ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BBK 13: ಕಂಟ್ರೋಲ್‌ ತಪ್ಪಿದ ಮಂಜನಿಗೆ ಶಾಕ್‌ ಟ್ರೀಟ್‌ಮೆಂಟ್!‌ ಮಹಾಕವಿಯನ್ನು ದೊಡ್ಮನೆಯಿಂದ ಹೊರದಬ್ಬಿದ ʻಬಿಗ್‌ ಬಾಸ್‌ʼ, ಅಚ್ಚರಿ ತಂದ ಪ್ರೋಮೋ!

BBK 13: ಬಿಗ್‌ ಬಾಸ್‌ 13 ಶೋನ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ವೀಕ್ಷಕರಲ್ಲಿ ಭಾರೀ ಸಂಚಲನ ಮೂಡಿಸಿದೆ. ಐದನೇ ವಾರದಲ್ಲಿ ಸಹಸ್ಪರ್ಧಿ ಯಶಸ್ ವಿರುದ್ಧ ಅವಾಚ್ಯ ಪದ ಬಳಸಿ ಚಾರಿತ್ರ್ಯವಧೆ ಮಾಡಿದ ಕಾರಣಕ್ಕೆ ಮಂಜನ ವಿರುದ್ಧ ಬಿಗ್ ಬಾಸ್ ಖಡಕ್ ಕ್ರಮ ಕೈಗೊಂಡಿದ್ದಾರೆ. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಮಂಜನನ್ನು ಬಿಗ್ ಬಾಸ್‌ ಮನೆಯಿಂದ ಗೇಟ್‌ಪಾಸ್ ನೀಡಿ ಹೊರಹಾಕಲಾಗಿದೆ.

‘ಬಿಗ್ ಬಾಸ್ ಕನ್ನಡ 13’ ಸೀಸನ್‌ನಲ್ಲಿ ಅಸಭ್ಯ ವರ್ತನೆ ಹಾಗೂ ಅವಾಚ್ಯ ಶಬ್ದಗಳಿಂದ ವೀಕ್ಷಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಮಾಡ್ರನ್ ಮಹಾಕವಿ ಮಂಜ ಕೊನೆಗೂ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಐದನೇ ವಾರದಲ್ಲಿ ಸಹಸ್ಪರ್ಧಿಗಳ ವಿರುದ್ಧ ಎಲ್ಲೆ ಮೀರಿ ಮಾತನಾಡಿ, ಚಾರಿತ್ರ್ಯವಧೆ ಮಾಡಿದ್ದ ಮಂಜನಿಗೆ ಬಿಗ್ ಬಾಸ್ ರೆಡ್ ಕಾರ್ಡ್ ತೋರಿಸಿ ಹೊರಹಾಕಿರುವ ಸ್ಫೋಟಕ ಪ್ರೋಮೋ ಇದೀಗ ರಿಲೀಸ್ ಆಗಿದೆ.

ನಿಯಮ ಉಲ್ಲಂಘನೆಗೆ ಬಿಗ್ ಬಾಸ್ ಖಡಕ್ ಶಿಕ್ಷೆ!

ಸದ್ಯ ಬಿಡುಗಡೆಯಾಗಿರುವ ಹೊಸ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಪ್ರೋಮೋದಲ್ಲಿ ಬಿಗ್ ಬಾಸ್ ಗಂಭೀರ ಧ್ವನಿಯಲ್ಲಿ, "ಮಂಜುನಾಥ್, ಈ ಮನೆಗೆ ಅದರದ್ದೇ ಆದ ನಿಯಮಗಳಿವೆ. ಹಲವು ಬಾರಿ ಎಚ್ಚರಿಕೆ ನೀಡಿದ ನಂತರವೂ ಅಸಭ್ಯ ಮಾತುಗಳಿಂದ ಮನೆಯ ಸದಸ್ಯರ ವ್ಯಕ್ತಿತ್ವವನ್ನು ನಿಂದಿಸಿದ್ದೀರಿ. ಇದನ್ನು ಬಿಗ್ ಬಾಸ್ ಎಂದಿಗೂ ಸಹಿಸುವುದಿಲ್ಲ. ಮನೆಯ ಮೂಲ ನಿಯಮವನ್ನು ಉಲ್ಲಂಘಿಸಿದ ಕಾರಣದಿಂದ ನಿಮ್ಮನ್ನು ತಕ್ಷಣವೇ ಹೊರಗೆ ಕಳುಹಿಸಲಾಗುತ್ತಿದೆ" ಎಂದು ನೇರವಾಗಿ ಆದೇಶ ನೀಡಿದ್ದಾರೆ.

ತಲೆತಗ್ಗಿಸಿ ಮುಖ್ಯದ್ವಾರದಿಂದ ಹೊರನಡೆದ ಮಂಜ

ಬಿಗ್ ಬಾಸ್ ಆದೇಶ ಹೊರಬೀಳುತ್ತಿದ್ದಂತೆ ಮಂಜ ತಲೆತಗ್ಗಿಸಿ ಮನೆಯ ಮುಖ್ಯದ್ವಾರದಿಂದ ಹೊರನಡೆದಿದ್ದಾರೆ. ಇನ್ನೊಂದೆಡೆ, ಮಂಜನ ಮಾತಿನ ದಾಳಿಗೆ ಸಿಲುಕಿ ನೊಂದಿದ್ದ ಯಶಸ್ ಈ ನಿರ್ಧಾರದಿಂದ ಕುಣಿದು ಕುಪ್ಪಳಿಸಿದ್ದು, "ಈ ಖುಷಿಗೆ ಎಲ್ಲರೂ ಸ್ವೀಟ್ ತಿನ್ನೋಣ" ಎಂದು ಸಂಭ್ರಮಿಸಿರುವುದು ಪ್ರೋಮೋದಲ್ಲಿ ಹೈಲೈಟ್ ಆಗಿದೆ. ಆದರೆ, ಇದು ಫೇಕ್‌ ಎಲಿಮಿನೇಷನ್‌ ಆಗಿದ್ದು, ಮಂಜ ಏನಾದರೂ ಸೀಕ್ರೆಟ್‌ ರೂಮ್‌ಗೆ ಹೋಗಿರಬಹುದಾ ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಪಂಚಾಯತಿಯಲ್ಲಿ ಮಂಜನ ಬೆಂಡೆತ್ತಿದ್ದ ಕಿಚ್ಚ

ಇದಕ್ಕೂ ಮುನ್ನ ವಾರದ ಕಥೆ ಕಿಚ್ಚನ ಜೊತೆ ಪಂಚಾಯತಿಯಲ್ಲಿ ಮಂಜನ ವರ್ತನೆಯನ್ನು ನಟ ಕಿಚ್ಚ ಸುದೀಪ್ ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದರು. "ಚಾರಿತ್ರ್ಯವಧೆ ಅಂದರೆ ಏನು ಮಂಜು ಅವರೇ? ವ್ಯಕ್ತಿಯ ವ್ಯಕ್ತಿತ್ವವನ್ನೇ ಕೊಲ್ಲುವುದರಲ್ಲಿ ಈ ಸೀಸನ್‌ನಲ್ಲಿ ನೀವು ಸಖತ್ ಸ್ಪೆಷಲಿಸ್ಟ್. ಯಶಸ್ ನಾಯಿನಾ? ಬಾಲ ಏನಾದರೂ ಕಾಣ್ತಿದ್ಯಾ? ಜಗಳ ಬೇಡ, ನಿಮ್ಮ ಒಳ್ಳೆಯತನ ಜನರಿಗೆ ಗೊತ್ತಾಗಲಿ ಅಂತ ನಾನು ನಿಮಗೆ ಟಾಸ್ಕ್ ಕೊಟ್ಟಿದ್ದೆ. ಆದರೆ ನೀವು ಮಾಡಿದ್ದೇನು? 'ಕಾಮ ಪಿಶಾಚಿ', 'ಸ್ತ್ರೀ ವ್ಯಾಮೋಹ' ಎಂದೆಲ್ಲಾ ಎಂಜಲು ಜೊತೆ ಸಿಕ್ಕಾಪಟ್ಟೆ ಉಗಿದಿದ್ದೀರಿ. ಹೆಣ್ಣುಮಕ್ಕಳನ್ನು ಬಳಸಿಕೊಳ್ತಾನೆ, ಹೀರೋಯಿನ್‌ಗಳೇ ಹುಷಾರಾಗಿರಿ ಎಂದೆಲ್ಲ ಕೆಟ್ಟದಾಗಿ ಮಾತನಾಡಿದ್ದೀರಿ. ಇದೆಲ್ಲವನ್ನೂ ಬಿಗ್ ಬಾಸ್‌ನಲ್ಲಿ ಪೂರ್ತಿ ಟೆಲಿಕಾಸ್ಟ್ ಮಾಡೋಕೆ ಸಾಧ್ಯವೇ ಇಲ್ಲ" ಎಂದು ಸುದೀಪ್ ಗುಡುಗಿದ್ದರು.

ಇದೇ ವೇಳೆ ಮಂಜು ಹಾಗೂ ಗಾನವಿ ಆತ್ಮೀಯವಾಗಿರುವ ದೃಶ್ಯಗಳನ್ನು ಪ್ಲೇ ಮಾಡಿಸಿದ ಸುದೀಪ್, "ಇದಕ್ಕೆ ರೊಮ್ಯಾಂಟಿಕ್ ಹಾಡು ಹಾಕಿದರೆ ಒಂದು ಅರ್ಥ, ಫ್ರೆಂಡ್‌ಶಿಪ್ ಹಾಡು ಹಾಕಿದರೆ ಇನ್ನೊಂದು ಅರ್ಥ. ದೃಷ್ಟಿಕೋನ ಹೇಗೆ ಬೇಕಾದರೂ ಬದಲಾಗಬಹುದು" ಎಂದು ಮಾರ್ಮಿಕವಾಗಿ ಚಾಟಿ ಬೀಸಿದ್ದರು.

ಅಮ್ಮನ ಆಡಿಯೋ ಕೇಳಿ ಮಂಜ ಕಣ್ಣೀರು

ಪಂಚಾಯತಿ ಮುಗಿದ ಬಳಿಕ ಮಂಜನನ್ನ ಕನ್‌ಫೆಶನ್ ರೂಮ್‌ಗೆ ಕಳುಹಿಸಲಾಗಿತ್ತು. ಅಲ್ಲಿ ಬಿಗ್ ಬಾಸ್ ನೀಡಿದ ಪತ್ರದಲ್ಲಿ, "ನೀವು ಆಡಿದ ಮಾತುಗಳನ್ನು ನೇರವಾಗಿ ಪ್ರಸಾರ ಮಾಡಲು ಸಾಧ್ಯವಿಲ್ಲ. ಇದರಿಂದ ನಾಡಿನ ಜನತೆಗೆ ಎಷ್ಟು ನೋವಾಗಿರಬಹುದು ಎಂದು ತಿಳಿಯಲು ನಿಮ್ಮ ಮಾತುಗಳನ್ನೇ ನಿಮಗೆ ಕೇಳಿಸಲಾಗುತ್ತಿದೆ" ಎಂದು ಎಚ್ಚರಿಸಲಾಗಿತ್ತು. ಜೊತೆಗೆ ಮಂಜನ ತಾಯಿ ಗುಣಮ್ಮ ಅವರ ಆಡಿಯೋ ಸಂದೇಶವನ್ನೂ ಪ್ಲೇ ಮಾಡಲಾಯಿತು.

BBK 13: ‘ನಿಂಗೆ ಸ್ತ್ರೀ ಮೋಹ ಇದೆ’ ಎಂದ ಮಂಜನಿಗೆ ‘ನೀನೇನು ಪುರುಷ ಮೋಹಿನಾ..?’ ಅಂತ ತಿರುಗೇಟು ನೀಡಿದ ಯಶಸ್‌; ʻಬಿಗ್ ಬಾಸ್ʼ ಮನೆಯಲ್ಲಿ ಮೋಹದ ವಾಕ್ಸಮರ!

"ಮಂಜ, ಫ್ಯಾಮಿಲಿ ನೋಡುವ ಶೋ ಇದು. ನೀನು ಮಾತಾಡ್ತಾ ಇರೋ ರೀತಿ ಸರಿ ಇಲ್ಲ. ಮನೆಯ ಪರಿಸ್ಥಿತಿ, ಕಷ್ಟಗಳನ್ನು ನೆನಪಿನಲ್ಲಿಟ್ಟುಕೊಂಡು ಆಟ ಆಡಿ ಗೆದ್ದು ಬಾ. ಇಷ್ಟೊಂದು ಕೆಟ್ಟದಾಗಿ ಮಾತನಾಡಬೇಡ, ನಿನ್ನ ಬಾಯಲ್ಲಿ ಅಂತಹ ಮಾತುಗಳು ಬರಲೇಬಾರದು. ನನಗೆ ತುಂಬಾ ಬೇಜಾರಾಗಿದೆ" ಎಂದು ತಾಯಿ ಹೇಳುವುದನ್ನು ಕೇಳಿ ಮಂಜ ಬಿಕ್ಕಿ ಬಿಕ್ಕಿ ಅತ್ತರು. ತಮ್ಮ ತಪ್ಪಿನ ಅರಿವಾಗಿ "ನಾನು ಆ ರೀತಿ ಮಾತನಾಡಬಾರದಿತ್ತು" ಎಂದು ಮಂಜ ಪಶ್ಚಾತ್ತಾಪ ಪಟ್ಟರೂ, ಮನೆಯ ನಿಯಮಗಳನ್ನು ಮಿತಿಮೀರಿ ಉಲ್ಲಂಘಿಸಿದ್ದಕ್ಕೆ ವೀಕ್ಷಕರ ಒತ್ತಾಯದಂತೆ ಬಿಗ್ ಬಾಸ್ ಅಂತಿಮವಾಗಿ ಅವರನ್ನು ಶೋನಿಂದಲೇ ಹೊರಹಾಕಿದೆ.