ಬಿಗ್ ಬಾಸ್ ಕನ್ನಡ (bigg Boss Kannada 13) ಶುರುವಾಗಿದೆ. ಮೊದಲ ದಿನವೇ ಜಗಳ ಉಂಟಾಗಿದೆ. ಕಾಮನರ್ ಮತ್ತು ಸೆಲೆಬ್ರಿಟಿಗಳು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಸೆಲೆಬ್ರಿಟಿಗಳಿಗಿಂತ ಕಾಮನರ್ ಸ್ಪರ್ಧಿಗಳೇ ಹೆಚ್ಚಾಗಿ ಸದ್ದು ಮಾಡುತ್ತಿದ್ದಾರೆ. ಮೊದಲ ದಿನದಂದಲೂ ಫ್ರಥಮಾ ಕಳೆದ ಒಂದು ದಿನದಲ್ಲಿ ಸ್ಪರ್ಧಿಗಳ ನಡುವೆ ನಡೆದ ಮಾತುಕತೆ, ಗಾಸಿಪ್ಗಳನ್ನು ನೋಡಿದರೆ ಈ ಬಾರಿ ಸಾಮಾನ್ಯ vs ಸೆಲೆಬ್ರಿಟಿ ಆಗಲಿದೆಯಾ ಎಂಬ ಅನುಮಾನ ಮೂಡುತ್ತಿದೆ. ಡೈಮಂಡ್ ಹುಡುಕಾಟದ ಟಾಸ್ಕ್‌ನಲ್ಲಿ (Diamond Task), ಗಗನ್ ಚಿನ್ನಪ್ಪ ತಮ್ಮ ಬಳಿಯಿದ್ದ ಡೈಮಂಡ್ ಅನ್ನು ಮುಚ್ಚಿಟ್ಟು ಆಸಿಯಾ ಮೇಲೆ ಅನುಮಾನ ಬರುವಂತೆ ಮಾಡುತ್ತಾರೆ. ಇದರಿಂದ ಕೋಪಗೊಂಡ ಆಸಿಯಾ, ತನ್ನನ್ನು ಗಗನ್ ಮತ್ತು ತಾಂಡವ್ ರಾಮ್ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಏನಿದು ಟಾಸ್ಕ್?
ಬಿಗ್ ಬಾಸ್ ಮನೆಯ ಸದಸ್ಯರಿಗೆ ಒಂದು ಟಾಸ್ಕ್ ನೀಡಲಾಗಿದೆ. ಬಾಕ್ಸ್ ಒಂದನ್ನ ನೀಡಲಾಗಿದ್ದು, ಅದರಲ್ಲಿ ಡೈಮಂಡ್ ಮತ್ತು ನೇರವಾಗಿ ನಾಮಿನೇಟ್ ಆಗುವ ಬಿಗ್ ಸೀಕ್ರೆಟ್‌ನ್ನ ಬಚ್ಚಿಡಲಾಗಿದೆ. ಈ ಟಾಸ್ಕ್‌ನಲ್ಲಿ ಯಾರು ಚಾಣಕ್ಷತನ ತೋರುತ್ತಾರೋ ಅವರಿಗೆ ದೊಡ್ಡ ಅಡ್ವಾಂಟೆಜ್ ಕೂಡ ಸಿಗಲಿದೆ.
“ಒಬ್ಬ ಸದಸ್ಯರ ಬಾಕ್ಸ್‌ನಲ್ಲಿ ವಜ್ರ ಇರುತ್ತದೆ. ಆ ವಜ್ರ ಇರುವ ಬಾಕ್ಸ್‌ನ್ನ ಕಾಪಾಡಿಕೊಳ್ಳಬೇಕು”. ವಜ್ರ ತಮ್ಮ ಹತ್ತಿರ ಇರುವ ಬಗ್ಗೆ ಯಾರ ಬಳಿಯೂ ಸೀಕ್ರೆಟ್ ಬಿಟ್ಟುಕೊಡುವಂತಿಲ್ಲ. “ಒಂದು ವೇಳೆ ವಜ್ರ ಇರುವ ಬಾಕ್ಸ್‌ನ ಸೀಕ್ರೆಟ್ ಹೊರಬಂದರೇ ಆ ಬಾಕ್ಸ್‌ನ ಮಾಲೀಕ ನೇರವಾಗಿ ನಾಮಿನೇಷನ್ ಪಟ್ಟಿಯನ್ನು ಸೇರಿಕೊಳ್ಳುತ್ತಾರೆ”.
ಇದನ್ನೂ ಓದಿ: Bigg Boss Kannada 13: ಮಂಜನಿಗೆ ಕಚಡ, ಹಂದಿ ಎಂದ ಕಿರಣ್ ಶಾಸ್ತ್ರಿ; ಕೊನೆಗೆ ಗೋಳೋ ಅಂತ ಅತ್ತ ಸ್ಪರ್ಧಿ
ನಟ ಗಗನ್ ಚಿನ್ನಪ್ಪ ಅವರಿಗೆ ಡೈಮಂಡ್ ಇರುವ ಬಾಕ್ಸ್ ಸಿಕ್ಕಿದೆ. ಆದರೆ, ಈ ಗುಟ್ಟನ್ನ ಅವರು ಕಾಪಾಡಿಕೊಳ್ಳಬೇಕು ತಮ್ಮ ಬಳಿ ಯಾವ ಡೈಮಂಡ್ ಇಲ್ಲ ಎನ್ನುವಂತೆ ಹೇಳಿಕೊಳ್ಳುತ್ತಿದ್ದಾರೆ. ಗಗನ್ ಚಿನ್ನಪ್ಪ ತಮ್ಮ ಬಳಿಯಿದ್ದ ಡೈಮಂಡ್ ಅನ್ನು ಮುಚ್ಚಿಟ್ಟು ಆಸಿಯಾ ಮೇಲೆ ಅನುಮಾನ ಬರುವಂತೆ ಮಾಡುತ್ತಾರೆ.
ಗಗನ್ ಚಿನ್ನಪ್ಪ ತಮ್ಮ ಮೇಲೆ ಅನುಮಾನ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಆಸಿಯಾ ಮೇಲೆ ಅನುಮಾನ ಮೂಡುವಂತೆ ಗಗನ್ ಮಾಡಿದ್ದು, ಇದರಿಂದ ಮನೆಯಲ್ಲಿ ಜಗಳ ಶುರುವಾಗಿದೆ. ನನ್ನ ಬ್ರೀಫ್‌ಕೇಸ್ ಖಾಲಿ ಅಂತ ಆಸಿಯಾ ಹೇಳಿದ್ರೂ ಯಾರು ನಂಬುತ್ತಿಲ್ಲ.
ಇದನ್ನೂ ಓದಿ: Amruthadhaare Serial: ಅಮೃತಧಾರೆಯ ಹೊಸ ಅಧ್ಯಾಯ! ಭೂಮಿಕಾ ಬದುಕಿನ ಹಾದಿಗೆ ಬಿಗ್ ಟ್ವಿಸ್ಟ್
ಟ್ರಿಗರ್ ಆಗಿರೋ ಆಸಿಯಾ ಫಿರ್ದೋಸ್, ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಿಮ್ಮನ್ನು ಯಾರೂ ಟಾರ್ಗೆಟ್ ಮಾಡಿಲ್ಲ ಎಂದು ಗಗನ್ ಮತ್ತು ಕಾವ್ಯಾ ಗೌಡ ಹೇಳಿದ್ದಾರೆ. ಇನ್ನು ಗಗನ್ ಕೂಡ ತಾಂಡವ್ ಬಳಿ ಶಕ್ತಿಯಿಂದಲ್ಲ, ಯುಕ್ತಿಯಿಂದ ಆಡಬೇಕು ಎಂದಿದ್ದಾರೆ.