‘ಬಿಗ್ ಬಾಸ್ ಕನ್ನಡ’ ಸೀಸನ್ 13 (Bigg Boss Kannada 13) ಅದ್ದೂರಿಯಾಗಿ ಆರಂಭವಾಗುವ ಮುನ್ನವೇ ಸಖತ್ ಸರ್‌ಪ್ರೈಸ್ ಕೊಟ್ಟಿದೆ ವಾಹಿನಿ. ಸಂಗೀತಾ ಭಟ್ (Sangeetha Bhat) ಹಾಗೂ ಕಾವ್ಯಾ ಗೌಡ ಸ್ಪರ್ಧಿಗಳಾಗಿ ಪ್ರವೇಶ ಪಡೆದಿದ್ದಾರೆ. ಇದರ ಬೆನ್ನಲ್ಲೇ ಹೊಸ ಪ್ರೋಮೋ ಔಟ್ ಆಗಿದೆ. ಹೌದು ಕನ್ನಡ ಚಿತ್ರರಂಗದ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಓಂ ಪ್ರಕಾಶ್ (Om Prakash) ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ ಬಾಸ್‌ಗೇ ಕೌಂಟರ್
ಕೆಲವರು ಬರ್ತಾರೆ, ಹೋಗ್ತಾರೆ ಗೊತ್ತೇ ಆಗಲ್ಲ.20-20 ಮ್ಯಾಚ್ ಥರ ಅಂತ ಸುದೀಪ್ ಓಂ ಪ್ರಕಾಶ್ ಅವರ ಟ್ರೋಲ್ ವಿಡಿಯೋ ಪ್ಲೇ ಮಾಡಿಸಿದ್ದಾರೆ. ತಲೆಯನ್ನ ಪರಪರ ಕೆದರಿಕೊಳ್ಳೋ ವಿಡಿಯೋ ಪ್ಲೇ ಆಗಿದೆ. ಆಗ ಓಂ ಪ್ರಕಾಶ್ ಈ ಬಗ್ಗೆ ಮಾತನಾಡಿ, `ಏನಾದರೂ ಸಣ್ಣ ಸಮಸ್ಯೆ ಆದ್ರೆ ನಂಗೆ ಆಗಲ್ಲ. ಆಗ ಹೀಗೆ ಮಾಡ್ತೇನೆ' ಎಂದಿದ್ದಾರೆ. `ತಲೆ ಕೆರೆದುಕೊಂಡ್ರೆ ನನಗೆ ನೆಮ್ಮದಿ' ಎಂದಿದ್ದಾರೆ. `ಹಾಗಾದ್ರೆ ಶನಿವಾರ ಮಾತುಕತೆಗೆ ನೀವು ಪರ ಪರ ಕೆರೆದುಕೊಳ್ಳೋದು ಗ್ಯಾರಂಟಿ' ಎಂದಿದ್ದಾರೆ ಸುದೀಪ್.
ಬಿಗ್ ಬಾಸ್ ಮನೆಯೊಳಗೆ ಬಂದ ಮೇಲೆ ಎಷ್ಟು Beeps ಬರಬಹುದು? ಎಂದಿದ್ದಾರೆ ಸುದೀಪ್. ಅದಕ್ಕೆ ಓಂ ಪ್ರಕಾಶ್ ಇದ್ದವರು `ಹಾಕವರ ಮೇಲೆ ಡಿಪೆಂಡ್' ಅಂದಿದ್ದಾರೆ. ಅದೆಲ್ಲ ಕೇಳಿ ಕನ್ನಡಿಗರು ಬಿಟ್ಟರೆ ಅವರ ದೊಡ್ಡತನ ಎಂದಿದ್ದಾರೆ. ಒಟ್ಟಾರೆಯಾಗಿ ಈಗ ಪ್ರೋಮೋ ನೋಡಿ ಸಖತ್ ಥ್ರಿಲ್ ಆಗಿದ್ದಾರೆ ವೀಕ್ಷಕರು. ಇಂದು (ಸೆ.6) ಸಂಜೆ ಬಿಗ್ ಬಾಸ್ ಸೀಸನ್ 13 ಅಧಿಕೃತವಾಗಿ ಅದ್ದೂರಿಯಾಗಿ ಆರಂಭವಾಗಲಿದ್ದು ವೀಕ್ಷಕರಲ್ಲಿ ಕುತೂಹಲ ಮೂಡಿದೆ.
ಇದಕ್ಕೂ ಮುಂಚೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಒಳ್ಳೆ ಹುಡುಗ ಪ್ರಥಮ್ ಪೋಸ್ಟ್ ಮೂಲಕ ಸುಳಿವು ನೀಡಿದ್ದರು.
ಬಿಗ್ಬಾಸ್!
ಯಾರು ನಿರೀಕ್ಷೆಯೇ ಮಾಡಿರದ surprising ವ್ಯಕ್ತಿ ಒಬ್ರು ಈಸಲ ಬಿಗ್ಬಾಸ್ ಗೆ ಬರ್ತಾ ಇದ್ದಾರೆ!!ಈಗಾಗಲೇ ಬಿಗ್ಬಾಸ್ ಮನೇಲಿ ಇದ್ದಾರೆ. ಯಾರಿರಬಹುದು ಗೆಸ್ ಮಾಡಿ! But ಅವ್ರನ್ನ ನೀವು guess ಮಾಡಿರೋಕೂ ಸಾಧ್ಯವಿಲ್ಲ! Hint ಬೇಕಾ?ಒಂತರಾ ವಿಚಿತ್ರ character... 2nd clue..:- ನನ್ನ ಅತ್ಯಂತ ಆಪ್ತರು! ಎಂದು ಬರೆದುಕೊಂಡಿದ್ದರು. ಇದೀಗ ಈ ಪ್ರೋಮೋ ನೋಡಿ ಓಂ ಪ್ರಕಾಶ್ ಅಂತಿದ್ದಾರೆ ನೆಟ್ಟಿಗರು.
ಇದನ್ನೂ ಓದಿ: Bigg Boss Kannada 13: ʻಅಗ್ನಿಪರೀಕ್ಷೆ’ ಇಂದ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟವರು ಇವರೇ?
ಓಂ ಪ್ರಕಾಶ್ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ,ನಿರ್ಮಾಪಕ ಮತ್ತು ನಟ. ನಿರ್ದೇಶಕನಾಗಿ ಸುಮಾರು 30 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ.