ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಬಿಗ್ ಬಾಸ್​ಗೆ ಎಂಟ್ರಿ ಕೊಡುತ್ತಿರೋ ಸ್ಪರ್ಧಿಗಳು ಇವರೇ?

Bigg Boss Kannada 13:ಇಂದು ಎಲ್ಲಾ ಸ್ಪರ್ಧಿಗಳು ದೊಡ್ಮನೆ ಒಳಗೆ ತೆರಳಲಿದ್ದು, ಅದರ ಪ್ರಸಾರ ಭಾನುವಾರ ನಡೆಯಲಿದೆ. ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿರುವ ಲೇಟೆಸ್ಟ್ ಪ್ರೋಮೋದಲ್ಲಿ ಸೆಲೆಬ್ರಿಟಿ ಸ್ಪರ್ಧಿಗಳ ವಿಡಿಯೋಗಳಿವೆ. ಸದ್ಯಕ್ಕೆ ಸ್ಪರ್ಧಿಗಳ ಮುಖವನ್ನ (Tentative Contestant List) ಕ್ಲಿಯರ್ ಆಗಿ ರಿವೀಲ್ ಮಾಡಿಲ್ಲ. ಆದರೆ, ಕೆಲ ಸಜೆಷನ್ ಶಾಟ್‌ಗಳನ್ನ ಬಳಸಿಕೊಳ್ಳಲಾಗಿದೆ. ಅಗ್ನಿಪರೀಕ್ಷೆಯಿಂದ 3 ಸ್ಪರ್ಧಿಗಳು ಬಿಗ್ ಬಾಸ್​ಗೆ ತೆರಳಲಿದ್ದಾರೆ.

ಬಿಗ್‌ ಬಾಸ್‌ ಕನ್ನಡ

‘ಬಿಗ್ ಬಾಸ್ ಕನ್ನಡ ಸೀಸನ್ 13’ರ (bigg Boss Kannada 13) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಎಲ್ಲಾ ಸ್ಪರ್ಧಿಗಳು ದೊಡ್ಮನೆ ಒಳಗೆ ತೆರಳಲಿದ್ದು, ಅದರ ಪ್ರಸಾರ ಭಾನುವಾರ ನಡೆಯಲಿದೆ. ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿರುವ ಲೇಟೆಸ್ಟ್ ಪ್ರೋಮೋದಲ್ಲಿ ಸೆಲೆಬ್ರಿಟಿ ಸ್ಪರ್ಧಿಗಳ ವಿಡಿಯೋಗಳಿವೆ. ಸದ್ಯಕ್ಕೆ ಸ್ಪರ್ಧಿಗಳ ಮುಖವನ್ನ (Tentative Contestant List) ಕ್ಲಿಯರ್ ಆಗಿ ರಿವೀಲ್ ಮಾಡಿಲ್ಲ. ಆದರೆ, ಕೆಲ ಸಜೆಷನ್ ಶಾಟ್‌ಗಳನ್ನ ಬಳಸಿಕೊಳ್ಳಲಾಗಿದೆ. ಅಗ್ನಿಪರೀಕ್ಷೆಯಿಂದ 3 ಸ್ಪರ್ಧಿಗಳು ಬಿಗ್ ಬಾಸ್​ಗೆ ತೆರಳಲಿದ್ದಾರೆ.

ಸೌಂದರ್ಯ ಶೆಟ್ಟಿ ಯಾರು?

ಸೌಂದರ್ಯ ಶೆಟ್ಟಿ ಅವರು ಹೆಸರು ಜೋರಾಗಿ ಚರ್ಚೆಯಲ್ಲಿದೆ. ಹಿಂದಿಯ ಎಂಟಿವಿ ಸ್ಪಿಟ್ಸ್​​ವಿಲ್ಲಾದಲ್ಲಿ ಸ್ಪರ್ಧಿಸಿದ್ದ ಅವರು, ಬಿಗ್ ಬಾಸ್​ಗೆ ಬರುತ್ತಿದ್ದಾರೆ. ‘ನನ್ನನ್ನ ಸ್ಯಾಂಡಿ ಅಂತ ಕರೆಯಿರಿ’ ಎಂದು ಸನ್ನಿ ಲಿಯೋನ್‌ಗೆ ತಿಳಿಸಿದ್ದವರು ಸೌಂದರ್ಯ ಶೆಟ್ಟಿ. ಸೌಂದರ್ಯ ಶೆಟ್ಟಿ ಮೂಲತಃ ಕರ್ನಾಟಕದ ಮಂಗಳೂರಿನವರು.

ಇದನ್ನೂ ಓದಿ: BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಯೊಳಗೆ ಎಂಟ್ರಿ ಕೊಡೋದು ಯಾರು? 'ಬಿಗ್‌ ಬಾಸ್‌ ಕನ್ನಡ‌' ಟೀಮ್‌ನಿಂದ ಬಿಗ್‌ ಅಪ್ಡೇಟ್‌!

‘ಗೌರಿಶಂಕರ’ ಧಾರಾವಾಹಿಯಲ್ಲಿ ನಟಿಸಿದವರು ದಿವ್ಯಾ ವಾಗುಕರ್.ಸೀರೆಯಲ್ಲಿ ಲಕ್ಷಣವಾಗಿ ರೆಡಿಯಾಗಿರೋದು ದಿವ್ಯಾ ವಾಗುಕರ್‌ ಇದ್ದ ಹಾಗಿದೆ. ಇನ್ನು ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಶ್ರಾವಣಿ ಪಾತ್ರ ಮಾಡಿದ್ದ ಆಸಿಯಾ ಫಿರ್ದೋಸ್ ಅವರು ಕೂಡ ಪ್ರೋಮೋದಲ್ಲಿದ್ದಾರೆ.



ಇತ್ತೀಚೆಗಷ್ಟೇ ‘ಕ್ವಾಟ್ಲೆ ಕಿಚನ್ ಸೀಸನ್ 2’ ಕಾರ್ಯಕ್ರಮದಲ್ಲಿ ತಾಂಡವ್ ಸ್ಪರ್ಧಿಸಿದ್ದರು. ಫಿನಾಲೆಗೆ ಕಾಲಿಡೋಕೂ ಮುನ್ನವೇ ತಾಂಡವ್ ಔಟ್ ಆಗಿಬಿಟ್ಟಿದ್ದರು. ಇದೀಗ ‘ಬಿಗ್ ಬಾಸ್’ನಲ್ಲಿ ಅದೃಷ್ಟ ಪರೀಕ್ಷೆಗೆ ತಾಂಡವ್ ಇಳಿಯುತ್ತಿದ್ದಾರೆ. ಅಂಕಿತಾ ಅಮರ್ ಸಹೋದರಿ ಅನನ್ಯ ಅಮರ್, ಸಂಗೀತಾ ಭಟ್‌, ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ಜಗ್ಗ ಮಮ್ಮಿ ಪಾತ್ರವನ್ನ ನಿಭಾಯಿಸಿದವರು ಜಗದೀಶ್, ‘ಕಾಮಿಡಿ ಕಿಲಾಡಿಗಳು’ ಸೂರಜ್ ಇವರೆಲ್ಲರೂ ಇರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಧಿಕೃತ ಮಾಹಿತಿ ವಾಹಿನಿ ಹಂಚಿಕೊಂಡಿಲ್ಲ.

ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆ ಒಳಗೆ Survive ಆಗೋದು ಹೇಗೆ? ಚಂದನ್‌ ಶೆಟ್ಟಿ ಟಿಪ್ಸ್‌ ಇದು

ಈ ಬಾರಿ ಫ್ಲೈಟ್ ಥೀಮ್​ನೊಂದಿಗೆ ಬಿಗ್ ಬಾಸ್ ಮೂಡಿ ಬರುತ್ತಿದೆ. ವಿವಿಧ ಹಂತಗಳಲ್ಲಿ ಸ್ಪರ್ಧಿಗಳನ್ನು ಇಡುವ ಸಾಧ್ಯತೆ ಇದೆ.

12 ಯಶಸ್ವಿ ಆವೃತ್ತಿಗಳ ಬಳಿಕ ಬರುತ್ತಿರುವ ಸೀಸನ್ 13ರಲ್ಲಿ ಚಿತ್ರರಂಗ, ಕಿರುತೆರೆ ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಚಿತ ಮುಖಗಳ ಜತೆಗೆ ಸಾಮಾನ್ಯ ಜನರಿಗೂ ದೊಡ್ಮನೆ ಪ್ರವೇಶಿಸುವ ಅವಕಾಶ ದೊರೆತಿದೆ. ಹೊಸ ಸ್ಪರ್ಧಿಗಳು, ವಿಭಿನ್ನ ಆಟಗಳು, ಸವಾಲುಗಳು ಹಾಗೂ ಅನಿರೀಕ್ಷಿತ ತಿರುವುಗಳು ಈ ಆವೃತ್ತಿಯ ಪ್ರಮುಖ ಆಕರ್ಷಣೆಯಾಗಿವೆ.

ಈ ಬಾರಿ ಕಾರ್ಯಕ್ರಮದ ಅನುಭವ ಕಿರುತೆರೆಗೆ ಮಾತ್ರ ಸೀಮಿತವಾಗಿಲ್ಲ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಗ್ ಬಾಸ್ ಮನೆ 24 ಗಂಟೆಯೂ ವೀಕ್ಷಣೆಗೆ ಲಭ್ಯವಾಗಲಿದೆ. ಮನೆಯೊಳಗಿನ ಮಾತುಕತೆಗಳು, ಸ್ಪರ್ಧಿಗಳ ನಡುವಿನ ಸಂಬಂಧಗಳ ಬದಲಾವಣೆ, ಅನಿರೀಕ್ಷಿತ ಘಟನೆಗಳು ಹಾಗೂ ಹಲವು ಕುತೂಹಲಕಾರಿ ಕ್ಷಣಗಳನ್ನು ವೀಕ್ಷಕರು ಯಾವಾಗ ಬೇಕಾದರೂ ನೋಡಬಹುದಾಗಿದೆ.

Yashaswi Devadiga

View all posts by this author