ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಕಾಮನ್‌ಮ್ಯಾನ್ ವಿಭಾಗದಿಂದ ಎಂಟ್ರಿ ಕೊಟ್ಟಿದ್ದ ಮಹಾಕವಿ ಮಂಜು, ಐದನೇ ವಾರಕ್ಕೆ ರೆಡ್ ಕಾರ್ಡ್ ಪಡೆದು ಎಲಿಮಿನೇಟ್ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಅಕ್ಟೋಬರ್ 11ರಂದು ಅವರ ಹುಟ್ಟುಹಬ್ಬವಿತ್ತು. ಅದೇ ದಿನವೇ ಅವರು ಬಿಗ್ ಬಾಸ್‌ನಿಂದ ಹೊರಬಂದಿದ್ದರು. ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಅವರನ್ನು ವೇದಿಕೆಯ ಮೇಲೆ ಭೇಟಿ ಮಾಡಿ ಕಣ್ಣೀರಿಟ್ಟಿದ್ದರು. "ಇನ್ಮೇಲೆ ಕೆಟ್ಟ ಮಾತುಗಳನ್ನು ಆಡುವುದಿಲ್ಲ" ಎಂದು ಸುದೀಪ್ ಎದುರೇ ಹೇಳಿದ್ದರು. ಆದರೆ ಇದೀಗ ವಿಡಿಯೊವೊಂದು ವೈರಲ್ ಆಗಿದ್ದು, ಮಂಜನ ನಡವಳಿಕೆ ಕಂಡು ವೀಕ್ಷಕರಿಗೆ ಬೇಸರವಾಗಿದೆ.
'ಎಫ್ ವರ್ಡ್' ಬಳಕೆ
ಬಿಗ್ ಬಾಸ್‌ನಿಂದ ಹೊರಬರುತ್ತಿದ್ದಂತೆ ಮಾಜಿ ಸ್ಪರ್ಧಿ ಲಿಖಿತ್ ಅವರು ಮಂಜನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ಬೈಕ್ ಮೇಲೆ ಚಿಕ್ಕ ಕೇಕ್ ಇಟ್ಟು ಮಂಜನಿಗೆ ಕತ್ತರಿಸುವಂತೆ ಹೇಳಿದ್ದಾರೆ. ಇದನ್ನು ಕಂಡು ಖುಷಿಯಾದ ಮಂಜು, ಇಂಗ್ಲಿಷ್‌ನಲ್ಲಿ ಲಿಖಿತ್‌ನನ್ನು ಹೊಗಳಿದ್ದಾರೆ. ಈ ಮಾತಿನ ಭರದಲ್ಲಿ 'ಎಫ್ ವರ್ಡ್' ಅನ್ನು ಮಂಜು ಬಳಕೆ ಮಾಡಿದ್ದಾರೆ. ಇದೇ ವಿಡಿಯೋವನ್ನು ಲಿಖಿತ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನಂದ ಕಿಶೋರ್ ಹೇಳಿದ ಕಿವಿಮಾತೇನು?
ಬಿಗ್ ಬಾಸ್ ಮನೆಯಿಂದ ಹೊರಬಂದು ಕೆಲವೇ ಗಂಟೆಗಳಾಗಿವೆ, ಆಗಲೇ ಮತ್ತೆ ನಾಲಿಗೆ ಹರಿಬಿಟ್ಟರಾ ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ಸ್ಯಾಂಡಲ್‌ವುಡ್‌ನ 'ರನ್ನ', 'ಅಧ್ಯಕ್ಷ', 'ಮುಕುಂದ ಮುರಾರಿ' ಸಿನಿಮಾಗಳ ಖ್ಯಾತಿಯ ನಿರ್ದೇಶಕರಾದ ನಂದ ಕಿಶೋರ್ ಅವರು, "ನಿಮ್ಮ ಮಾತಿನ ಮೇಲೆ ಇನ್ನೂ ನಿಮಗೆ ನಿಯಂತ್ರಣವಿಲ್ಲ, ಮಾತನಾಡುವ ಮುನ್ನ ದಯವಿಟ್ಟು ಯೋಚಿಸಿ. ನಿಮ್ಮಲ್ಲಿ ಉತ್ತಮ ಪ್ರತಿಭೆಯಿದೆ, ಅದನ್ನು ಸರಿಯಾಗಿ ಬಳಸಿ; ಅದನ್ನು ಮತ್ತೆ ಕಳೆದುಕೊಳ್ಳಬೇಡಿ" ಎಂದು ಕಿವಿಮಾತು ಹೇಳಿದ್ದಾರೆ.
ಲಿಖಿತ್ ಹಂಚಿಕೊಂಡ ವಿಡಿಯೋ
ಮಂಜನಲ್ಲಿ ಒಳ್ಳೆಯ ಗುಣ ಕಂಡೆ
ಇನ್ನು ಆ ವಿಡಿಯೊದಲ್ಲಿ ಲಿಖಿತ್, "ಮಂಜ ಇಷ್ಟು ಬೇಗ ಹೊರಗೆ ಬರುತ್ತಾನೆ ಅಂತ ಅಂದುಕೊಂಡಿರಲಿಲ್ಲ. ಹುಟ್ಟುಹಬ್ಬದ ದಿನವೇ ಮಂಜ ಹೊರಬಂದಿದ್ದಾನೆ. ಎಲ್ಲರಲ್ಲೂ ಒಳ್ಳೆಯದು, ಕೆಟ್ಟದ್ದು ಇದ್ದೇ ಇರುತ್ತದೆ. ಆದರೆ ನಾನು ಇವನಲ್ಲಿ ಒಳ್ಳೆಯ ಗುಣವನ್ನು ನೋಡಿದ್ದೇನೆ" ಎಂದು ಹೇಳಿದ್ದಾರೆ.
ಮಂಜನ ಬಗ್ಗೆ ಟ್ವೀಟ್
ರೆಡ್ ಕಾರ್ಡ್ ಪಡೆದು ಹೊರಬಂದ ಮಂಜ
ಕಳೆದ ವಾರ ಬಿಗ್ ಬಾಸ್ ಮನೆಯಿಂದ ಲಿಖಿತ್ ಎಲಿಮಿನೇಟ್ ಆಗಿ ಹೊರಬಂದಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದಾಗ ಲಿಖಿತ್ ಹಾಗೂ ಮಂಜ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ಈಗ ಬಿಗ್ ಬಾಸ್‌ನಿಂದ ಹೊರಬಂದ ಮೇಲೆಯೂ ತಮ್ಮ ಬಾಂಧವ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅಂದಹಾಗೆ, ಇವರಿಬ್ಬರೂ ಬಿಗ್ ಬಾಸ್ ಮನೆಗೆ ಅಗ್ನಿಪರೀಕ್ಷೆಯ ಮೂಲಕ ಪ್ರವೇಶ ಪಡೆದಿದ್ದರು.