ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss 13: ಬೆಂಕಿ ಹಚ್ಚಿದ ‘ಡೋಲು ಬೋಲು’ ಮಾತು! ʻಎಲ್ಲಿಂದ ಬರ್ತಾರೋ ಚೈಲ್ಡ್‌ ಚಪಾತಿಗಳು..ʼ ಎಂದು ಗುಡುಗಿದ ಗಗನ್‌ ಚಿನ್ನಪ್ಪ!

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಜಟಾಪಟಿ ಆರಂಭದಲ್ಲೇ ತಾರಕಕ್ಕೇರಿದೆ. ಧನುಷ್ ಮಂಜುನಾಥ್ ಆಡಿದ ‘ಡೋಲು ಬೋಲು’ ಎಂಬ ಗೇಲಿ ಮಾತಿಗೆ ಸಿಡಿದೆದ್ದ ಗಗನ್ ಚಿನ್ನಪ್ಪ, ‘ಎಲ್ಲಿಂದ ಬರ್ತಾರೋ ಈ ಚೈಲ್ಡ್ ಚಪಾತಿಗಳು’ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

‘ಬಿಗ್ ಬಾಸ್ ಕನ್ನಡ 13’ ಮನೆಯೊಳಗೆ ಸ್ಪರ್ಧಿಗಳ ನಡುವಿನ ಜಟಾಪಟಿ ತಾರಕಕ್ಕೇರಿದೆ. ಆರಂಭದ ದಿನ ವಿಮಾನದ ಕಾನ್ಸೆಪ್ಟ್‌ನಲ್ಲೇ ಗಗನ್ ಚಿನ್ನಪ್ಪ ಹಾಗೂ ಧನುಷ್ ಮಂಜುನಾಥ್ ನಡುವೆ ಮನಸ್ತಾಪ ಶುರುವಾಗಿತ್ತು. ಮೊದಲ ವಾರವೇ ಧನುಷ್ ಮುಖ್ಯ ಮನೆಗೆ ಪ್ರವೇಶಿಸದಂತೆ ವಿಮಾನದಲ್ಲೇ ಉಳಿಯುವಂತೆ ಗಗನ್ ಬ್ಲಾಕ್ ಮಾಡಿದ್ದರು. ಅಂದಿನಿಂದ ಹೊಗೆಯಾಡುತ್ತಿದ್ದ ಈ ಅಸಮಾಧಾನ ಇದೀಗ ಮತ್ತೊಂದು ಹಂತ ತಲುಪಿದ್ದು, ‘ಡೋಲು ಬೋಲು’ ಎಂಬ ಕ್ಷುಲ್ಲಕ ಮಾತಿನಿಂದಾಗಿ ಇಬ್ಬರ ನಡುವೆ ಜೋರು ವಾಗ್ವಾದವೇ ನಡೆದಿದೆ.

ಗೇಲಿ ಮಾಡಿದ ಧನುಷ್

ಮನೆಯೊಳಗೆ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ಸದಾ ಒಟ್ಟೊಟ್ಟಿಗೇ ಓಡಾಡಿಕೊಂಡಿದ್ದು, ಜೊತೆಯಲ್ಲೇ ಊಟ, ಹರಟೆ ಹೊಡೆಯುತ್ತಾ ಆತ್ಮೀಯವಾಗಿದ್ದಾರೆ. ವಾರಾಂತ್ಯದ ಪಂಚಾಯಿತಿಯಲ್ಲಿ ಖುದ್ದು ನಿರೂಪಕ ಕಿಚ್ಚ ಸುದೀಪ್ ಇವರಿಬ್ಬರನ್ನು ತಮಾಷೆಯಾಗಿ ‘ಲವ್ ಜೋಡಿ’ ಎಂದೇ ಕರೆದಿದ್ದರು. ಆದರೆ ಮನೆಯೊಳಗೆ ಇವರಿಬ್ಬರ ಓಡಾಟವನ್ನು ಗಮನಿಸಿದ ಕಿರಣ್ ಶಾಸ್ತ್ರಿ, "ಏನಣ್ಣ.. ಡೋಲು ಬೋಲು.. ಮೇಲೆ ಹೋಗ್ತೀರಿ, ಕೆಳಗೆ ಬರ್ತೀರಿ" ಎಂದು ಕಾಲೆಳೆದಿದ್ದರು. ಕಿರಣ್ ಆಡಿದ ಈ ಮಾತನ್ನು ಧನುಷ್ ಮಂಜುನಾಥ್ ಸಹ ಪುನರಾವರ್ತಿಸಿ ಗೇಲಿ ಮಾಡಿದ್ದು ಗಗನ್ ಚಿನ್ನಪ್ಪ ಅವರ ಆಕ್ರೋಶಕ್ಕೆ ಕಾರಣವಾಯಿತು.

BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಯೊಳಗೆ ಎಂಟ್ರಿ ಕೊಡೋದು ಯಾರು? 'ಬಿಗ್‌ ಬಾಸ್‌ ಕನ್ನಡ‌' ಟೀಮ್‌ನಿಂದ ಬಿಗ್‌ ಅಪ್ಡೇಟ್‌!

ಎಲ್ಲಿಂದ ಬರ್ತಾರೋ ಈ ಚೈಲ್ಡ್‌ ಚಪಾತಿಗಳು

ಧನುಷ್ ಮಾತಿಗೆ ಸಿಡಿದೆದ್ದ ಗಗನ್, "ನಿನ್ನ ಹಾಗೆ ಮರ್ಯಾದೆ ಇಲ್ಲದೆ ಮಾತನಾಡಿದರೆ ನಮಗೂ ಬೆಲೆ ಇರಲ್ಲ. ನಮ್ಮ ಹತ್ತಿರ ಸರಿಯಾಗಿ ಹೆಸರಿಡಿದು ಕರೆಯುವುದಾದರೆ ಕರಿ, ಇಲ್ಲದಿದ್ದರೆ ಮಾತೇ ಆಡಬೇಡ. 'ಡೋಲು ಬೋಲು' ಅಂತ ಕರೆಯೋದನ್ನು ನಿಲ್ಲಿಸು. ನನ್ನನ್ನು ಟ್ರಿಗರ್ ಮಾಡಬೇಡ, ನಾನು ರೊಚ್ಚಿಗೆದ್ದರೆ ಸೈಕ್ ಆಗಿಬಿಡ್ತೀನಿ. ಎಲ್ಲಿಂದ ಬರ್ತಾರೋ ಈ ಚೈಲ್ಡ್‌ ಚಪಾತಿಗಳು! ನಾವು ಮರ್ಯಾದೆ ಕೊಟ್ಟು ಮರ್ಯಾದೆ ತೆಗೆದುಕೊಳ್ಳುವವರು" ಎಂದು ಏಕವಚನದಲ್ಲೇ ಕ್ಲಾಸ್ ತೆಗೆದುಕೊಂಡರು.

ಕ್ಯಾರೆಕ್ಟರ್ ಬಿಲ್ಡ್ ಮಾಡ್ಕೋ

ಇದಕ್ಕೆ ಸಮಜಾಯಿಷಿ ನೀಡಲು ಮುಂದಾದ ಧನುಷ್, "ನೀವಿಬ್ಬರೂ ಸದಾ ಒಟ್ಟಿಗೆ ಇರ್ತೀರಲ್ಲ ಅಂತ ಪ್ರೀತಿಯಿಂದಲೇ 'ಡೋಲು ಬೋಲು' ಅಂತ ಅಂದಿದ್ದು. ನಾನು ಯಾವಾಗಲೂ ಬ್ರೋ ಅಂತ ಪ್ರೀತಿಯಿಂದಲೇ ಮಾತನಾಡಿಸುತ್ತೇನೆ, ಇದನ್ನು ನೀವು ಸ್ಪೋರ್ಟಿವ್ ಆಗಿ ಏಕೆ ತೆಗೆದುಕೊಳ್ಳಬಾರದು? ಸಲುಗೆಯಿಂದ ಹೇಳಿದ್ದಷ್ಟೇ" ಎಂದು ವಾದಿಸಿದರು. ಆದರೆ ಮಧ್ಯಪ್ರವೇಶಿಸಿದ ತಾಂಡವ್ ರಾಮ್, "ಇದು ಪಬ್ಲಿಕ್ ಪ್ಲಾಟ್‌ಫಾರ್ಮ್, ಇಲ್ಲಿ ಜನ ನಮ್ಮ ಕ್ಯಾರೆಕ್ಟರ್ ನೋಡ್ತಿರ್ತಾರೆ. ಆ ರೀತಿ ಆಡಬೇಡ, ನಿನಗೆ ಆ ರೀತಿ ಮಾತನಾಡಲು ನಾವು ಸಲುಗೆಯೇ ಕೊಟ್ಟಿಲ್ಲ, ಕ್ಯಾರೆಕ್ಟರ್ ಬಿಲ್ಡ್ ಮಾಡ್ಕೋ" ಎಂದು ಖಡಕ್ ಎಚ್ಚರಿಕೆ ರವಾನಿಸಿದರು. ಮೊದಲ ವಾರದಲ್ಲೇ ಸಣ್ಣ ಮಾತಿಗೆ ಇಷ್ಟೊಂದು ಹೈಡ್ರಾಮಾ ಸೃಷ್ಟಿಯಾಗಿರುವುದು ವೀಕ್ಷಕರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.