ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಹೇಳಿದ್ದೇನು? ಮಾಡಿದ್ದೇನು?ಮಂಜುಗೆ ಕಿಚ್ಚನ ಖಡಕ್ ಕ್ಲಾಸ್

Bigg Boss Kannada 13:ಮಂಜು ಅವರ ರೀ-ಎಂಟ್ರಿಯಿಂದ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಲಾಗಿತ್ತು. ಆದರೆ, ಅವರು ನಿರೀಕ್ಷಿತ ಮಟ್ಟದಲ್ಲಿ ಆಟದ ಮೇಲೆ ಪ್ರಭಾವ ಬೀರಿಲ್ಲವೇ? ವಾರದ ಕಥೆ ಕಿಚ್ಚನ (Kichcha Sudeep) ಜೊತೆ ವೇದಿಕೆಯಲ್ಲಿ ಮಂಜು ಆಟದ ಬಗ್ಗೆ ಸುದೀಪ್ ಖಡಕ್ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲೂ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ತಪ್ಪುಗಳನ್ನು ನೇರವಾಗಿ ಪ್ರಶ್ನಿಸುವ ಕ್ಷಣಗಳು ವೀಕೆಂಡ್ ಸಂಚಿಕೆಯ ಪ್ರಮುಖ ಆಕರ್ಷಣೆ.

ಬಿಗ್‌ ಬಾಸ್‌ ಕನ್ನಡ

ಮಂಜು ಅವರ ರೀ-ಎಂಟ್ರಿಯಿಂದ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಲಾಗಿತ್ತು. ಆದರೆ, ಅವರು ನಿರೀಕ್ಷಿತ ಮಟ್ಟದಲ್ಲಿ ಆಟದ ಮೇಲೆ ಪ್ರಭಾವ ಬೀರಿಲ್ಲವೇ? ವಾರದ ಕಥೆ ಕಿಚ್ಚನ (Kichcha Sudeep) ಜೊತೆ ವೇದಿಕೆಯಲ್ಲಿ ಮಂಜು ಆಟದ ಬಗ್ಗೆ ಸುದೀಪ್ ಖಡಕ್ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲೂ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ತಪ್ಪುಗಳನ್ನು ನೇರವಾಗಿ ಪ್ರಶ್ನಿಸುವ ಕ್ಷಣಗಳು ವೀಕೆಂಡ್ ಸಂಚಿಕೆಯ ಪ್ರಮುಖ ಆಕರ್ಷಣೆ.

ಬಿಗ್ ಬಾಸ್ ಮನೆಯಿಂದ ಹೊರಬಂದು ಮತ್ತೆ ರೀ-ಎಂಟ್ರಿ ನೀಡಿರುವ ಮಾಡ್ರನ್ ಮಹಾಕವಿ ಮಂಜು ಅವರ ಆಟದ ಬಗ್ಗೆ ಇದೀಗ ಕಿಚ್ಚ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮನೆಗೆ ಮರಳುವ ಮುನ್ನ ದೊಡ್ಡ ಮಟ್ಟದಲ್ಲಿ ಆಟವಾಡುವ ಭರವಸೆ ನೀಡಿದ್ದ ಮಂಜು, ಒಳಗೆ ಹೋದ ಬಳಿಕ ನಿರೀಕ್ಷಿತ ಬದಲಾವಣೆ ತರುವಲ್ಲಿ ವಿಫಲರಾಗಿದ್ದಾರೆಯೇ ಎಂಬ ಪ್ರಶ್ನೆಯನ್ನು ಸುದೀಪ್ ಮುಂದಿಟ್ಟಿದ್ದಾರೆ.

ಗೇಮ್ ಚೇಂಜರ್ ಆಗ್ತೀನಿ ಎಂದಿದ್ದ ಮಂಜು ಎಲ್ಲಿ ಹೋದರು?

ಬಿಗ್ ಬಾಸ್ ಮನೆಯೊಳಗೆ ಮತ್ತೆ ಪ್ರವೇಶಿಸುವ ಮುನ್ನ ಮಂಜು, 'ಈ ಬಾರಿ ಧಗ ಧಗನೇ ಧ್ವಂಸ ಮಾಡಿಬಿಡ್ತೀನಿ' ಎಂಬ ಮಾತುಗಳ ಮೂಲಕ ತಮ್ಮ ಆಟದ ಬಗ್ಗೆ ದೊಡ್ಡ ನಿರೀಕ್ಷೆ ಹುಟ್ಟಿಸಿದ್ದರು. ಆದರೆ, ರೀ-ಎಂಟ್ರಿ ಬಳಿಕ ಅವರ ಆಟದಲ್ಲಿ ಅಷ್ಟೊಂದು ಪರಿಣಾಮಕಾರಿ ಬದಲಾವಣೆ ಕಾಣಿಸಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: Bigg Boss Kannada 13: ಬಿಗ್‌ ಬಾಸ್‌ ಮನೆಯ ಹಾವು ಗಾನವಿ! ಸೌಂದರ್ಯ ಶೆಟ್ಟಿ ವಿಡಿಯೋ ಭರ್ಜರಿ ವೈರಲ್‌

'ಮಂಜು ಬಂದು ಏನೋ ಅಲ್ಲಾಡಿಸುತ್ತಾರೆ ಅಂದುಕೊಂಡರೆ, ಕಾರ್ನರ್‌ನಲ್ಲಿ ಒಬ್ಬರ ಬಳಿ ಸೆಟಲ್ ಆಗಿದ್ದಾರೆ. ನೀವು ನಂಬಿಕೊಂಡಿದ್ದೀರಿ, ತಾವು ಗೇಮ್ ಚೇಂಜರ್ ಅಂತ. ಮನೆಯವರು ಯಾರೂ ನಂಬೇ ಇಲ್ಲ. ಒಂದು ವಾರದ ಹಿಂದೆ ಏನು ಹೇಳಿದ್ರಿ?' ಎಂದು ಸುದೀಪ್ ಖಡಕ್ ಆಗಿ ಪ್ರಶ್ನಿಸಿರುವುದು ಪ್ರೋಮೋದಲ್ಲಿ ಗಮನ ಸೆಳೆದಿದೆ.

ಮಂಜು ಎಂಟ್ರಿಯಿಂದ ಜೋಕರ್ ಆದವರು ಯಾರು?

ಇಂದಿನ ಸಂಚಿಕೆಯ ಮತ್ತೊಂದು ಪ್ರೋಮೋ ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ. 'ಹೊಸ ಕಾರ್ಡ್ ಅಬ್ಬರದಿಂದ ಸ್ಮಾರ್ಟ್ ಆದವರು ಯಾರು? ಜೋಕರ್ ಆದವರು ಯಾರು? ತಪ್ಪಿಸಿಕೊಳ್ಳೋಕೆ ಆಗದೆ ಸಿಕ್ಕಿಹಾಕಿಕೊಂಡವರು ಯಾರು?' ಎಂದು ಕಿಚ್ಚ ಸುದೀಪ್ ಪ್ರಶ್ನಿಸಿರುವುದು ಕಂಡುಬಂದಿದೆ.

ಯಶಸ್ ನಿರ್ಧಾರದಿಂದ ಆಸಿಯಾಗೆ ಬೇಸರ!

ಇದೇ ವೇಳೆ ಮನೆಯ ಮತ್ತೊಂದು ವಿಚಾರವೂ ವೀಕ್ಷಕರ ಗಮನ ಸೆಳೆಯುತ್ತಿದೆ. ಇಷ್ಟು ದಿನ ಯಶಸ್ ಮತ್ತು ಆಸಿಯಾ ನಡುವೆ ಉತ್ತಮ ಬಾಂಧವ್ಯವಿತ್ತು. ಆದರೆ, ಯಶಸ್ ತೆಗೆದುಕೊಂಡ ಒಂದು ನಿರ್ಧಾರದಿಂದ ಆಸಿಯಾ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರವೂ ಇಂದಿನ ವಾರಾಂತ್ಯದ ಸಂಚಿಕೆಯಲ್ಲಿ ಚರ್ಚೆಗೆ ಬರಲಿದೆ.



ಇದನ್ನೂ ಓದಿ: ‌Bigg Boss kannada 13: ಎರಡನೇ ಬಾರಿಗೆ ಕ್ಯಾಪ್ಟನ್‌ ಆದ ಜಗ್ಗ ಮಮ್ಮಿ! ಬಿಕ್ಕಿ ಬಿಕ್ಕಿ ಅತ್ತ ಧನುಷ್

ಈ ಹಿಂದೆ ಯಶಸ್ ಮತ್ತು ಅವರ ಕುಟುಂಬದ ಬಗ್ಗೆ ಅಸಭ್ಯ ಪದಗಳನ್ನು ಬಳಸಿದ ಆರೋಪದ ಹಿನ್ನೆಲೆಯಲ್ಲಿ ಮಂಜು ಬಿಗ್ ಬಾಸ್ ಮನೆಯಿಂದ ಹೊರಹೋಗಬೇಕಾಗಿತ್ತು. ಸಾಮಾನ್ಯವಾಗಿ ಎಲಿಮಿನೇಟ್ ಆದ ಸ್ಪರ್ಧಿಗಳು ಮತ್ತೆ ವೇದಿಕೆಗೆ ಬರುವ ಅವಕಾಶ ಪಡೆಯುವ ಸಂದರ್ಭದಲ್ಲಿ, ಮಂಜು ಅವರಿಗೆ ವಿಶೇಷ ಅವಕಾಶ ನೀಡಲಾಗಿತ್ತು. ಅಷ್ಟೇ ಅಲ್ಲದೆ, ಅವರಿಗೆ ಬಹುಮಾನದ ಹಣವನ್ನೂ ನೀಡಲಾಗಿತ್ತು. ಇದೀಗ ಅತಿಥಿಯಾಗಿ ಮತ್ತೆ ಮನೆಯೊಳಗೆ ಪ್ರವೇಶಿಸುವ ಅವಕಾಶವೂ ಸಿಕ್ಕಿತ್ತು.

Yashaswi Devadiga

View all posts by this author