ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಕ್ಯಾಪ್ಟನ್ಸಿ ಓಟಕ್ಕೆ ಅಡ್ಡಗಾಲು; ಧನುಷ್‌-ಗಾನವಿ ನಡುವೆ ಮಾರಾಮಾರಿ!

Bigg Boss Kannada 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ರಿಯಾಲಿಟಿ ಶೋನಲ್ಲಿ ಈ ವಾರ ಯಾರು ಕ್ಯಾಪ್ಟನ್ ಆಗುತ್ತಾರೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ. ಕ್ಯಾಪ್ಟನ್ಸಿ ಓಟಕ್ಕೆ (Captaincy Task) ಅರ್ಹತೆ ಇರುವ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ವಾರ ಮನೆಯಿಂದ ಬಂದ ಪತ್ರಗಳನ್ನು ಪಡೆದಿರುವ 8 ಸದಸ್ಯರ ಪೈಕಿ ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ 4 ಸ್ಪರ್ಧಿಗಳು ಯಾರು ಎಂಬುದನ್ನು ಈಗ ನಿರ್ಧರಿಸಬೇಕಿದೆ. ಈ ವೇಳೆ ಧನುಷ್‌ (Dhanush) ಹಾಗೂ ಗಾನವಿ ನಡುವೆ ಜಗಳ ಆಗಿದೆ.

ಬಿಗ್‌ ಬಾಸ್‌ ಕನ್ನಡ

‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ರಿಯಾಲಿಟಿ ಶೋನಲ್ಲಿ ಈ ವಾರ ಯಾರು ಕ್ಯಾಪ್ಟನ್ ಆಗುತ್ತಾರೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ. ಕ್ಯಾಪ್ಟನ್ಸಿ ಓಟಕ್ಕೆ (Captaincy Task) ಅರ್ಹತೆ ಇರುವ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ವಾರ ಮನೆಯಿಂದ ಬಂದ ಪತ್ರಗಳನ್ನು ಪಡೆದಿರುವ 8 ಸದಸ್ಯರ ಪೈಕಿ ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ 4 ಸ್ಪರ್ಧಿಗಳು ಯಾರು ಎಂಬುದನ್ನು ಈಗ ನಿರ್ಧರಿಸಬೇಕಿದೆ. ಈ ವೇಳೆ ಧನುಷ್‌ (Dhanush) ಹಾಗೂ ಗಾನವಿ ನಡುವೆ ಜಗಳ ಆಗಿದೆ.

ಕ್ಯಾಪ್ಟನ್ಸಿ ಟಾಸ್ಕ್‌ ಕೊನೆಯ ಹಂತದಲ್ಲಿ ಧನುಷ್‌, ಯಶಸ್‌, ಪ್ರಶಾಂತ್‌, ಗಾನವಿ ಇದ್ದರು. ಬಿಲ್ಲೆಗಳನ್ನು ಒಂದರ ಮೇಲೆ ಒಂದು ಇಡಬೇಕಿತ್ತು. ಈ ಮಧ್ಯೆ ಆಡದೇ ಇರುವ ಸದಸ್ಯರು ಬಿಲ್ಲೆಗಳನ್ನು ಒಡೆದು ಹಾಕಬೇಕಿತ್ತು. ಸುತ್ತನ್ನು ಗೆಲ್ಲುವ ಸದಸ್ಯ ಒಬ್ಬರನ್ನು ಹೊರಗಡೆ ಇಡುತ್ತಾರೆ. ಈ ವೇಳೆ ಧನುಷ್‌ ಅವರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗಡೆ ಇಟ್ಟರು ಗಾನವಿ.

ಇದನ್ನೂ ಓದಿ: Ranbir Kapoor: ರಾಮಾಯಣ ತಂಡಕ್ಕೆ ಶುಭ ಹಾರೈಸಿದ ಅಲ್ಲು ಅರ್ಜುನ್



ಇದಾದ ಬಳಿಕ ಇದೇ ರಿವೇಂಜ್‌ಗೆ ಗಾನವಿ ಅವರನ್ನು ಟಾರ್ಗೆಟ್‌ ಮಾಡಿ ಧನುಷ್‌ ಪದೇ ಪದೇ ಬಿಲ್ಲೆಗಳನ್ನು ಬೀಳಿಸಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಮಾರಾಮಾರಿ ಆಗಿದೆ. '

ಇದನ್ನೂ ಓದಿ: Ramayana Movie: ‘ರಾಮಾಯಣʼ ಅದ್ಧೂರಿ ಬಿಡುಗಡೆ; ಮೊದಲ ದಿನವೇ ₹100 ಕೋಟಿ ಗಳಿಸುವ ನಿರೀಕ್ಷೆ

ಇದಕ್ಕೂ ಮುಂಚೆ ಸೋನಿಕಾ ಗೌಡ, ತಾಂಡವ್ ರಾಮ್ ಮತ್ತು ಆಸಿಯಾ ಅವರಿಗೆ ಈ ಅಧಿಕಾರ ನೀಡಲಾಗಿತ್ತು. ಈ ಮೂವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದರು. ಆದರೆ ಅವರ ಅನಿಸಿಕೆಗಳನ್ನು ಕೇಳಿಸಿಕೊಂಡ ಬಿಗ್ ಬಾಸ್ ಮನೆಯ ಸದಸ್ಯರು ಗರಂ ಆಗಿದ್ದರು ಅದರಿಂದಾಗಿ ಸ್ಪರ್ಧಿಗಳ ನಡುವೆ ಮನಸ್ತಾಪ ಉಂಟಾಗಿದೆ. ಗಗನ್ ಚಿನ್ನಪ್ಪ ಮತ್ತು ಆಸಿಯಾ ನಡುವೆ ವಾಗ್ವಾದ ಕೂಡ ಆಗಿದೆ.

Yashaswi Devadiga

View all posts by this author