ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada 13) ಮನೆಯಲ್ಲಿ ಮತ್ತೊಂದು ಅನಿರೀಕ್ಷಿತ ತಿರುವು ಪ್ರೇಕ್ಷಕರನ್ನು ಅಚ್ಚರಿಗೊಳಿಸಿದೆ. ಕಿಚ್ಚ ಸುದೀಪ್ ಅವರು ಎಲ್ಲಾ ಮನೆಯ ಸದಸ್ಯರನ್ನು ನಾಮಿನೇಟ್ ಮಾಡುವ ಮೂಲಕ ಮಿಡ್ ವೀಕ್ (Mid week elimination) ಎಲಿಮಿನೇಷನ್ ನಡೆಯಲಿದೆ ಎಂಬ ಸುಳಿವು ನೀಡಿದ್ದರು. ಹೀಗಾಗಿ ಮನೆಯಿಂದ ಒಬ್ಬರು ಹೊರಹೋಗುವುದು ಖಚಿತ ಎಂಬುದು ವೀಕ್ಷಕರಿಗೆ ತಿಳಿದಿತ್ತು. ಆದರೆ, ಯಾರು ಎಲಿಮಿನೇಟ್ (Eliminate) ಆಗುತ್ತಾರೆ ಎಂಬುದೇ ಎಲ್ಲರಿಗೂ ದೊಡ್ಡ ಪ್ರಶ್ನೆಯಾಗಿತ್ತು.
ಅಚ್ಚರಿಯ ಬೆಳವಣಿಗೆ
ಎಲಿಮಿನೇಷನ್ ಇರಲಿದೆ ಎಂದು ಪ್ರೇಕ್ಷಕರು ನಿರೀಕ್ಷಿಸಿದ್ದರೂ, ಜನರ ಮನ ಗೆದ್ದಿದ್ದ, ಬಿಗ್ ಬಾಸ್ ಮನೆಯೊಳಗೆ ತನ್ನದೇ ಆದ ಛಾಪು ಮೂಡಿಸಿದ್ದ ಮತ್ತು ವಿನ್ನರ್ ರೇಸ್‌ನಲ್ಲಿದ್ದಾರೆ ಎಂದು ವೀಕ್ಷಕರು ಭಾವಿಸಿದ್ದ ಸ್ಪರ್ಧಿಯೇ ಎಮರ್ಜೆನ್ಸಿ ಎಕ್ಸಿಟ್ ಪಡೆಯುವುದು ಅಚ್ಚರಿಯ ಬೆಳವಣಿಗೆಯಾಗಿದೆ.
ಇದುವರೆಗೆ ಮನೆಯೊಳಗಿನ ಆಟ, ವ್ಯಕ್ತಿತ್ವ ಹಾಗೂ ವಿವಿಧ ಸಂದರ್ಭಗಳಲ್ಲಿ ಸ್ಪರ್ಧಿಯ ನಡೆ-ನುಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಈ ಎಕ್ಸಿಟ್ ಕೇವಲ ಮನೆಯ ಸದಸ್ಯರಿಗೆ ಮಾತ್ರವಲ್ಲದೆ,ತಮ್ಮ ನೆಚ್ಚಿನ ಸ್ಪರ್ಧಿಯನ್ನು ವಿನ್ನರ್ ಆಗಿ ನೋಡಲು ಬಯಸಿದ್ದ ವೀಕ್ಷಕರಿಗೂ ಶಾಕ್ ನೀಡಲಿದೆ.
ಇದನ್ನೂ ಓದಿ: Rishab Shetty: TVಯಲ್ಲಿ ನಿಮ್ಮನ್ನು ನೋಡಿಕೊಂಡು ಬೆಳೆದೆ; ಅನಂತ್ ನಾಗ್ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?
ಕಿಚ್ಚ ಸುದೀಪ್ ಅವರ ಘೋಷಣೆಯ ನಂತರ ಮನೆಯಲ್ಲಿ ಎಲಿಮಿನೇಷನ್ ಕುರಿತ ಕುತೂಹಲ ಹೆಚ್ಚಾಗಿದ್ದರೂ, ಅಂತಿಮವಾಗಿ ಹೊರಬರುವ ಸ್ಪರ್ಧಿ ಯಾರು ಎಂಬುದನ್ನು ಕೊನೆಯ ಕ್ಷಣದವರೆಗೂ ಊಹಿಸಲು ಸಾಧ್ಯವಾಗದಂತೆ ಪರಿಸ್ಥಿತಿ ಬದಲಾಗಿದೆ.
ಎಲಿಮಿನೇಷನ್ ಇದೆ ಅನ್ನೋದು ಗೊತ್ತಿತ್ತು… ಆದರೆ ಇವರೇ ಹೊರಹೋಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ!” ಎಂಬ ಮಾತು ಈಗ ದೊಡ್ಮನೆಯಿಂದ ಹೊರಗೆ ಪ್ರೇಕ್ಷಕರ ನಡುವೆಯೂ ಚರ್ಚೆಯಾಗುತ್ತಿದೆ.
ಈ ಅನಿರೀಕ್ಷಿತ ಎಮರ್ಜೆನ್ಸಿ ಎಕ್ಸಿಟ್‌ನಿಂದಾಗಿ ಬಿಗ್ ಬಾಸ್ ಕನ್ನಡ ಸೀಸನ್ 13ರ ಆಟ ಮತ್ತಷ್ಟು ರೋಚಕ ಹಂತಕ್ಕೆ ತಲುಪಿದ್ದು, ಇನ್ನು ಮುಂದೆ ಮನೆಯೊಳಗಿನ ಸಮೀಕರಣಗಳು ಹೇಗೆ ಬದಲಾಗಲಿವೆ? ಎಂಬ ಕುತೂಹಲ ಮೂಡಿದೆ.
ಲಿಖಿತ್ ಇದ್ದವರು ಇಲ್ಲಿ ನಾನು ನಿಲ್ಲೋಕೆ ನೀವೇ ಕಾರಣ ಎಂದರು. ತುಂಬಾ ನೋವಾಗ್ತಿದೆ ಎಂದು ಜಗ್ಗ ಕೂಡ ಬಿಕ್ಕಿ ಬಿಕ್ಕಿ ಅತ್ತರು.
ಇದನ್ನೂ ಓದಿ: Bigg Boss kannada 13: ದೊಡ್ಮನೆಯಲ್ಲಿ ದಿಢೀರ್ ಮೂವರಿಗೆ ಎಮರ್ಜೆನ್ಸಿ ಎಕ್ಸಿಟ್?
ಒಂದೊಮ್ಮೆ ಮೂವರು ಹೋದರೆ ಸ್ಪರ್ಧಿಗಳ ಸಂಖ್ಯೆ 11 ಆಗಲಿದೆ. ‘ಬಿಗ್ ಬಾಸ್’ನಲ್ಲಿ ಎಮರ್ಜೆನ್ಸಿ ಎಕ್ಸಿಟ್ ಜೊತೆ, ಎಮರ್ಜೆನ್ಸಿ ಎಂಟ್ರಿ ಕೂಡ ಇದೆ ಎಂದು ಹೇಳಲಾಗುತ್ತಾ ಇದೆ. ಹೌದು, ದೊಡ್ಮನೆಗೆ ಕೆಲ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಮಾಡಲಿದ್ದಾರಂತೆ.