ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಯಾರೂ ಕೂಡ ಕ್ಯಾಪ್ಟನ್ ಆಗಲು ಅರ್ಹರಲ್ಲ : ಸ್ಪರ್ಧಿಗಳಿಗೆ ಛೀಮಾರಿ ಹಾಕಿದ ಬಿಗ್ ಬಾಸ್

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ಸ್ಪರ್ಧಿಗಳಲ್ಲಿ ರೂಲ್ಸ್‌ ಹಾಗೂ ಆಟದ ಬಗ್ಗೆ ಸೀರಿಯೆಸ್‌ನೆಸ್‌ ಇಲ್ಲವಾಗಿದೆ. ಆದ್ದರಿಂದ ಕ್ಯಾಪ್ಟೆನ್ಸಿ ಟಾಸ್ಕ್ (Captaincy Task) ರದ್ದು ಮಾಡಲಾಗಿದೆ. ಬಿಗ್ ಬಾಸ್ ನಿಯಮಗಳಿಗೆ ಸ್ಪರ್ಧಿಗಳು ಸರಿಯಾಗಿ ಗೌರವ ನೀಡಿಲ್ಲ ಎಂಬುದನ್ನು ನೇರವಾಗಿಯೇ ಹೇಳಲಾಗಿದೆ. ನೀವು ಯಾರೂ ಈ ಟಾಸ್ಕ್‌ಗೆ ಅರ್ಹರಲ್ಲ ಎಂದು ನೇರವಾಗಿ ಹೇಳಿದ್ದಾರೆ ಬಿಗ್‌ ಬಾಸ್‌.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ಸ್ಪರ್ಧಿಗಳಲ್ಲಿ ರೂಲ್ಸ್‌ ಹಾಗೂ ಆಟದ ಬಗ್ಗೆ ಸೀರಿಯೆಸ್‌ನೆಸ್‌ ಇಲ್ಲವಾಗಿದೆ. ಆದ್ದರಿಂದ ಕ್ಯಾಪ್ಟೆನ್ಸಿ ಟಾಸ್ಕ್ (Captaincy Task) ರದ್ದು ಮಾಡಲಾಗಿದೆ. ಬಿಗ್ ಬಾಸ್ ನಿಯಮಗಳಿಗೆ ಸ್ಪರ್ಧಿಗಳು ಸರಿಯಾಗಿ ಗೌರವ ನೀಡಿಲ್ಲ ಎಂಬುದನ್ನು ನೇರವಾಗಿಯೇ ಹೇಳಲಾಗಿದೆ. ನೀವು ಯಾರೂ ಈ ಟಾಸ್ಕ್‌ಗೆ ಅರ್ಹರಲ್ಲ ಎಂದು ನೇರವಾಗಿ ಹೇಳಿದ್ದಾರೆ ಬಿಗ್‌ ಬಾಸ್‌.

ಸಾಕಷ್ಟು ಗೊಂದಲ

‘ಹೊಸಬೆಳಕು’ ಎಂಬ ಟಾಸ್ಕ್ ಕ್ಯಾಪ್ಟನ್ಸಿಗೆ ಕೊಡಲಾಗಿತ್ತು. ಮಂಜ ಅವರು ಓದಿ ಹೇಳಿದರು. ಆದರೆ ಟಾಸ್ಕ್ ಆರಂಭ ಆದ ಬಳಿಕ ಸಾಕಷ್ಟು ಗೊಂದಲಗಳು ಎದುರಾದವು. ಯಾರಿಗೂ ಈ ಆಟದ ನಿಯಮ ಅರ್ಥವೇ ಆಗಿಲ್ಲ. ಲಿಖಿತ್ ಮತ್ತು ಮಂಜ ಅವರು ಈ ಟಾಸ್ಕ್ ಉಸ್ತುವಾರಿ ವಹಿಸಿದ್ದರು. ಎರಡು ತಂಡಗಳ ನಾಯಕತ್ವವನ್ನು ಗಾನವಿ ಮತ್ತು ಪ್ರಶಾಂತ್ ವಹಿಸಿಕೊಂಡಿದ್ದರು. ಸೋನಿಕಾ , ಕಿರಣ್‌ ಒಂದು ತಂಡ, ಆಸಿಯಾ ಧನು ಇನ್ನೊಂದು ತಂಡದಲ್ಲಿ ಇದ್ದರು.

ಇದನ್ನೂ ಓದಿ: Bigg Boss Kannada 13: ಆಸಿಯಾ ಸ್ನೇಹದಲ್ಲಿ ಲಾಭವನ್ನು ನೋಡುತ್ತಾರೆ! ತಾಂಡವ್‌ ನೇರ ಮಾತು



ಆದರೆ ಟಾಸ್ಕ್‌ ಕಂಪ್ಲೀಟ್‌ ಆಗಿದ್ದರೂ ಉಸ್ತುವಾರಿಗಳಿಗೆ ಯಾರು ವಿನ್‌ ಅಂತ ಘೋಷಣೆ ಮಾತ್ರ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಬಿಗ್‌ ಬಾಸ್‌ ಮಧ್ಯ ಪ್ರವೇಶಿಸಿದರು. ಮಂಜುನಾಥ್ ಹಾಗೂ ಲಿಖಿತ್ ಅವರಿಗೆ ಈ ಟಾಸ್ಕ್ ಸರಿಯಾಗಿ ಅರ್ಥ ಆಗಿತ್ತಾ? ಟಾಸ್ಕ್ ಪತ್ರ ಓದಿದ ಮಂಜ ಅವರಿಗೆ ಟಾಸ್ಕ್ ಅರ್ಥ ಆಗಿರಲಿಲ್ಲವೇ? ಗಾನವಿ ಹಾಗೂ ಹೈಜಾಕರ್ ಪ್ರಶಾಂತ್ ಕೂಡ ತಂಡದ ನಾಯಕರಾಗಿ ಟಾಸ್ಕ್ ಏನು ಎಂಬುದನ್ನು ಸರಿಯಾಗಿ ಕೇಳಿಸಿಕೊಂಡಿಲ್ಲವೇ? ಎಂದು ಬಿಗ್ ಬಾಸ್ ಪ್ರಶ್ನಿಸಿದರು.

ನೀವು ಯಾರೂ ಅರ್ಹರಲ್ಲ

ಆಟದ ನಿಯಮದ ಬಗ್ಗೆ ಸ್ಪರ್ಧಿಗಳಿಗೆ ಗೌರವ ಇಲ್ಲ ಎಂಬುದು ಸ್ಪಷ್ಟವಾಗಿದೆ. ಈ ಟಾಸ್ಕ್ ನಡೆಯಬೇಕಾದ ರೀತಿಯಲ್ಲಿ ನಡೆದಿಲ್ಲ. ಹಾಗಾಗಿ ಟಾಸ್ಕ್ ರದ್ದು ಮಾಡಲಾಗಿದೆ. ಯಾರೂ ಕೂಡ ಕ್ಯಾಪ್ಟನ್ ಆಗಲು ಸಾಧ್ಯವಿಲ್ಲ. ನೀವು ಯಾರೂ ಅರ್ಹರಲ್ಲ’ ಎಂದು ಬಿಗ್ ಬಾಸ್ ಹೇಳಿದರು.

ಇದನ್ನೂ ಓದಿ: Bigg Boss Kannada 13: ಗಗನ್ ಶರ್ಟ್‌ ತೆಗೆದ್ರೆ ಪ್ರಶಾಂತ್ ಬೇರೇನೋ ತೆಗಿತಾರಂತೆ! ಬಿದ್ದು ಬಿದ್ದು ನಕ್ಕ ಸೋನಿಕಾ

ಇನ್ನು ತಮ್ಮ ತಪ್ಪಿನ ಅರಿವಾಗಿ ಮಂಜ ಹಾಗೂ ಲಿಖಿತ್‌ ತಮ್ಮಲ್ಲಿಯೇ ಮಾತನಾಡಿಕೊಂಡರು. ‘ಈ ವಾರ ಚಪ್ಪಾಳೆ ಅಲ್ಲ, ಚಪ್ಪಲಿ ಏಟು’ ಎಂದರು ಲಿಖಿತ್. ‘ಈ ವಾರ ಧ್ವಂಸ ಅಲ್ಲ, ಗುಡ್ಡೆ ಮಾಂಸ’ ಎಂದರು ಮಂಜು. ಬಿಗ್ ಬಾಸ್ 13ನೇ ಸೀಸನ್ ಅಲ್ಲಿ ಪ್ರತಿ ವಾರ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

Yashaswi Devadiga

View all posts by this author