ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಕಿಚ್ಚನ ಜೊತೆ ಆ ಒಂದು ಗುಳ್ಳೆನರಿಯ ಕತೆ! ಕಾದಿದೆ ಶಾಕಿಂಗ್‌ ಟ್ವಿಸ್ಟ್

Bigg Boss Kannada 13:‘ಬಿಗ್ ಬಾಸ್ ಕನ್ನಡ ಸೀಸನ್ 13’ರ (Bigg Boss Kannada 13) ಮನೆಯಲ್ಲಿ ಈ ವಾರ ನಡೆದ ಗುಳ್ಳೆನರಿಯ (Gulle Nari) ಆಟ ಭಾರಿ ಕುತೂಹಲ ಮೂಡಿಸಿದೆ. ಇಡೀ ವಾರ ಮನೆಯ ಸದಸ್ಯರ ನಡುವೆ ಅನುಮಾನ, ಗೊಂದಲ ಮತ್ತು ತಂತ್ರಗಳ ಆಟಕ್ಕೆ ಕಾರಣವಾಗಿದ್ದ ಗುಳ್ಳೆನರಿ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಗಲಿದೆ. ಎಲ್ಲರ ಜೊತೆಯಲ್ಲೇ ಇದ್ದುಕೊಂಡು ರಹಸ್ಯವಾಗಿ ತನ್ನದೇ ತಂಡಕ್ಕೆ ಸೋಲುಣಿಸುವ ಜವಾಬ್ದಾರಿ ಹೊತ್ತಿದ್ದ ಆ ಸ್ಪರ್ಧಿ ಬೇರೆ ಯಾರೂ ಅಲ್ಲ, ಯಶಸ್

ಬಿಗ್‌ ಬಾಸ್‌ ಕನ್ನಡ

‘ಬಿಗ್ ಬಾಸ್ ಕನ್ನಡ ಸೀಸನ್ 13’ರ (Bigg Boss Kannada 13) ಮನೆಯಲ್ಲಿ ಈ ವಾರ ನಡೆದ ಗುಳ್ಳೆನರಿಯ (Gulle Nari) ಆಟ ಭಾರಿ ಕುತೂಹಲ ಮೂಡಿಸಿದೆ. ಇಡೀ ವಾರ ಮನೆಯ ಸದಸ್ಯರ ನಡುವೆ ಅನುಮಾನ, ಗೊಂದಲ ಮತ್ತು ತಂತ್ರಗಳ ಆಟಕ್ಕೆ ಕಾರಣವಾಗಿದ್ದ ಗುಳ್ಳೆನರಿ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಗಲಿದೆ. ಎಲ್ಲರ ಜೊತೆಯಲ್ಲೇ ಇದ್ದುಕೊಂಡು ರಹಸ್ಯವಾಗಿ ತನ್ನದೇ ತಂಡಕ್ಕೆ ಸೋಲುಣಿಸುವ ಜವಾಬ್ದಾರಿ ಹೊತ್ತಿದ್ದ ಆ ಸ್ಪರ್ಧಿ ಬೇರೆ ಯಾರೂ ಅಲ್ಲ, ಯಶಸ್ (Yashas)

ಆದರೆ ವಿಶೇಷವೆಂದರೆ, ಇಡೀ ವಾರ ಗುಳ್ಳೆನರಿಯ ಪಾತ್ರವನ್ನು ಯಶಸ್ ನಿರ್ವಹಿಸಿದ್ದರೂ ಮನೆಯ ಇತರ ಸ್ಪರ್ಧಿಗಳಿಗೆ ಆತನ ನಿಜವಾದ ಗುರುತು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಇದೀಗ ವಾರಾಂತ್ಯದ ಕಿಚ್ಚನ ಪಂಚಾಯ್ತಿಯಲ್ಲಿ ಸ್ವತಃ ಕಿಚ್ಚ ಸುದೀಪ್ ಈ ರಹಸ್ಯವನ್ನು ಬಹಿರಂಗಪಡಿಸಲಿದ್ದಾರೆ.

ನರಿಯನ್ನ ಹುಡುಕಲು ಹೊರಟ ಕಾಗೆ, ನರಿಯ ಹೆಜ್ಜೆಯ ಗುರುತನ್ನು ಕಂಡು ಹಿಡಿಯಲು ಆಗಲಿಲ್ಲ. ಸೋತು ಕೊರಗಿ ಒಂದು ಕಡೆ ಕೂತಿದ್ದಾರೆ. ನರಿ ಯಾರು ಅಂತ ಕಂಡು ಹಿಡಿಯಲು ಆಗದೇ ಇರುವ ಮನೆ ಸೋತಿದ್ದು ಎಲ್ಲಿ? ಎಂಬುದು ಇಂದಿನ ವಾರದ ಕಥೆ ಎಂದಿದ್ದಾರೆ ಕಿಚ್ಚ.

ಇದನ್ನೂ ಓದಿ: Gowri Putra Serial: ಏನೇ ಮಾಡೋದಕ್ಕೆ ಹೋದ್ರೂ ಎಡವಟ್ಟಲ್ಲೇ ಕೊನೆಯಾಗ್ತಿದೆ ಕಾರ್ತಿಕ್‌ ಬಾಳು!

ಬಿಗ್ ಬಾಸ್ ನೀಡಿದ್ದೇನು ಈ ಗುಳ್ಳೆನರಿ ಟಾಸ್ಕ್?

ಕಾಡಿನಲ್ಲಿ ಅಧಿಕಾರ ಮತ್ತು ಲಾಭ ಪಡೆಯಲು ಕೆಲವು ಪ್ರಾಣಿಗಳು ಚಾಣಾಕ್ಷತನ, ತಂತ್ರ ಹಾಗೂ ನಂಬಿಕೆಯ ಮುಖವಾಡವನ್ನು ಬಳಸುತ್ತವೆ. ಇದೇ ಪರಿಕಲ್ಪನೆಯ ಆಧಾರದ ಮೇಲೆ ಬಿಗ್ ಬಾಸ್ ಮನೆಯಲ್ಲಿ ವಿಶೇಷವಾದ ಗುಳ್ಳೆನರಿ ಆಟವನ್ನು ಆಯೋಜಿಸಲಾಗಿತ್ತು.

ಈ ಆಟದಲ್ಲಿ ಗುಳ್ಳೆನರಿಯ ಪಾತ್ರ ನಿರ್ವಹಿಸುವ ಸ್ಪರ್ಧಿಗೆ ಒಂದು ರಹಸ್ಯ ಜವಾಬ್ದಾರಿ ನೀಡಲಾಗಿತ್ತು. ತನ್ನದೇ ತಂಡದ ಸದಸ್ಯರೊಂದಿಗೆ ಆತ್ಮೀಯವಾಗಿರುವಂತೆ ನಟಿಸುತ್ತಾ, ಒಳಗೊಳಗೇ ತಂಡವನ್ನು ಸೋಲಿಸುವುದು ಆತನ ಪ್ರಮುಖ ಗುರಿಯಾಗಿತ್ತು.

ತನ್ನ ಗುರುತು ಬಯಲಾಗದಂತೆ ಎಚ್ಚರಿಕೆಯಿಂದ ಆಟವಾಡುವುದು, ಸಮಯಪ್ರಜ್ಞೆ ಪ್ರದರ್ಶಿಸುವುದು ಮತ್ತು ಸಹಸ್ಪರ್ಧಿಗಳ ವಿಶ್ವಾಸ ಗಳಿಸುವುದು ಈ ಟಾಸ್ಕ್‌ನ ಪ್ರಮುಖ ಸವಾಲಾಗಿತ್ತು.

ಎಲ್ಲರನ್ನೂ ಯಾಮಾರಿಸಿದ ಯಶಸ್!

ಈ ವಿಶೇಷ ಆಟದಲ್ಲಿ ಯಶಸ್ ಗುಳ್ಳೆನರಿಯ ಪಾತ್ರವನ್ನು ಅತ್ಯಂತ ಜಾಣ್ಮೆಯಿಂದ ನಿರ್ವಹಿಸಿದ್ದಾರೆ. ತಂಡದ ಸದಸ್ಯರೊಂದಿಗೆ ಬೆರೆತು, ಅವರ ವಿಶ್ವಾಸ ಗಳಿಸುತ್ತಲೇ ರಹಸ್ಯವಾಗಿ ತನ್ನ ಆಟ ಮುಂದುವರಿಸಿದ್ದಾರೆ.ಯಾರು ನಿಜವಾದ ಸ್ನೇಹಿತರು? ಯಾರು ಒಳಗೊಳಗೇ ದ್ರೋಹದ ಆಟ ಆಡುತ್ತಿದ್ದಾರೆ? ಎಂಬ ಅನುಮಾನ ಇಡೀ ವಾರ ಮನೆಯ ಸದಸ್ಯರನ್ನು ಕಾಡಿದೆ. ಗುಳ್ಳೆನರಿಯ ನಡೆಗಳಿಂದ ಸ್ಪರ್ಧಿಗಳು ಗೊಂದಲಕ್ಕೀಡಾಗಿದ್ದು, ಮನೆಯೊಳಗೆ ಪರಸ್ಪರ ಅನುಮಾನಗಳು ಹೆಚ್ಚಾಗಿವೆ.ʼ



ಇದರ ನಡುವೆ ಪ್ರಶಾಂತ್ ಹಂಟೆಡ್ ವಿಚಾರವೂ ಮನೆಯೊಳಗೆ ಚರ್ಚೆಗೆ ಗ್ರಾಸವಾಗಿದೆ. ಆದರೆ ಗುಳ್ಳೆನರಿಯ ಅಸಲಿ ಮುಖ ಯಾರೆಂಬುದನ್ನು ಮಾತ್ರ ಯಾರಿಗೂ ನಿಖರವಾಗಿ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಕಿಚ್ಚನ ಪಂಚಾಯ್ತಿಯಲ್ಲಿ ಬಯಲಾಗಲಿದೆ ಗುಳ್ಳೆನರಿಯ ರಹಸ್ಯ!

ಈ ವಾರದ ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ಗುಳ್ಳೆನರಿಯ ನಿಜವಾದ ಗುರುತನ್ನು ಬಹಿರಂಗಪಡಿಸಲಿದ್ದಾರೆ. ಇಡೀ ವಾರ ಮನೆಯ ಸದಸ್ಯರ ಕಣ್ಣಿಗೆ ಮಣ್ಣೆರಚಿದ ಯಶಸ್‌ನ ರಹಸ್ಯ ಆಟದ ಬಗ್ಗೆ ಸುದೀಪ್ ಏನು ಹೇಳಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ: Spandana Somanna: ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ಸ್ಪಂದನಾ ಸೋಮಣ್ಣ ಜೋಡಿ

ತಮ್ಮ ನಡುವೆಯೇ ಇದ್ದುಕೊಂಡು ರಹಸ್ಯವಾಗಿ ಆಟವಾಡಿದ ವ್ಯಕ್ತಿ ಯಶಸ್ ಎಂಬುದು ತಿಳಿದಾಗ ಮನೆಯ ಸದಸ್ಯರ ಪ್ರತಿಕ್ರಿಯೆ ಹೇಗಿರಲಿದೆ? ಇಷ್ಟು ದಿನ ಅನುಮಾನಪಟ್ಟವರು ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ? ಯಶಸ್‌ನ ತಂತ್ರಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸುತ್ತಾರಾ ಅಥವಾ ಆಟದ ಬಗ್ಗೆ ಪ್ರಶ್ನಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Yashaswi Devadiga

View all posts by this author