ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ನಿಮ್ಮದು ಮೊಸಳೆ ಕಣ್ಣೀರೆ! ಮಾತಲ್ಲೇ ಆಸಿಯಾಗೆ ಚಾಟಿ ಏಟು ಕೊಟ್ಟ ಗಾನವಿ

Bigg Boss Kannada 13: ಬಿಗ್‌ ಬಾಸ್‌ ಮನೆಯ (Bigg Boss Kannada 13) 'ಪಾಪದ ಕೊಡ ತುಂಬಿದ ಟಾಸ್ಕ್‌ನಲ್ಲಿ ಗಗನ್ - ಧನುಷ್ ನಡುವೆ ದೊಡ್ಡ ವಾಗ್ವಾದವೇ ನಡೆದಿದೆ. ಅಷ್ಟೇ ಅಲ್ಲ ಆಸಿಯಾ ಮುಖವಾಡವನ್ನ ಕಳಚಿದ್ದಾರೆ ಗಾನವಿ. ನಿಮ್ಮದು ಮೊಸಳೆ ಕಣ್ಣೀರೆ ಎಂದು ನೇರವಾಗಿ ಹೇಳಿದ್ದಾರೆ. ಇನ್ನೊಂದು ಕಡೆ ಗಗನ್‌ ಅವರು ತಾಂಡವ್‌ ವಿಚಾರಕ್ಕೆ ಮಾತನಾಡಿದ್ದಾರೆ

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯ (Bigg Boss Kannada 13) 'ಪಾಪದ ಕೊಡ ತುಂಬಿದ ಟಾಸ್ಕ್‌ನಲ್ಲಿ ಗಗನ್ - ಧನುಷ್ (Dhanush) ನಡುವೆ ದೊಡ್ಡ ವಾಗ್ವಾದವೇ ನಡೆದಿದೆ. ಅಷ್ಟೇ ಅಲ್ಲ ಆಸಿಯಾ ಮುಖವಾಡವನ್ನ ಕಳಚಿದ್ದಾರೆ ಗಾನವಿ (Ganavi). ನಿಮ್ಮದು ಮೊಸಳೆ ಕಣ್ಣೀರೆ ಎಂದು ನೇರವಾಗಿ ಹೇಳಿದ್ದಾರೆ.

ನನ್ನ ಬೇಳೆ ಬೇಯಿಸಿಕೊಳಲ್ಲ

ಗಾನವಿ ಮಾತನಾಡಿ, ಇನ್ನೊಬ್ಬರನ್ನು ಟಾಸ್ಕ್‌ನಲ್ಲಿ ಯೂಸ್‌ ಮಾಡಿಕೊಂಡು ನನ್ನ ಬೇಳೆ ಬೇಯಿಸಿಕೊಳಲ್ಲ. ನಾನು ಅತ್ತಿದ್ದು ನನ್ನ ತಲೆಗೆ ಹೊಡ್ತಾ ಬಿತ್ತು ಅಂತ. ನಿಮ್ಮತ್ರ ಹೇಳಿಸಿಕೊಳ್ಳೋ ಅವಶ್ಯಕತೆ ಇಲ್ಲ. ವೀಕ್ಷಕರು ನೋಡ್ತಾ ಇದ್ದಾರೆ. ನಾನು ಅತ್ತರೆ ನನ್ನ ವೈಯಕ್ತಿಕ ವಿಚಾರಕ್ಕೆ, ನೀವು ಅತ್ತರೆ ಅದು ಬೇರೆ ಅವರ ವಿಚಾರಕ್ಕೆ. ನನಗೆ ನಿಮಗೆ ತುಂಬಾ ವ್ಯತ್ಯಾಸ ಇದೆ ಹೋಲಸಕ್ಕೆ ಬರಬೇಡಿ. ವೀಕೆಂಡ್‌ನಲ್ಲಿ ಸರ್‌ ಬಂದ್ರು ಮಾತಾಡಿದ್ರು, ತಿದ್ದಿಕೊಳ್ಳಬೇಕು. ಅದಕ್ಕೆ ಸಮಯ ಬೇಕು. ಅದು ನೀವು ಕೊಡಕ್ಕೆ ತಯಾರಿಲ್ಲ ಅಂದ್ರೆ ನೀವು ಎಷ್ಟು ದೊಡ್ಡವರು ಅಂತ ಅರ್ಥ ಆಗತ್ತೆ. ಇನ್ನೂ ನಿಜ ಹೇಳಬೇಕು ಅಂದ್ರೆ ನಿಮ್ಮದು ಮೊಸಳೆ ಕಣ್ಣೀರೆ ಎಂದು ನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 13: ಅವಳು ಬೇಡ ಅಂದ್ರೂ ಬಿಡಲ್ಲ; ‘ಪ್ರೀತ್ಸೇ’ ಅಂತ ಸೋನಿಕಾ ಹಿಂದೆ ಬಿದ್ದ ಜಗ್ಗ ಮಮ್ಮಿ!



ಇನ್ನೊಂದು ಕಡೆ ಗಗನ್‌ ಅವರು ತಾಂಡವ್‌ ವಿಚಾರಕ್ಕೆ ಮಾತನಾಡಿದ್ದಾರೆ.`ನನ್ನ ಗೆಳೆಯ (ತಾಂಡವ್) ಅವರ ಶೇ.50ರಷ್ಟು ವೋಟ್ ಕಸಿದುಕೊಂಡು, ನೀನು ಇಲ್ಲಿಗೆ ಬಂದು ಮೊಸಳೆ ಕಣ್ಣೀರು ಹಾಕಿದ್ದೀಯಾ' ಎಂದಿದ್ದಾರೆ. ಇದಕ್ಕೆ ಧನುಷ್ 'ನಿನ್ನ ವೈಯಕ್ತಿಕ ರೀಸನ್ ಇಲ್ವಾ?” ಎಂದಿದ್ದಾರೆ. 'ನಿನ್ನ ಪಾಪದ ಕೊಡ ನಾನು ತುಂಬಿಸುತ್ತೇನೆ. ಹೆಂಗೆ ಕಳುಹಿಸಬೇಕೆನ್ನುವುದು ನನಗೆ ಗೊತ್ತಿದೆ' ಎಂದು ಗಗನ್ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 13: ರಾಕ್ಷಸರಾಗಿ ಮಂಜ, ಕಾವ್ಯಾಗೆ ಕಾಟ ಕೊಟ್ಟು ರಣಕೇಕೆ! ಕಾಲಿಗೆ ಬಿದ್ದ ತಾಂಡವ್‌

'ಬಿಗ್ ಬಾಸ್' ಮನೆಯಲ್ಲಿ ರಾಕ್ಷಸರು - ಗಂಧರ್ವರ ಅಟ್ಟಹಾಸ ಶುರುವಾಗಿದೆ. ಎರಡು ತಂಡಗಳಾಗಿ ಸ್ಪರ್ಧಿಗಳು ವಿಂಗಡಣೆ ಆಗಿದ್ದಾರೆ. ಪ್ರಶಾಂತ್, ಮಂಜ, ಜಗ್ಗಿ, ಗಗನ್, ಸೌಂದರ್ಯ, ಸಂಗೀತಾ ರಾಕ್ಷಸರಾಗಿ ಟಾಸ್ಕ್ ಆಡಲಿದ್ದಾರೆ. ಇನ್ನೊಂದು ಕಡೆ ತಾಂಡವ್, ಕಾವ್ಯ, ಸೋನಿಕಾ, ಧನುಷ್, ಯಶಸ್, ಗಾನವಿ, ಕಿರಣ್ – ಗಂಧರ್ವರ ತಂಡದಲ್ಲಿದ್ದಾರೆ.

Yashaswi Devadiga

View all posts by this author