ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಕಿರಣ್ ಶಾಸ್ತ್ರಿ ಬೇಡಿಕೆಗೆ ಫಲ ಕೊಡದ ದೇವಿ! ನಕ್ಕ ಮನೆಮಂದಿ

Bigg Boss Kannada 13: ವಿಭಿನ್ನ ವ್ಯಕ್ತಿತ್ವ ಹೊಂದಿದ ಸ್ಪರ್ಧಿಗಳಲ್ಲಿ ಕಿರಣ್‌ ಶಾಸ್ತ್ರಿ ಬಹಳ ವಿಶೇಷವಾಗಿದ್ದಾರೆ ಎಂಬ ಭಾವನೆ ವೀಕ್ಷಕರಿಗೆ ಬಂದಿದೆ. ಮತ್ತೊಂದು ವಿಚಾರ ಅಂದ್ರೆ ಕಿರಣ್‌ ಶಾಸ್ತ್ರಿ ದೇವಿ ಬಳಿ ಮಾಡಿಕೊಳ್ಳುವ ಡೀಲ್‌ಗಳು. ವರ ಕೇಳುವ ರೀತಿಗೆ ನಕ್ಕಿದ್ದ ವೀಕ್ಷಕರು, ಕಳೆದ ಭಾನುವಾರ ಎಲ್ಲರೂ ತಮಾಷೆ ಮಾಡಿದ್ದರು. ಇದೀಗ ಮನೆಯಲ್ಲಿರುವ ಕಿರಣ್ ಶಾಸ್ತ್ರಿ ಅವರು ದೇವರಿಗೆ ಪೂಜೆ ಸಲ್ಲಿಸಿ, ಹೂವು ಪ್ರಸಾದಕ್ಕಾಗಿ ಪ್ರಾರ್ಥಿಸುತ್ತಿರುವ ತಮಾಷೆಯ ಸನ್ನಿವೇಶವೊಂದು ಎದುರಾಗಿದೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ಜಗಳ ಎಷ್ಟು ಕಾಮನ್‌ ಹಾಗೇ ಫನ್ನಿ ಸನ್ನಿವೇಶಗಳು ನಡೆಯುತ್ತಿರುತ್ತವೆ. ವಿಭಿನ್ನ ವ್ಯಕ್ತಿತ್ವ ಹೊಂದಿದ ಸ್ಪರ್ಧಿಗಳಲ್ಲಿ ಕಿರಣ್‌ ಶಾಸ್ತ್ರಿ ಬಹಳ ವಿಶೇಷವಾಗಿದ್ದಾರೆ ಎಂಬ ಭಾವನೆ ವೀಕ್ಷಕರಿಗೆ ಬಂದಿದೆ. ಮತ್ತೊಂದು ವಿಚಾರ ಅಂದ್ರೆ ಕಿರಣ್‌ ಶಾಸ್ತ್ರಿ (Kiran Shastri) ದೇವಿ ಬಳಿ ಮಾಡಿಕೊಳ್ಳುವ ಡೀಲ್‌ಗಳು. ವರ ಕೇಳುವ ರೀತಿಗೆ ನಕ್ಕಿದ್ದ ವೀಕ್ಷಕರು, ಕಳೆದ ಭಾನುವಾರ ಎಲ್ಲರೂ ತಮಾಷೆ ಮಾಡಿದ್ದರು. ಇದೀಗ ಮನೆಯಲ್ಲಿರುವ ಕಿರಣ್ ಶಾಸ್ತ್ರಿ ಅವರು ದೇವರಿಗೆ ಪೂಜೆ ಸಲ್ಲಿಸಿ, ಹೂವು ಪ್ರಸಾದಕ್ಕಾಗಿ ಪ್ರಾರ್ಥಿಸುತ್ತಿರುವ ತಮಾಷೆಯ ಸನ್ನಿವೇಶವೊಂದು ಎದುರಾಗಿದೆ.

ದೇವತೆಯ ವಿಗ್ರಹದ ಮುಂದೆ ನಿಂತು ಕಿರಣ್ ಶಾಸ್ತ್ರಿ ಅವರು, ‘ನಾನು ಆಡಿದ ಆಟ ಚೆನ್ನಾಗಿತ್ತು ಅನ್ನೋದಕ್ಕೂ ಒಂದು ಹೂವು ಕೊಡು. ಮುಂದೆ ನನ್ನ ರಕ್ಷಣೆ ಮಾಡ್ತೀಯಾ ಅನ್ನೋದಕ್ಕೂ ಒಂದು ಹೂವು ಕೊಡು’ ಎಂದು ಭಕ್ತಿಯಿಂದ ಕೇಳಿಕೊಂಡರು. ವಿಗ್ರಹದಿಂದ ಹೂವು ಕೆಳಗೆ ಬೀಳಲೇ ಇಲ್ಲ. ಇದರಿಂದ ಕೊನೆಗೆ ನೆಲದ ಮೇಲೆ ಮಲಗಿದ ಕಿರಣ್ ಶಾಸ್ತ್ರಿ, ‘ಮಮ್ಮಿ ಗಿವ್ ಮಿ ಒನ್ ಫ್ಲವರ್ ಪ್ಲೀಸ್.. ಇಷ್ಟೆಲ್ಲಾ ಹಾಡು ಹಾಡಿದರೂ ಒಂದು ಹೂವು ಕೊಡೋಕೆ ಕಷ್ಟನಾ?’ ಎಂದು ದೇವರೆದುರು ಬೇಡಿಕೊಂಡಿದ್ದಾರೆ.

ಇದನ್ನೂ ಓದಿ: Droupadi Murmu: ಅಪಾಯಕಾರಿ ಉತ್ಪನ್ನ ಪ್ರಚಾರ ಮಾಡಬೇಡಿ; ನಟ-ನಟಿಯರಿಗೆ ರಾಷ್ಟ್ರಪತಿ ಕರೆ

ಇದಕ್ಕೂ ಮುಂಚೆ ಮಾಡಿದ್ರು ಪವಾಡ

ಜಗದೀಶ್‌ ಅವರ ತಾಯಿಗೆ ಹುಷಾರಿಲ್ಲ. ಇದೇ ಕಾರಣಕ್ಕೆ ಜಗ್ಗಿ ಬೇಜಾರಾಗಿದ್ದರು. ಈ ಬಗ್ಗೆ ಕಿಚ್ಚ ಸುದೀಪ್ ಅವರು ಕೂಡ ಶನಿವಾರ ಮಾತ್ನಾಡಿದ್ದರು. ಕಿರಣ್‌ ಶಾಸ್ತ್ರಿ ಬಳಿ ಹೋಗಿ ಜಗ್ಗ ದುಗುಡ ತೋಡಿಕೊಂಡಿದ್ದರು. ಇದಕ್ಕೆ ಶಾಸ್ತ್ರಿ ದೇವಿ ಬಳಿ ಪ್ರಶ್ನೆ ಹಾಕೋಣ ಬಾ ಎಂದು ಕರೆದುಕೊಂಡು ಹೋಗಿ, ಹೂವೊಂದನ್ನ ತಾಯಿ ತಲೆಯ ಮೇಲೆ ಇಟ್ಟು, ಜಗದೀಶ್‌ ಅವರ ಅಮ್ಮ ಹುಷಾರಾಗಿದ್ದರೇ ಪ್ರಾಸದ ಕೊಡು ಎಂದು ಬೇಡಿಕೊಳ್ತಾರೆ.



ಇದನ್ನೂ ಓದಿ: Ramayana Movie: ‘ರಾಮಾಯಣ’ ಚಿತ್ರದ ಸಂಭಾವನೆಯನ್ನು ದಾನ ಮಾಡಿದ ಖ್ಯಾತ ನಟ!

ದೂರದಲ್ಲಿಯೇ ನಿಂತು “ಕೊಡು ಬೇ” ಎಂದು ಕೂಗುತ್ತಾರೆ. ಕ್ಷಣದಲ್ಲಿಯೇ ಹೂವು ಬೀಳುತ್ತೆ. ತಾಯಿ ಬಲ ಭಾಗದಿಂದ ಹೂವು ಕೊಟ್ಟಿದ್ದಾಳೆ, ಎಲ್ಲವೂ ಒಳ್ಳೆದಾಗುತ್ತೆ. ಹೋಗು ಅಂತ ಜಗ್ಗಿಗೆ ಹೇಳ್ತಾರೆ ಶಾಸ್ತ್ರಿ.

Yashaswi Devadiga

View all posts by this author