ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಮಗಳ ಪತ್ರ ಮತ್ತು ಧ್ವನಿ ಸಂದೇಶ ಸಿಗುತ್ತಿದ್ದಂತೆ ಜಗ್ಗ ಮಮ್ಮಿ ಭಾವುಕ!

Bigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ರಿಯಾಲಿಟಿ ಶೋನಲ್ಲಿ ಈ ವಾರ ಸ್ಪರ್ಧಿಗಳಿಗೆ ಕುಟುಂಬದವರ ಪತ್ರ ಓದುವ ಅವಕಾಶ ನೀಡಲಾಗುತ್ತಿದೆ. ಜಗ್ಗ ಮಮ್ಮಿಗೆ (Jagga Mummy) ತಮ್ಮ ಮುದ್ದಿನ ಮಗಳ ಪ್ರೀತಿಯ ಲೆಟರ್ ಹಾಗೂ ಧ್ವನಿ ಸಂದೇಶ ತಲುಪಿದ್ದು, ದೊಡ್ಮನೆಯ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. ನನ್ನ ಕಣ್ಣೆದುರು ನೀನು ಯಾವತ್ತಿಗೂ ಇರಬೇಕು, ಯಾಕೆಂದರೆ ನೀನೇ ನನಗೆಲ್ಲ ಎಂದು ಕಣ್ಣೀರಿಟ್ಟಿದ್ದಾರೆ ಜಗ್ಗ.

ಬಿಗ್‌ ಬಾಸ್‌ ಕನ್ನಡ

‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ರಿಯಾಲಿಟಿ ಶೋನಲ್ಲಿ ಈ ವಾರ ಸ್ಪರ್ಧಿಗಳಿಗೆ ಕುಟುಂಬದವರ ಪತ್ರ ಓದುವ ಅವಕಾಶ ನೀಡಲಾಗುತ್ತಿದೆ. ಜಗ್ಗ ಮಮ್ಮಿಗೆ (Jagga Mummy) ತಮ್ಮ ಮುದ್ದಿನ ಮಗಳ ಪ್ರೀತಿಯ ಲೆಟರ್ ಹಾಗೂ ಧ್ವನಿ ಸಂದೇಶ ತಲುಪಿದ್ದು, ದೊಡ್ಮನೆಯ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. ನನ್ನ ಕಣ್ಣೆದುರು ನೀನು ಯಾವತ್ತಿಗೂ ಇರಬೇಕು, ಯಾಕೆಂದರೆ ನೀನೇ ನನಗೆಲ್ಲ ಎಂದು ಕಣ್ಣೀರಿಟ್ಟಿದ್ದಾರೆ ಜಗ್ಗ.

ನಾನು, ಮನೆ ಮತ್ತು ಹೊಲ

ಮನೆಯವರ ಪತ್ರವನ್ನು ಓದುವಾಗ ಎಲ್ಲರೂ ಎಮೋಷನಲ್ ಆಗುತ್ತಿದ್ದಾರೆ. ಜಗದೀಶ್ ಮಗಳಿಂದಲೇ ಅವರಿಗೆ ಪತ್ರ ಬಂದಿದೆ. ಅಲ್ಲದೇ, ವಾಯ್ಸ್ ನೋಟ್ ಕೂಡ ಕಳಿಸಲಾಗಿದೆ. ಅದನ್ನು ಕೇಳಿಸಿಕೊಂಡು ಜಗದೀಶ್ ಅವರು ಕಣ್ಣೀರು ಹಾಕಿದ್ದಾರೆ. ಆ ಪತ್ರದಲ್ಲಿ ಅವರ ಮಗಳು ಒಂದು ಮುದ್ದಾದ ಡ್ರಾಯಿಂಗ್ ಬಿಡಿಸಿದ್ದರು.

“ಇದು ನನ್ನ ಮಗಳು, ನಾನು, ಮನೆ ಮತ್ತು ಹೊಲ” ಎಂದು ಭಾವುಕರಾಗಿ ಪರಿಚಯಿಸಿದರು ಜಗದೀಶ್. “ಅಪ್ಪ ನಾನು ಚೆನ್ನಾಗಿದ್ದೀನಿ. ನೀನು ಚೆನ್ನಾಗಿ ಆಟ ಆಡಿಕೊಂಡು ಬಾ, ಅಜ್ಜಿ-ನಾನು ಚೆನ್ನಾಗಿದ್ದೇವೆ. ಏನೂ ಯೋಚನೆ ಮಾಡ್ಬೇಡ. ಆಟ ಆಡು, ಐ ಲವ್‌ ಯೂ ಅಪ್ಪ” ಎಂದು ಮಗಳು ಪ್ರೀತಿಯಿಂದ ಹೇಳಿದ ಮಾತುಗಳನ್ನ ಕೇಳಿ ಜಗದೀಶ್ ಸಂಪೂರ್ಣವಾಗಿ ಕಣ್ಣೀರಾದರು.

ಇದನ್ನೂ ಓದಿ: Bigg Boss Kannada 13: ಪತ್ರಕ್ಕಾಗಿ ಕಠಿಣ ಪೈಪೋಟಿ; ತಾಂಡವ್, ಧನುಷ್ ನಡುವೆ ಜಿದ್ದಾಜಿದ್ದಿ!



ಇದನ್ನೂ ಓದಿ: Bigg Boss Kannada 13: ಕಿರಣ್ ಶಾಸ್ತ್ರಿ ಕೀಳು ಮಟ್ಟದ ಆಟ; ವೀಕ್ಷಕರ ಆಕ್ರೋಶ

“ನನ್ನ ಜೀವ, ನನ್ನ ಉಸಿರಿರುವವರೆಗೂ ನಿನ್ನನ್ನ ಅಂಗೈಯಲ್ಲಿಟ್ಟು ನೋಡಿಕೊಳ್ತೇನೆ. ನೀನು ಮದುವೆ ಆಗಿ ಹೋದರೂ ಕೂಡ, ನಿನ್ನ ಮನೆಗೆ ಬಂದು ಅಲ್ಲೇ ಕೆಲಸ ಮಾಡಿಕೊಂಡು ಇರ್ತೇನೆ. ನನ್ನ ಕಣ್ಣೆದುರು ನೀನು ಯಾವತ್ತಿಗೂ ಇರಬೇಕು, ಯಾಕೆಂದರೆ ನೀನೇ ನನಗೆಲ್ಲ..” ಎಂದು ಕಣ್ಣೀರಿಡುತ್ತಾ ತಮ್ಮ ಮಗಳ ಮೇಲಿರುವ ಅಪಾರ ಪ್ರೀತಿಯನ್ನ ವ್ಯಕ್ತಪಡಿಸಿದರು.

Yashaswi Devadiga

View all posts by this author