ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಕಿರಣ್ ಶಾಸ್ತ್ರಿ ಕೀಳು ಮಟ್ಟದ ಆಟ; ವೀಕ್ಷಕರ ಆಕ್ರೋಶ

Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಪತ್ರದ ಟಾಸ್ಕ್ ವೇಳೆ ಸ್ಪರ್ಧಿ ಕಿರಣ್ ಶಾಸ್ತ್ರಿ (Kiran Shastri) ಉದ್ದೇಶಪೂರ್ವಕವಾಗಿ ಬಾಲ್ ಕೆಳಗೆ ಬೀಳಿಸಿ ಆಟ ಹಾಳು ಮಾಡಿದ್ದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಪರ್ಧಿಗಳಿಗೆ ತಮ್ಮ ಕುಟುಂಬದ ಸದಸ್ಯರಿಂದ ಬಂದಿರುವ ಪತ್ರವನ್ನು ಪಡೆಯುವ ಅವಕಾಶ ನೀಡಲಾಗಿದ್ದು, ಇದಕ್ಕಾಗಿ ಬಿಗ್ ಬಾಸ್ ಕಠಿಣ ಟಾಸ್ಕ್‌ಗಳನ್ನು (Tough Task) ನೀಡಿದ್ದಾರೆ. ಮನೆಯವರ ಪತ್ರ ಓದುವ ಕಾತರದಲ್ಲಿರುವ ಸ್ಪರ್ಧಿಗಳಿಗೆ ಈ ಬಾರಿ ಸುಲಭವಾಗಿ ಪತ್ರ ಸಿಗುವ ಸಾಧ್ಯತೆ ಇಲ್ಲ.

ಬಿಗ್‌ ಬಾಸ್‌ ಕನ್ನಡ

ಬಿಗ್ ಬಾಸ್ ಮನೆಯಲ್ಲಿ ಪತ್ರದ ಟಾಸ್ಕ್ ವೇಳೆ ಸ್ಪರ್ಧಿ ಕಿರಣ್ ಶಾಸ್ತ್ರಿ (Kiran Shastri) ಉದ್ದೇಶಪೂರ್ವಕವಾಗಿ ಬಾಲ್ ಕೆಳಗೆ ಬೀಳಿಸಿ ಆಟ ಹಾಳು ಮಾಡಿದ್ದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಪರ್ಧಿಗಳಿಗೆ ತಮ್ಮ ಕುಟುಂಬದ ಸದಸ್ಯರಿಂದ ಬಂದಿರುವ ಪತ್ರವನ್ನು ಪಡೆಯುವ ಅವಕಾಶ ನೀಡಲಾಗಿದ್ದು, ಇದಕ್ಕಾಗಿ ಬಿಗ್ ಬಾಸ್ ಕಠಿಣ ಟಾಸ್ಕ್‌ಗಳನ್ನು (Tough Task) ನೀಡಿದ್ದಾರೆ. ಮನೆಯವರ ಪತ್ರ ಓದುವ ಕಾತರದಲ್ಲಿರುವ ಸ್ಪರ್ಧಿಗಳಿಗೆ ಈ ಬಾರಿ ಸುಲಭವಾಗಿ ಪತ್ರ ಸಿಗುವ ಸಾಧ್ಯತೆ ಇಲ್ಲ. ಟಾಸ್ಕ್‌ನಲ್ಲಿ ಬೇಕಂತಲೇ ಕಿರಣ್‌ ಶಾಸ್ತ್ರಿ ಕುತಂತ್ರ ಮಾಡಿದ್ದು, ಜಗ್ಗ ಮಮ್ಮಿ ಕೈಗೆ ಪತ್ರ ಸಿಗದಂತಾಗಿದೆ. ಇದೇ ಕಾರಣಕ್ಕೆ, ಮನೆಯವರೆಲ್ಲಾ ಶಾಸ್ತ್ರಿ ವಿರುದ್ದ ತಿರುಗಿ ಬಿದ್ದಿದ್ದಾರೆ.

ಈ ವಾರ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಮಾಡುವಾಗ ಅನೇಕರು ಕಿರಣ್ ಶಾಸ್ತ್ರಿ ಹೆಸರನ್ನು ತೆಗೆದುಕೊಂಡರುಇದಕ್ಕೆ ಹಗೆ ತೀರಿಸಿಕೊಳ್ಳುವ ನಿರ್ಧಾರವನ್ನು ಮಾಡಿದ್ದಾರೆ. ಇದಕ್ಕಾಗಿ ಅವರು ಸಾಕಷ್ಟು ಕೆಳಮಟ್ಟಕ್ಕೆ ಇಳಿದರು.

ಇದನ್ನೂ ಓದಿ: Ramayana Mumbai Premiere: ‘ರಾಮಾಯಣ’ ಸಿನಿಮಾದ ವಿಶೇಷ ಪ್ರೀಮಿಯರ್ ಶೋ; ಸನ್ನಿ ಡಿಯೋಲ್ ಕಾಲು ಮುಟ್ಟಿ ನಮಸ್ಕರಿಸಿದ ರವಿ ದುಬೆ



ಒಂದು ಬಾಲ್ ಅನ್ನು ಅಡೆತಡೆಗಳ ನಡುವೆ ಸ್ಪರ್ಧಿಗಳು ಸಾಗಿಸುತ್ತಾ ಬರಬೇಕು. ಬಾಲ್ ಅಂತಿಮ ಸ್ಥಾನಕ್ಕೆ ತಲುಪಿದರೆ ಜಗದೀಶ್ ಅವರಿಗೆ ಮನೆಯ ಪತ್ರ ದೊರೆಯುತ್ತಾ ಇತ್ತು. ಕಿರಣ್ ಶಾಸ್ತ್ರಿ ಅವರು ಈ ಬಾಲ್​​ನ ಪಾಸ್ ಮಾಡಲು ರೆಡಿ ಇರಲೇ ಇಲ್ಲ. ಅವರು ಉದ್ದೇಶಪೂರ್ವಕವಾಗಿ ಬಾಲ್​​ನ ಕೆಳಕ್ಕೆ ಬೀಳಿಸುತ್ತಾ ಇದ್ದಿದ್ದು ಕಂಡುಬಂತು.

ಆರಂಭದಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಂಡರು. ಗಾನವಿ ಅವರು ಪದೇ ಪದೇ ಬಂದು ಈ ವಿಷಯ ಹೇಳಿದಾಗ ಅದು ನಿಜ ಎಂದು ಒಪ್ಪಿಕೊಂಡರು. ಇದಕ್ಕೆ ಕಿರಣ್ ಅವರಿಗೆ ಛೀಮಾರಿ ಹಾಕುತ್ತಿದ್ದಾರೆ.

ಇದನ್ನೂ ಓದಿ: Bigg Boss Kannada 13: ಪತ್ರಕ್ಕಾಗಿ ಕಠಿಣ ಪೈಪೋಟಿ; ತಾಂಡವ್, ಧನುಷ್ ನಡುವೆ ಜಿದ್ದಾಜಿದ್ದಿ!

ವೀಕ್ಷಕರು ಕಿರಣ್ ಶಾಸ್ತ್ರಿ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಕಂತಲೇ ಟಾಸ್ಕ್‌ನಲ್ಲಿ ಎಡವಿ ಪತ್ರ ಸಿಗದಂತೆ ಮಾಡಿದ್ದು ತೀರಾ ಖಂಡನೀಯ ಎಂದು ವೀಕ್ಷಕರು ಕಿರಣ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಬೇರೆಯವರ ಭಾವನೆಗಳ ಜೊತೆ ಆಟವಾಡುತ್ತಾ, ಜಗ್ಗ ಮಮ್ಮಿಗೆ ಪತ್ರ ತಲುಪದಂತೆ ತಡೆದ ಕಿರಣ್ ಆಟದ ಶೈಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

Yashaswi Devadiga

View all posts by this author