ಮಹಾರಾಣಿ ಪಟ್ಟಕ್ಕೇರಿದ ಗಾನವಿ ಗೌಡ (Ganvi gowda) ಅವರು ಮೊದಲ ಟಾಸ್ಕ್‌ನ ಉಸ್ತುವಾರಿಯಲ್ಲಿಯೇ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ಸರಿಯಾಗಿ ಟಾಸ್ಕ್‌ನ ನೋಡದೇ ಫಲಿತಾಂಶ ಘೋಷಿಸಿದ್ದು ಒಂದು ತಂಡಕ್ಕೆ ಅನ್ಯಾಯವಾಗಿದೆ. ಇದು ಒದು ಕಡೆ ಆದ್ರೆ ಇದೀಗ ಕಳಪೆ ವಿಚಾರ (Kalape) ಬಗ್ಗೆ ಮನೆ ಅಲ್ಲೋಲ ಕಲ್ಲೋಲ ಆಗಿದೆ. ಇದೇ ಮೂದಲ ಬಾರಿ ಮೂವರಿಗೆ ಕಳಪೆ ಸಿಕ್ಕಿದೆ.
ಸೌಂದರ್ಯ, ಆಸಿಯಾ ಹಾಗೂ ಗಾನವಿ ಮೂವರಿಗೆ ಕಳಪೆ ಕಳಿಸಬೇಕು ಎಂದು ಕಿರಣ್ ಶಾಸ್ತ್ರಿ ಕೂಗಾಡಿದರು. ಮೂವರಿಗೆ ಹೇಗೆ ಕೊಡುತ್ತೀಯಾ? formate ಚೇಂಜ್ ಮಾಡ್ತೀಯಾ ಎಂದು ಗಾನವಿ ಕೇಳಿದ್ದಾರೆ. ಕಿರಣ್ ಮಾತಿಗೆ ಗಗನ್ ಸೇರಿದಂತೆ ಬಹುತೇಕರು ಸಮ್ಮತಿ ಸೂಚಿಸಿದರು. ಅಷ್ಟೇ ಅಲ್ಲ ಕಿರಣ್ ಈ ಬಗ್ಗೆ ಧ್ವನಿ ಎತ್ತಿದವರಲ್ಲಿ ಮೊದಲಿಗರಾಗಿದ್ದರು. ಆ ಬಳಿಕ ಗಾನವಿ, ಆಸಿಯಾ, ಸೌಂದರ್ಯ ಮೂವರು ಕಳಪೆ ಪಟ್ಟ ಪಡೆದು ಜೈಲಿಗೆ ಸೇರಿದ್ದಾರೆ. ರಾಣಿ ಜೈಲಿಗೆ ಸೇರಿದಳಂತೆ, ರಾಣಿ ಪಟ್ಟ ಇಲ್ವಾ? ಅಂತ ಕಿರಣ್ ಅವರು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಗಾನವಿ ಕೂಡ ಜೈಲಿನಲ್ಲಿ ಕಣ್ಣೀರಿಟ್ಟಿದ್ದಾರೆ.