ಮನೆಯ ಸ್ಪರ್ಧಿಗಳ ನಡುವೆ ತೀವ್ರ ವಾಕ್ಸಮರ ಮತ್ತು ಆರೋಪ-ಪ್ರತ್ಯಾರೋಪಗಳು ವ್ಯಕ್ತವಾಗಿದ್ದು, ಕಿರಣ್ ಶಾಸ್ತ್ರಿಗೆ (Kiran shastri) ಕಳಪೆ ಪಟ್ಟ 9Kalape) ನೀಡಿದ್ದಾರೆ. ಕಿರಣ್ ಶಾಸ್ತ್ರಿ ಅವರಿಗೆ ಕಳಪೆ ಪಟ್ಟ ನೀಡಿದ್ದಾರೆ. ಆದ್ದರಿಂದ ಅವರು ಒಂದು ದಿನ ಜೈಲುವಾಸ ಅನುಭವಿಸಬೇಕಾಗಿದೆ. ಕಳಪೆ ಯಾರು ಎಂಬುದನ್ನು ನಿರ್ಧರಿಸುವಾಗ ಕಿರಣ್ ಶಾಸ್ತ್ರಿ ಮೇಲೆ ಹಲವು ಆರೋಪಗಳನ್ನು ಮಾಡಲಾಗಿದೆ.
ಲಿಖಿತ್, ಅವಿನಾಶ್, ಮಂಜ, ವೈಷ್ಣವಿ, ಸೌಂದರ್ಯಾ ಶೆಟ್ಟಿ ಮುಂತಾದವರು ಕಿರಣ್ ಶಾಸ್ತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಕೆಟ್ಟ ಯೋಚನೆ ಇರುವ ಕಳ್ಳ ಕಿರಣ್’ ಎಂದು ಮಂಜ ಅವರು ಖಾರದ ಮಾತುಗಳಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯಿಂದ ತಾಂಡವ್ ರಾಮ್ ಔಟ್! ಬಿಕ್ಕಿ ಬಿಕ್ಕಿ ಅತ್ತ ಗಗನ್
ದೇವಿಯನ್ನು ಹಾಗೂ ಧಾರ್ಮಿಕ ನಂಬಿಕೆಗಳನ್ನು ತಮ್ಮ ಆಟದ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ, ದೇವಿಗೆ ಎಲ್ಲ ವರ ಅವನೇ ಕೇಳುತ್ತಿದ್ದಾನೆ. ನಮಗೂ ವರ ಸಿಗದಂತೆ ಆ ತಾಯಿಯನ್ನು ತಮ್ಮ ಸ್ವಂತ ಲಾಭಕ್ಕಾಗಿ ಉಪಯೋಗಿಸಿಕೊಳ್ಳುವ ಕೆಟ್ಟ ಯೋಚನೆಯುಳ್ಳ 'ಕಳ್ಳ ಕಿರಣ್' ಎಂದು ಕಟುವಾಗಿ ಮಾಡ್ರನ್ ಮಹಾಕವಿ ಮಂಜ ಮತ್ತು ಲಿಖಿತ್ ಗೊಂದಿ ಆರೋಪಿಸಿದ್ದಾರೆ.
ಇನ್ನೂ ಸೌಂದರ್ಯ ಶೆಟ್ಟಿ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ತಮ್ಮ ಕಡೆಯಿಂದ 50% ವೋಟ್‌ನ್ನ ಕಿರಣ್ ಶಾಸ್ತ್ರಿ ತಗೊಂಡಿರುವುದನ್ನ ಖಂಡಿಸಿ, ರಿವೇಂಜ್ ತೀರಿಸಿಕೊಂಡಂತೆಯಿದೆ. ಈ ಬಾರಿ ವಿದೇಶಿ ಥೀಮ್ ಇರುವುದರಿಂದ ವಿದೇಶಿ ಜೈಲುಗಳಲ್ಲಿ ಹಾಕುವ ವಿದೇಶಿ ಶೈಲಿಯ ಖೈದಿ ಬಟ್ಟೆಯನ್ನ ಬಳಕೆ ಮಾಡಿದ್ದಾರೆ.