ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಪತ್ರ ಪಡೆಯುವ ವೇಳೆ ಗಾನವಿ ಹೈಡ್ರಾಮ; ಮೊಸಳೆ ಕಣ್ಣೀರಿನ ಕಥೆ ಬಿಚ್ಚಿಟ್ಟ ಕಿಚ್ಚ

Bigg Boss Kannada 13: ಬಿಗ್‌ ಬಾಸ್‌ ಮನೆಯ ಸ್ಪರ್ಧಿಗಳಿಗೆ (Bigg Boss Kannada 13) ತಮ್ಮ ತಮ್ಮ ಕುಟುಂಬದ ಕಡೆಯಿಂದ ಪತ್ರ ಲಭಿಸಿತ್ತು. ಇದು ಒಂದು ಭಾವುಕತೆ ತುಂಬಿದ್ದ ವಾರವಾಗಿತ್ತು. ಕೆಲವರು ನಿಜವಾಗಿಯೂ ಭಾವುಕರಾದರೆ ಇನ್ನು ಕೆಲವರು ನಕಲಿತನ ಮೆರೆದಿದ್ದಾರೆ. ಗಾನವಿ ಗೌಡ (Ganavi Gowda) ಅವರು ಪತ್ರ ಪಡೆಯಲು ಹಾಕಿದ ಡ್ರಾಮ ಕಣ್ಣೀರ ಬಗ್ಗೆ ಕಿಚ್ಚ (Sudeep) ಮಾತನಾಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯ ಸ್ಪರ್ಧಿಗಳಿಗೆ (Bigg Boss Kannada 13) ತಮ್ಮ ತಮ್ಮ ಕುಟುಂಬದ ಕಡೆಯಿಂದ ಪತ್ರ ಲಭಿಸಿತ್ತು. ಇದು ಒಂದು ಭಾವುಕತೆ ತುಂಬಿದ್ದ ವಾರವಾಗಿತ್ತು. ಕೆಲವರು ನಿಜವಾಗಿಯೂ ಭಾವುಕರಾದರೆ ಇನ್ನು ಕೆಲವರು ನಕಲಿತನ ಮೆರೆದಿದ್ದಾರೆ. ಗಾನವಿ ಗೌಡ (Ganavi Gowda) ಅವರು ಪತ್ರ ಪಡೆಯಲು ಹಾಕಿದ ಡ್ರಾಮ ಕಣ್ಣೀರ ಬಗ್ಗೆ ಕಿಚ್ಚ (Sudeep) ಮಾತನಾಡಿದ್ದಾರೆ.

ಆಸಿಯಾ ಅವರಿಗೆ ಯಾಕೆ ಲೆಟರ್‌ ಸಿಕ್ಕಿಲ್ಲ? ಎಲ್ಲ ಕಡೆ ಅಳ್ತಾ ಇದ್ದ ಆಸಿಯಾ ಅಳೋ ಕಡೆ ಅಳಲಿಲ್ಲ. ನಾನು ಈ ವಿಚಾರದಲ್ಲಿ ನೀವೇ ಗೆಲ್ತೀರಾ ಅಂದುಕೊಂಡೆ ಆದ್ರೆ ಗಾನವಿ ಗೆಲ್ಲೋದಾ? ಎಂದು ಸುದೀಪ್‌ ಹೇಳಿದರು. ಅಷ್ಟೇ ಅಲ್ಲ ಗಾನವಿ ಟ್ರೋಲ್‌ ಆದ ವಿಡಿಯೋ ಕೂಡ ಪ್ಲೇ ಮಾಡಿಸಿದರು.

“ಹೊಗಳಿಕೆಗೂಸ್ಕರ ತಮ್ಮನ್ನೇ ತಾವು ಡಿಸ್ಟರ್ಬ್‌ ಮಾಡಿಕೊಂಡು, ಮನೆಯವರನ್ನ ಡಿಸ್ಟರ್ಬ್‌ ಮಾಡಿದ್ದಾರೆ” ಎಂದು ಕಿಚ್ಚ ಸುದೀಪ್‌ ಅವರು ಹೇಳಿದ್ದಾರೆ. ಗೊಂದಲ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಪತ್ರ ಪಡೆಯಲು ಸ್ಪರ್ಧಿಗಳ ಎದುರು ವೋಟ್ ಕೇಳುವಾಗ ಗಾನವಿ, "ನಮಗೆ ಅಮ್ಮ ಒಬ್ಬರೇ ಇರುವುದು, ಮೂವರು ಹೆಣ್ಣುಮಕ್ಕಳನ್ನು ಅವರೊಬ್ಬರೇ ಕಷ್ಟಪಟ್ಟು ಸಾಕುತ್ತಿದ್ದಾರೆ" ಎಂದು ಭಾವುಕರಾಗಿ ಹೇಳಿದ್ದರು.

ಇದನ್ನೂ ಓದಿ: Bigg Boss Kannada 13: ನೀನು ಲಫಂಗಾ, ಕಚಡಾ, ನಾಯಿ! ಸೌಂದರ್ಯ ಮೇಲೆ ಜಗ್ಗಣ್ಣ ಕೆಂಡಾಮಂಡಲ!

ಆಗ ಈ ಹಿಂದೆ ಬೇರೊಂದು ರಿಯಾಲಿಟಿ ಶೋನಲ್ಲಿ "ನಮ್ಮದು ಜಾಯಿಂಟ್ ಫ್ಯಾಮಿಲಿ, ಅಪ್ಪ-ಅಮ್ಮ ಇದ್ದಾರೆ" ಎಂದಿದ್ದ ಹಳೆಯ ವಿಡಿಯೋ ವೈರಲ್ ಆಗಿ, ಗಾನವಿ 'ಸಿಂಪತಿ ಗಿಟ್ಟಿಸಲು ಸುಳ್ಳು ಹೇಳುತ್ತಿದ್ದಾರೆ' ಎಂದು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದರು.




ಈ ವಿವಾದ ಇಷ್ಟೊಂದು ದೊಡ್ಡದಾಗಲು ಇನ್ನೊಂದು ಮುಖ್ಯ ಕಾರಣ ಸ್ಪರ್ಧಿ ಆಸಿಯಾ. "ಆಸಿಯಾ ಕೂಡ ಮನೆಯವರಿಂದ ದೂರವಿದ್ದು ಪತ್ರಕ್ಕಾಗಿ ಹಾತೊರೆಯುತ್ತಿದ್ದರು. ಆದರೆ ಗಾನವಿಯ ಈ ಭಾವನಾತ್ಮಕ ಮಾತಿನಿಂದಾಗಿ ಆಸಿಯಾಗೆ ಸಿಗಬೇಕಿದ್ದ ಅವಕಾಶ ಕೈತಪ್ಪಿತು.

ಇದನ್ನೂ ಓದಿ: Bigg Boss Kannada 13: ಜಗದೀಶ್‌ಗೆ ಕಿಚ್ಚ ಸುದೀಪ್ ಕ್ಲಾಸ್, ನಂಬರ್ 1 ಸ್ಥಾನಕ್ಕಾಗಿ ಮನೆಯವರ ನಡುವೆ ಫೈಟ್!

ಆಸಿಯಾ ತನ್ನ ಕಷ್ಟವನ್ನು ಎಲ್ಲಿಯೂ ಪ್ರಚಾರ ಮಾಡಿಕೊಳ್ಳದೆ ಗಟ್ಟಿಯಾಗಿ ನಿಂತಿದ್ದರು. ಆದರೆ ಗಾನವಿ ಕಣ್ಣೀರು ಹಾಕಿ ಸಹ-ಸ್ಪರ್ಧಿಗಳ ಕರುಣೆ ಗಿಟ್ಟಿಸಿಕೊಂಡು ಪತ್ರ ಪಡೆದರು, ಇದು ಆಸಿಯಾಗೆ ಮಾಡಿದ ಅನ್ಯಾಯ" ಎಂದು ಆಸಿಯಾ ಪರವಾಗಿ ನೆಟ್ಟಿಗರು ಕಮೆಂಟ್‌ ಮಾಡಿದ್ದರು.

Yashaswi Devadiga

View all posts by this author