'ಬಿಗ್ ಬಾಸ್' (Bigg Bosss Kannada 13) ಮನೆಗೆ ಇನ್ನೊಂದು ಕಡೆ ಎಲಿಮಿನೇಷನ್ ಯಾರು ಆಗ್ತಾರೆ ಅನ್ನೋದು ವೀಕ್ಷಕರಿಗೆ ಕುತೂಹಲವಿದೆ. ಆದರೆ ಇಲ್ಲೊಂದು ಟ್ವಿಸ್ಟ್ ಕೊಟ್ಟಿದ್ದಾರೆ ಬಿಗ್ ಬಾಸ್. ಮುಂದಿನ ದಿನಗಳಲ್ಲಿ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆಯಿದೆ. ಇದಲ್ಲದೆ 'ದೊಡನೆ'ಗ ಒಬ್ಬ ವಿಶೇಷ ವ್ಯಕ್ತಿ ಬಂದಿದ್ದಾರೆ. ಅದುವೇ ಮಾಡರ್ನ್ ಮಹಾಕವಿ ಮಂಜ ಎಂಟ್ರಿ ಕೊಟ್ಟಿದ್ದಾರೆ.
'ಅಗ್ನಿ ಪರೀಕ್ಷೆ'ಯಿಂದ ಆಯ್ಕೆ ಆಗಿ 'ಬಿಗ್ ಬಾಸ್' ಮನಗೆ ಬಂದಿದ್ದ ಮಂಜ, ಮನೆಯಲ್ಲಿ ಸಖತ್ ಸೌಂಡ್ ಮಾಡಿದ್ದರು. ತನ್ನ ಆಟ - ಮಾತಿನಿಂದ ವೀಕ್ಷಕರ ಮನಗೆದ್ದಿದ್ದರು. ಅವರಿಗೆ ಮಾತೇ ಮುಳುವಾಗಿತ್ತು. ಸ್ಪರ್ಧಿಗಳನ್ನು ಟೀಕಿಸುವ ಭರದಲ್ಲಿ ಅವರ ಬಗ್ಗೆ ವೈಯಕ್ತಿಕವಾಗಿ ನಿಂದನೀಯ ಮಾತುಗಳನ್ನಾಡಿದ್ದರು. ಹೀಗಾಗಿ ಅವರನ್ನು ಮನೆಯಿಂದ ಆಚೆ ಕರೆಸಲಾಗಿತ್ತು. ಆದರೀಗ ಮಂಜ ಮತ್ತೆ ಬಿಗ್ ಬಾಸ್'ಗೆ ಬಂದಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೆಲ ದಿನಗಳ ಕಾಲ ಅತಿಥಿಯಾಗಿ 'ಬಿಗ್ ಬಾಸ್' ಮನೆಗೆ ಮಂಜ ಬಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Bigg Boss Kannada 13: ಪತ್ರ ಪಡೆಯುವ ವೇಳೆ ಗಾನವಿ ಹೈಡ್ರಾಮ; ಮೊಸಳೆ ಕಣ್ಣೀರಿನ ಕಥೆ ಬಿಚ್ಚಿಟ್ಟ ಕಿಚ್ಚ