ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಬಿಗ್‌ ಬಾಸ್’ ಸ್ಪರ್ಧಿಗಳಿಗೆ ʻಕಿಚ್ಚʼ ಸುದೀಪ್ ಖಡಕ್ ವಾರ್ನಿಂಗ್; ದೊಡ್ಮನೆಯಲ್ಲಿ ಮುಂದೈತೆ ಮಾರಿಹಬ್ಬ!

Bigg Boss Kannada 13: ʻಬಿಗ್‌ ಬಾಸ್‌ʼ ವೇದಿಕೆಯಲ್ಲಿ ʻಕಿಚ್ಚʼ ಸುದೀಪ್ ಅವರು ಸ್ಪರ್ಧಿಗಳ ಬೇಜವಾಬ್ದಾರಿ ವರ್ತನೆಗೆ ಕೆಂಡಾಮಂಡಲವಾಗಿದ್ದಾರೆ. ಆಟದ ನಿಯಮ ಗಾಳಿಗೆ ತೂರಿ ಅಗೌರವ ತೋರಿದವರಿಗೆ ಗೇಟ್ ಪಾಸ್ ತೋರಿಸುವ ಎಚ್ಚರಿಕೆ ರವಾನಿಸಿದ್ದಾರೆ. ನನ್ನ ನಿಜವಾದ ಸಿಟ್ಟನ್ನು ನೀವಿನ್ನೂ ನೋಡಿಲ್ಲವೆಂದು ಕಿಚ್ಚ ಮಾರ್ಮಿಕವಾಗಿ ನುಡಿದಿರುವುದು ಅಚ್ಚರಿ ತಂದಿದೆ.

‘ಬಿಗ್ ಬಾಸ್ ಕನ್ನಡ’ ಸೀಸನ್ 13 ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ದಿನೇದಿನೆ ರಂಗೇರುತ್ತಿದೆ. ವಾರದ ಕಥೆ ಕಿಚ್ಚನ ಜೊತೆ ಪಂಚಾಯಿತಿಯಲ್ಲಿ ಪ್ರತಿ ವಾರಾಂತ್ಯ ಬಂದು ಸ್ಪರ್ಧಿಗಳ ತಪ್ಪು-ಒಪ್ಪುಗಳನ್ನು ತಿದ್ದಿ ಬುದ್ಧಿ ಹೇಳುತ್ತಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಈ ಬಾರಿಯ ವೀಕೆಂಡ್ ಸಂಚಿಕೆಗಳಲ್ಲಿ ಸ್ಪರ್ಧಿಗಳ ವರ್ತನೆಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ದೊಡ್ಮನೆಯೊಳಗೆ ದೊಡ್ಡ ಮಟ್ಟದ ‘ಮಾರಿಹಬ್ಬ’ ನಡೆಯುವ ಸ್ಪಷ್ಟ ಮುನ್ಸೂಚನೆಯನ್ನು ನೀಡಿದ್ದಾರೆ.

ನಿನ್ನೆ ಸಖತ್ ಗುಮ್ಮಿದಿರಿ ಸರ್

ಶನಿವಾರದ ಸಂಚಿಕೆಯಲ್ಲಿ ಸ್ಪರ್ಧಿಗಳ ಹೊಣೆಗೇಡಿತನದ ವರ್ತನೆ ಹಾಗೂ ದಿನಸಿ ರಾದ್ಧಾಂತದ ವಿಚಾರವಾಗಿ ಕಿಚ್ಚ ಸಿಕ್ಕಾಪಟ್ಟೆ ಗರಂ ಆಗಿದ್ದರು. ಆಟದ ನಿಯಮ ಪಾಲಿಸದೆ, ಬೇಕಾಬಿಟ್ಟಿ ನಡೆದುಕೊಳ್ಳುತ್ತಿದ್ದ ಕೆಲವರಿಗೆ "ಇಷ್ಟವಿಲ್ಲದಿದ್ದರೆ ಮನೆಯಿಂದ ಆಚೆ ಹೋಗ್ತಾನೇ ಇರಿ" ಎಂದು ಎರಡೆರಡು ಬಾರಿ ನೇರವಾಗಿ ಗೇಟ್ ಪಾಸ್ ತೋರಿಸಿ ಕಠಿಣ ಎಚ್ಚರಿಕೆ ರವಾನಿಸಿದ್ದರು. ಆದರೆ, ಭಾನುವಾರದ ಎಪಿಸೋಡ್ ಅನ್ನು ಎಂದಿನಂತೆ ನಗುನಗುತ್ತಲೇ ಆರಂಭಿಸಿದ ಸುದೀಪ್ ಅವರಿಗೆ ಸ್ಪರ್ಧಿ ಪ್ರಶಾಂತ್, "ನಿನ್ನೆ ಸಖತ್ ಗುಮ್ಮಿದಿರಿ ಸರ್" ಎಂದಾಗ, ಸುದೀಪ್ ನೀಡಿದ ಉತ್ತರ ಈಗ ಇಡೀ ದೊಡ್ಮನೆಯ ನಿದ್ದೆಗೆಡಿಸಿದೆ.

ನನ್ನ ಸಿಟ್ಟನ್ನು ನೀವಿನ್ನೂ ನೋಡಿಲ್ಲ

"ಪ್ರಶಾಂತ್‌, ನಾನು ಸಿಟ್ಟಿನಿಂದ ಮಾತನಾಡಿಲ್ಲ, ಬಹಳ ಶಾಂತವಾಗಿಯೇ ಹೇಳಿದ್ದೇನೆ. ನಾನು ನಿಜವಾಗಿಯೂ ಸಿಟ್ಟಾದರೆ ಹೇಗಿರುತ್ತೇನೆ ಎಂದು ನೀವಿನ್ನೂ ನೋಡಿಲ್ಲ. ನಿನ್ನೆಯದ್ದು ಏನೂ ಅಲ್ಲ. ಆದರೆ ಈ ಸೀಸನ್‌ನಲ್ಲಿ ಒಮ್ಮೆಯಾದರೂ ನಾನು ಸಿಟ್ಟಿನಿಂದ ಮುಗಿಬೀಳುವ ಸಾಧ್ಯತೆ ಇದೆ ಎಂದು ನನಗೆ ಅನಿಸುತ್ತಿದೆ" ಎಂದು ಕಿಚ್ಚ ಮಾರ್ಮಿಕವಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಆ ಮೂಲಕ ಮುಂಬರುವ ದಿನಗಳಲ್ಲಿ ಸ್ಪರ್ಧಿಗಳ ಮಿತಿಮೀರಿದ ವರ್ತನೆಗೆ ತಮ್ಮಿಂದ ರೌದ್ರಾವತಾರ ಗ್ಯಾರಂಟಿ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಮಂಜನ ವರ್ತನೆಗೆ ವೀಕ್ಷಕರ ಬೇಸರ

ಕಿಚ್ಚ ಸುದೀಪ್ ಇಷ್ಟರಮಟ್ಟಿಗೆ ಅಸಮಾಧಾನಗೊಳ್ಳಲು ಪ್ರಮುಖ ಕಾರಣ ಈ ಬಾರಿಯ ಕೆಲ ಸ್ಪರ್ಧಿಗಳ ಅತಿರೇಕದ ವರ್ತನೆ. ಆಟವಾಡುವುದನ್ನು ಬಿಟ್ಟು ಸಹಸ್ಪರ್ಧಿಗಳ ಮೇಲಷ್ಟೇ ಅಲ್ಲದೆ, ಖುದ್ದು ಶೋ ನಿರೂಪಕರ ಮೇಲೆಯೇ ನಾಲಗೆ ಹರಿಬಿಡುವ ಸಾಹಸಕ್ಕೆ ಕೆಲವರು ಕೈಹಾಕುತ್ತಿದ್ದಾರೆ. ಮುಖ್ಯವಾಗಿ ಗಾನವಿ ಅವರು ಸುದೀಪ್ ಗಂಭೀರವಾಗಿ ಪ್ರಶ್ನಿಸುತ್ತಿದ್ದಾಗ ನಡುವೆ ಬಾಯಿ ಹಾಕಿ ವಿತಂಡವಾದ ಮಂಡಿಸಿದ್ದಲ್ಲದೆ, ಅವರು ಮಾತನಾಡುತ್ತಿದ್ದಾಗಲೇ ಮುಖ ತಿರುಗಿಸಿ ಬೇರೆಡೆ ನೋಡುತ್ತಾ ಅಗೌರವ ತೋರಿದ್ದು ಕಿಚ್ಚನ ಬೇಸರಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಮಂಜ ಕೂಡ ಪ್ರತಿಯೊಂದನ್ನೂ ಹಗುರವಾಗಿ ತೆಗೆದುಕೊಂಡು ಅತಿಯಾಗಿ ವರ್ತಿಸುತ್ತಿರುವುದು ವೀಕ್ಷಕರ ಕೆಂಗಣ್ಣಿಗೂ ಗುರಿಯಾಗಿದೆ.

BBK 13: ‘ಅಲ್ಲಿ ಶಾಂತಿ ಹಾಳು ಮಾಡೋರು, ಜಗಳ ಆಡೋರೇ ಬೇಕು’: ʻಬಿಗ್ ಬಾಸ್ʼ ಎಲಿಮಿನೇಷನ್ ಬಗ್ಗೆ ನಟ ಅವಿನಾಶ್ ಷಟಮರ್ಷಣ ನೇರ ಮಾತು!

ಕಿಚ್ಚನ ಕೆಂಗಣ್ಣಿಗೆ ಗುರಿಯಾಗೋದು ಯಾರು?

ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಅವರು ತಾಳ್ಮೆ ಕಳೆದುಕೊಳ್ಳುವುದು ತೀರಾ ವಿರಳ. ಅಂಥದ್ದರಲ್ಲಿ ಅವರೇ ಖುದ್ದಾಗಿ ‘ಮುಂದೆ ಕಾದಿದೆ’ ಎಂದು ಮುನ್ಸೂಚನೆ ನೀಡಿರುವುದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸುದೀಪ್ ಅವರ ಆ ಮೂರನೇ ಕಣ್ಣು ತೆರೆಯುವಂತೆ ಮಾಡುವ ಆ ಸ್ಪರ್ಧಿ ಯಾರು? ಗಾನವಿನಾ ಅಥವಾ ಮಂಜನಾ? ಕಿಚ್ಚನ ಆ ಕೋಪಾಗ್ನಿಗೆ ದೊಡ್ಮನೆ ಹೇಗೆ ನಲುಗಲಿದೆ ಎಂಬುದನ್ನು ಕಾದುನೋಡಬೇಕಿದೆ.