ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಅವಳು ಬೇಡ ಅಂದ್ರೂ ಬಿಡಲ್ಲ; ‘ಪ್ರೀತ್ಸೇ’ ಅಂತ ಸೋನಿಕಾ ಹಿಂದೆ ಬಿದ್ದ ಜಗ್ಗ ಮಮ್ಮಿ!

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಜಗದೀಶ್ ಅವರ ಹೊಸ ಲವ್‌ ವಿಚಾರ ಸಖತ್‌ ಅಚ್ಚರಿ ತಂದಿದೆ ವೀಕ್ಷಕರಿಗೆ. ಈಗಾಗಲೇ ಮದುವೆಯಾಗಿ ಮಗುವಿರುವ ಜಗದೀಶ್ ವರ್ತನೆ ಕೆಟ್ಟದಾಗಿ ಕಾಣಿಸುತ್ತಿದ್ದು, ಇತ್ತೀಚೆಗಷ್ಟೇ ಮದುವೆಯಾದ ಪ್ರಶಾಂತ್ ಸಹ ಸೋನಿಕಾ ಜೊತೆ ಫ್ಲರ್ಟ್ ಮಾಡಲು ಯತ್ನಿಸುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸೋನಿಕಾ ಹಿಂದೆ ಬಿದ್ದಿರುವ ಜಗ್ಗನ ವಿಚಾರ ಕಿರಣ್ ಶಾಸ್ತ್ರಿ ಜೊತೆ ಮಾತುಕತೆ ಮಾಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ಜಗದೀಶ್ ಅವರ ಹೊಸ ಲವ್‌ ವಿಚಾರ ಸಖತ್‌ ಅಚ್ಚರಿ ತಂದಿದೆ ವೀಕ್ಷಕರಿಗೆ. ಈಗಾಗಲೇ ಮದುವೆಯಾಗಿ ಮಗುವಿರುವ ಜಗದೀಶ್ (Jagadeesh) ವರ್ತನೆ ಕೆಟ್ಟದಾಗಿ ಕಾಣಿಸುತ್ತಿದ್ದು, ಇತ್ತೀಚೆಗಷ್ಟೇ ಮದುವೆಯಾದ ಪ್ರಶಾಂತ್ ಸಹ ಸೋನಿಕಾ ಜೊತೆ ಫ್ಲರ್ಟ್ ಮಾಡಲು ಯತ್ನಿಸುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸೋನಿಕಾ ಹಿಂದೆ ಬಿದ್ದಿರುವ ಜಗ್ಗನ ವಿಚಾರ ಕಿರಣ್ ಶಾಸ್ತ್ರಿ (Kiran shastri) ಜೊತೆ ಮಾತುಕತೆ ಮಾಡಿದ್ದಾರೆ.

ಇಷ್ಟಪಡಲೇಬೇಕು!

ಒಂದು ಕಡೆ ಮನೆಯಲ್ಲಿ ಸೌಂದರ್ಯ, ಆಸಿಯಾ ಹಾಗೂ ಯಶಸ್‌ ನಡುವೆ ಟ್ರಯಾಂಗಲ್‌ ಲವ್‌ ಸ್ಟೋರಿ ಇದ್ದರೆ, ಇನ್ನೊಂದು ಕಡೆ ಜಗ್ಗ ಅವರ ಲವ್‌ ಟ್ರ್ಯಾಕ್‌ ಶುರುವಾಗಿದೆ. ಕಿರಣ್ ಶಾಸ್ತ್ರಿ ಅವರೊಂದಿಗೆ ಜಗದೀಶ್ ನಡೆಸಿದ ಸಂಭಾಷಣೆ ಹೊರಗಿನ ಪ್ರೇಕ್ಷಕರಲ್ಲೂ ಭಾರೀ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: Bigg Boss Kannada 13: 'ಪಾಪದ ಕೊಡ' ಟಾಸ್ಕ್‌ನಲ್ಲಿ ಯಶಸ್‌- ತಾಂಡವ್‌ ನಡುವೆ ಟಾಕ್‌ ಫೈಟ್‌!

ನಾನು ಅವರನ್ನ ಒಪ್ಪಿಸ್ತೀನಿ . ಅವರಿಗೆ ಬೇಡ ಅಂದರೆ? ನನಗೆ ಬೇಕು. ಅವರು ಇಷ್ಟಪಡಲೇಬೇಕು, ಇಲ್ಲಾಂದ್ರೆ ಇಷ್ಟ ಪಡೋ ತರಹ ಮಾಡ್ತೀನಿಅವರಿಗೆ ಒಳ್ಳೆಯ ಮನಸ್ಸಿದೆ ದೊಡ್ಡವರಾದ್ರೂ ಸರಿ. ಪ್ರೀತಿ ಮಾಡೋಕೆ ವಯಸ್ಸಲ್ಲ, ಮನಸ್ಸು ಮುಖ್ಯ ಎಂದು ಕಿರಣ್‌ ಬಳಿ ಹೇಳಿಕೊಂಡಿದ್ದಾರೆ ಜಗ್ಗ.

ನಂತರ ಕಿರಣ್ ಶಾಸ್ತ್ರಿ ಈ ವಿಷಯವನ್ನ ಸೋನಿಕಾ ಅವರ ಬಳಿ ತಂದು, ಇವನು ನಿಜವಾಗಿಯೂ ಹುಚ್ಚನಾಗಿಬಿಟ್ಟಿದ್ದಾನೆ ಎಂದು ಹೇಳಿದ್ದಾರೆ. ಆ ಬಳಿಕ ಸೋನಿಕಾ ಅವರು ನನಗೆ ನೀವು ಅಣ್ಣನಂತೆ ಎಂದರೂ ಜಗ್ಗ ತಾನು ಒಪ್ಪಲ್ಲ ಎಂದು ನೇರವಾಗಿ ಹೇಳಿದ್ದಾರೆ.



ಇದೀಗ ಜಗ್ಗನ ವರ್ತನೆಗೆ ಛೀಮಾರಿ ಹಾಕುತ್ತಿದ್ದಾರೆ ವೀಕ್ಷಕರು. ಅದರಲ್ಲೂ ಜಗದೀಶ್ ಅವರಿಗೆ ಮದುವೆಯಾಗಿ ಒಂದು ಮಗುವಿದೆ.ಈ ರೀತಿ ಯುವತಿಯೊಬ್ಬಳ ಜೊತೆ ಫ್ಲರ್ಟ್ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನೆ ಇಡುತ್ತಿದ್ದಾರೆ.

ಇದನ್ನೂ ಓದಿ: Bigg Boss Kannada 13: ರಾಕ್ಷಸರಾಗಿ ಮಂಜ, ಕಾವ್ಯಾಗೆ ಕಾಟ ಕೊಟ್ಟು ರಣಕೇಕೆ! ಕಾಲಿಗೆ ಬಿದ್ದ ತಾಂಡವ್‌

ಕೆಲವು ಸಂದರ್ಭಗಳಲ್ಲಿ ಮನೆಯಲ್ಲಿ ಹೈಲೈಟ್‌ ಆಗಬೇಕು ಅನ್ನೋ ಉದ್ದೇಶಕ್ಕೆ ಈ ರೀತಿ ಡ್ರಾಮ ಮಾಡೋದು ಇದೆ. ಅದೇನೇ ಇರಲಿ ಇದು ಮಿತಿ ಮೀರದೇ ಇರಲಿ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Yashaswi Devadiga

View all posts by this author