ʻಬಿಗ್ ಬಾಸ್ ಕನ್ನಡ ಸೀಸನ್ 13ʼರ (Bigg Boss Kannada 13) ಮಾಸ್ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಲಕ್ಷ್ಮೀ ಗೌಡ ಅವರ ʻಬಿಗ್ ಬಾಸ್ʼ ಪಯಣ ಈಗ ಅಂತ್ಯಗೊಂಡಿದೆ. ವಿವಿಧ ಮಾಧ್ಯಮಗಳಲ್ಲಿ ತಮ್ಮ ಬಿಗ್ಬಾಸ್ ಪಯಣದ ಕುರಿತು ಮಾತನಾಡುತ್ತಿದ್ದಾರೆ. ಲಕ್ಷ್ಮೀ ಗೌಡ (Lakshmi Gowda) ಅವರು ಕುಮಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮವೊಂದರಲ್ಲಿ ಬಿಗ್ಬಾಸ್ನಲ್ಲಿ ಕ್ಲೀನ್ ಇಲ್ಲದೇ ಇರುವವರು ಯಾರು ಎಂದು ಕೇಳಿದಾಗ ಕುಮಾರಿ ಹೆಸರನ್ನು ಹೇಳಿದ್ದಾರೆ. ಅವರು ಸ್ನಾನನೇ ಮಾಡಲ್ಲ. ಅವರು ಸ್ನಾನ ಮಾಡಿದ್ರು ಎಂದರೆ ಆ ದಿನ ಉಳಿದವರು ಸೆಲೆಬ್ರೇಟ್ ಮಾಡ್ತಾರೆ. ನನಗೆ ತುಂಬಾ ಅಸಹ್ಯ ಎನ್ನಿಸಿತು. ನಾನು ಬಿಗ್ಬಾಸ್ ಮನೆಯೊಳಕ್ಕೆ ಹೋದಾಗಲೂ ಅಲ್ಲಿ ಸಿಂಕ್ ಎಲ್ಲಾ ತುಂಬಾ ಗಲೀಜು ಇತ್ತು. ನೋಡಿ ಅಸಹ್ಯ ಆಗಿತ್ತು ಎಂದಿದ್ದಾರೆ.
ಎರಡೇ ವಾರಗಳಲ್ಲಿ ದೊಡ್ಮನೆಯಿಂದ ಹೊರಬಿದ್ದಿರುವ ಲಕ್ಷ್ಮೀ, ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ಅತ್ಯಂತ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
“ನನ್ನ ಬಿಗ್ ಬಾಸ್ ಪಯಣ ಇಲ್ಲಿಗೆ ಮುಗಿದಿರ್ಬಹುದು. ಆದರೆ, ನೀವು ಕೊಟ್ಟ ಪ್ರೀತಿ, ಬೆಂಬಲ ಮತ್ತು ಆಶೀರ್ವಾದಗಳು ನನ್ನ ಹೃದಯದಲ್ಲಿ ಸದಾ ಉಳಿಯುತ್ತವೆ. ಕರ್ನಾಟಕದ ಜನತೆ ನನ್ನ ಮೇಲೆ ಇಟ್ಟ ನಂಬಿಕೆ, ನನ್ನನ್ನ ಪ್ರೀತಿಯಿಂದ ಬೆಂಬಲಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿ ನನಗೆ ಯಾವಾಗಲೂ ದೊಡ್ಡ ಶಕ್ತಿ.
ಇದನ್ನೂ ಓದಿ: King Poster: ‘ಕಿಂಗ್’ ಚಿತ್ರದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡ ಶಾರುಖ್ ಖಾನ್!
ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದೇನೆ. ಆದರೆ, ನಿಮ್ಮ ಮನಸ್ಸಿನಲ್ಲಿ ನಾನು ಸದಾ ಇರಬೇಕೆಂಬುದೇ ನನ್ನ ಆಸೆ. ನನ್ನನ್ನ ಪ್ರೀತಿಸಿದ, ನನಗಾಗಿ ಮತ ಹಾಕಿದ ಮತ್ತು ಕೊನೆಯವರೆಗೂ ನನ್ನ ಜೊತೆ ನಿಂತ ಪ್ರತಿಯೊಬ್ಬರಿಗೂ ಕೋಟಿ ಕೋಟಿ ಧನ್ಯವಾದಗಳು. ನಿಮ್ಮ ಪ್ರೀತಿ ನನ್ನ ಗೆಲುವು, ನಿಮ್ಮ ಬೆಂಬಲ ನನ್ನ ಶಕ್ತಿ” ಎಂದು ಲಕ್ಷ್ಮೀ ಗೌಡ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.