ಬಿಗ್ ಬಾಸ್ ಮನೆಯಲ್ಲಿ (Bigg Boss Kannada 13) ಈಗ EMERGENCY EXIT! ಕಾವು ಜೋರಾಗಿದೆ. ಸದ್ಯ ಮೂವರನ್ನು ಹೊರಕ್ಕೆ ಹಾಕಿ, ಮೂವರನ್ನು ಒಳಕ್ಕೆ ತರೋ ಕೆಲಸ ಆಗಿದೆ ಎಂಬ ಮಾತು ಕೇಳಿ ಬರುತ್ತಿದೆ (ಸೆಪ್ಟೆಂಬರ್ 24) ಮಧ್ಯರಾತ್ರಿ 12.30ಕ್ಕೆ ಎಲಿಮಿನೇಷನ್ (Elimination) ನಡೆದಿದೆಯಂತೆ. ಈ ವೇಳೆ ಹೊರ ಹೋದವರು ಯಾರು ಎಂಬ ವಿಷಯ ಇನ್ನೂ ರಿವೀಲ್ ಆಗಿಲ್ಲ.
ಹೊಸ ಪ್ರೋಮೋ ಔಟ್ ಆಗಿದೆ. ಎಲಿಮಿನೇಟ್ ಮುಂಚೆ ಮನಸ್ಸು ಬಿಚ್ಚಿ ಮಾತನಾಡಬೇಕಿತ್ತು. ಆಗ ಲಿಖಿತ್ ಇದ್ದವರು ಇಲ್ಲಿ ನಾನು ನಿಲ್ಲೋಕೆ ನೀವೇ ಕಾರಣ ಎಂದರು. ತುಂಬಾ ನೋವಾಗ್ತಿದೆ ಎಂದು ಜಗ್ಗ ಕೂಡ ಬಿಕ್ಕಿ ಬಿಕ್ಕಿ ಅತ್ತರು. ಒಂದೊಮ್ಮೆ ಮೂವರು ಹೋದರೆ ಸ್ಪರ್ಧಿಗಳ ಸಂಖ್ಯೆ 11 ಆಗಲಿದೆ. ‘ಬಿಗ್ ಬಾಸ್’ನಲ್ಲಿ ಎಮರ್ಜೆನ್ಸಿ ಎಕ್ಸಿಟ್ ಜೊತೆ, ಎಮರ್ಜೆನ್ಸಿ ಎಂಟ್ರಿ ಕೂಡ ಇದೆ ಎಂದು ಹೇಳಲಾಗುತ್ತಾ ಇದೆ. ಹೌದು, ದೊಡ್ಮನೆಗೆ ಕೆಲ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಮಾಡಲಿದ್ದಾರಂತೆ.
ಬಿಗ್ ಬಾಸ್ ಸೀಸನ್-13’ ಮಿಡ್ ವೀಕ್ ಎಲಿಮಿನೇಷನ್‌ನಿಂದ ಬಚಾವ್ ಆಗಲು ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಕಿರಣ್ ಶಾಸ್ತ್ರಿ ಮತ್ತು ಕಾವ್ಯ ಗೌಡ ಜೋಡಿಯಾಗಿ ಆಡಿದ್ರೇ, ಆಸಿಯಾ ಫಿರ್ದೋಸ್ ಮತ್ತು ಯಶಸ್ ಕೃಷ್ಣ ಅವರು ಜೋಡಿಯಾಗಿದ್ದರು.
ಇದನ್ನೂ ಓದಿ: Actor Govinda: ಪತ್ನಿಯನ್ನು ಬಿಟ್ಟು ಪ್ರೇಯಸಿ ಜೊತೆ ಗಣೇಶ ದರ್ಶನಕ್ಕೆ ಬಂದ ನಟ ಗೋವಿಂದ! ಸುನೀತಾ ಪ್ರತಿಕ್ರಿಯೆ ಇದು
ಬಣ್ಣದ ಪೈಪ್‌ಗಳನ್ನ ಸರಿಯಾಗಿ, ನಿಗದಿತ ಸಮಯದಲ್ಲಿ ಜೋಡಿಸಿದ ಕಿರಣ್ ಶಾಸ್ತ್ರಿ ಮತ್ತು ಕಾವ್ಯ ಗೌಡ ಗೇಮ್‌ನ ವಿನ್ನರ್ ಆಗಿ, ಮಿಡ್ ವೀಕ್ ಎಲಿಮಿನೇಷನ್‌ನಿಂದ ಪಾರಾಗುವ ಅಡ್ವಾಂಟೇಜ್ ಕಾರ್ಡ್ ಪಡೆದರು.