲ್ಲಿ ಅಂತ..’’ ಎಂದು ಸಂಗೀತಾ ಪ್ರಶ್ನೆ ಮಾಡಿದರು. ಇವರೆಲ್ಲರನ್ನ ಬಿಟ್ಟು ನಿಮಗೆ 4 ಸ್ಟಾರ್ ಕೊಟ್ಟಾಗ ಈ ಪ್ರಶ್ನೆ ಯಾಕೆ ಬರಲಿಲ್ಲ? ಎಂದು ಕೇಳಿದರು. ನೀವು ಮಾಡ್ತಿರೋ ಸ್ಟೇಟ್‌ಮೆಂಟ್ ಎಷ್ಟು ಕೆಟ್ಟದಾಗಿ ಕೇಳಿಸ್ತಿದೆ ಗೊತ್ತಾ?’’ ಎಂದು ವಿನಯ್ ಗರ< ಆದರು. ‘’ಇಲ್ಲಿ ನಡೆಯುತ್ತಿರೋದಕ್ಕೆ ಬೆಲೆ ಕೊಡಲ್ಲ’’ ಎಂದು ಹೇಳಿ ಪೂರ್ಣಿಮಾ ಅಳುತ್ತಾರೆ. ‘’ಈ ಶೋ ಮೇಲೆ ನಂಬಿಕೆ ಇಲ್ಲಾಂದ್ರೆ ಪ್ಲೀಸ್ ವಾಕ್ ಔಟ್’’ ಎಂದು ನಿರಂಜನ್ ದೇಶಪಾಂಡೆ ಹೇಳುತ್ತಾರೆ.
ಬಿಗ್ ಬಾಸ್ ಕನ್ನಡ 13' ಕಾರ್ಯಕ್ರಮದ ಲಾಂಚ್ ಎಪಿಸೋಡ್ ಸೆಪ್ಟೆಂಬರ್ 6 ರಂದು ಸಂಜೆ 7ಗೆ ಪ್ರಸಾರವಾಗಲಿದೆ. ಈ ಬಾರಿ ಯಾರೆಲ್ಲಾ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಬರಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ: Nandagokula Serial : ‘ನಂದಗೋಕುಲ’ ಸೀರಿಯಲ್‌ಗೆ ಕೇಶವ ವಿದಾಯ; ಭಾವುಕ ಪೋಸ್ಟ್
ತೀರ್ಪುಗಾರರಾಗಿ ಸಂಗೀತಾ ಶೃಂಗೇರಿ, ವಿನಯ್ ಗೌಡ, ಚಂದನ್ ಶೆಟ್ಟಿ ಹಾಗೂ ಶ್ರುತಿ ಇದ್ದಾರೆ. 'ಅಗ್ನಿಪರೀಕ್ಷೆ' ಗೆಲ್ಲುವ 3 ಸ್ಪರ್ಧಿಗಳು 'ಬಿಗ್ ಬಾಸ್' ಮನೆಯೊಳಗೆ ಸ್ಪರ್ಧಿಗಳಾಗಿ ಬರಲಿದ್ದಾರೆ.